ಪುಣೆಗೆ ಹೀನಾಯವಾಗಿ ಶರಣಾದ ಆರ್'ಸಿಬಿ

Published : Apr 29, 2017, 02:49 PM ISTUpdated : Apr 11, 2018, 12:38 PM IST
ಪುಣೆಗೆ ಹೀನಾಯವಾಗಿ ಶರಣಾದ ಆರ್'ಸಿಬಿ

ಸಾರಾಂಶ

ಆರ್'ಸಿಬಿಯೆದುರು ಸಂಘಟಿತ ಬೌಲಿಂಗ್ ತೋರಿದ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ಕೊಹ್ಲಿ ಪಡೆಯನ್ನು ಕೇವಲ 96ರನ್'ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.

ಪುಣೆ(ಏ.29): ನಾಯಕ ವಿರಾಟ್ ಕೊಹ್ಲಿ(55)ಯ ಏಕಾಂಗಿ ಹೋರಾಟದ ನಡುವೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೈಸಿಂಗ್ ಪುಣೆ ಸೂಪರ್'ಜೈಂಟ್ ವಿರುದ್ಧ 61ರನ್'ಗಳ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನ ಮೂಲಕ ಆರ್'ಸಿಬಿಯ ಪ್ಲೇ-ಆಫ್ ಪ್ರವೇಶಿಸುವ ಕನಸು ಬಹುತೇಕ ಭಗ್ನವಾದಂತಾಗಿದೆ.

ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡ ವಿರಾಟ್ ಕೊಹ್ಲಿ, ರೈಸಿಂಗ್ ಪುಣೆ ಸೂಪರ್'ಜೈಂಟ್ ತಂಡವನ್ನು ಆದಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ನಿರೀಕ್ಷೆಯಲ್ಲಿದ್ದರು. ಆದರೆ ಪುಣೆ ಬ್ಯಾಟ್ಸ್'ಮನ್'ಗಳ ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ 157ರನ್'ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪುಣೆ ನೀಡಿದ ಗುರಿಗೆ ಪ್ರತಿಯಾಗಿ ಆರ್'ಸಿಬಿ ಕಲೆಹಾಕಿದ್ದು ಕೇವಲ 96ರನ್ ಮಾತ್ರ.

ಪುಣೆ ನೀಡಿದ ಗುರಿಬೆನ್ನತ್ತಿದ ಆರ್'ಸಿಬಿ ಮತ್ತೆ ಆರಂಭದಲ್ಲೇ ಮುಗ್ಗರಿಸಿತು. ಆರಂಭಿನಾಗಿ ಭಡ್ತಿ ಪಡೆದ ತ್ರಾವಿಸ್ ಹೆಡ್ 2 ರನ್'ಗೆ ವಿಕೆಟ್ ಒಪ್ಪಿಸಿದರೆ, ನಂಬಿಕಸ್ತ ಬ್ಯಾಟ್ಸ್'ಮನ್ ಎಬಿ ಡಿವಿಲಿಯರ್ಸ್ ಆಟ ಕೇವಲ 3 ರನ್'ಗಳಿಗೆ ಸೀಮಿತವಾಯಿತು. ನಾಯಕ ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್'ಮನ್ ಪೆವಿಲಿಯನ್ ಪರೇಡ್ ನಡೆಸಿದರು. ಒಂದುವೇಳೆ ಕೊಹ್ಲಿ ಇಂದು ಅರ್ಧಶತಕ ದಾಖಲಿಸದಿದ್ದರೆ, ಈಡನ್ ಗಾರ್ಡನ್'ನಲ್ಲಿ ಆರ್'ಸಿಬಿ ತೋರಿದ ಪ್ರದರ್ಶನಕ್ಕಿಂತ ಹೀನಾಯವಾಗಿರುತ್ತಿತ್ತು. ಕೊಹ್ಲಿ ಐಪಿಎಲ್'ನಲ್ಲಿ 29ನೇ ಅರ್ಧಶತಕ ದಾಖಲಿಸಿ ಆರ್'ಸಿಬಿ ಅಲ್ಪಮೊತ್ತಕ್ಕೆ ಕುಸಿದು ನಗೆಪಾಟಲಿಗೀಡಾಗದಂತೆ ತಡೆಯುವಲ್ಲಿ ಯಶಸ್ವಿಯಾದರು.

ಆರ್'ಸಿಬಿಯೆದುರು ಸಂಘಟಿತ ಬೌಲಿಂಗ್ ತೋರಿದ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ಕೊಹ್ಲಿ ಪಡೆಯನ್ನು ಕೇವಲ 96ರನ್'ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಪುಣೆ ಪರ ಇಮ್ರಾನ್ ತಾಹಿರ್ 3 ವಿಕೆಟ್ ಪಡೆದರೆ, ಲೂಕ್ ಪರ್ಗ್ಯೂಸನ್ 2 ವಿಕೆಟ್ ಪಡೆದು ಮಿಂಚಿದರು.  

ಸಂಕ್ಷಿಪ್ತ ಸ್ಕೋರ್:

ರೈಸಿಂಗ್ ಪುಣೆ ಸೂಪರ್'ಜೈಂಟ್ಸ್: 157/3

ಸ್ಟೀವ್ ಸ್ಮಿತ್: 45

ಮನೋಜ್ ತಿವಾರಿ : 44

ಸ್ಟುವರ್ಟ್ ಬಿನ್ನಿ: 17/1

ರಾಯಲ್ ಚಾಲೆಂಜರ್ಸ್ ಬೆಂಗಳೂರು: 96/9

ವಿರಾಟ್ ಕೊಹ್ಲಿ :55

ಎಸ್. ಅರವಿಂದ್ ; 8*

ಇಮ್ರಾನ್ ತಾಹಿರ್ : 18/3

ಪಂದ್ಯಪುರುಷೋತ್ತಮ : ಲ್ಯೂಕ್ ಫರ್ಗ್ಯೂಸನ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?