ಭಾರತ ಎ ತಂಡಕ್ಕೆ ಕೆ.ಎಲ್.ರಾಹುಲ್‌ ನಾಯಕ- ರಹಾನೆಗೆ ರೆಸ್ಟ್ ಆಫ್ ಇಂಡಿಯಾ ಪಟ್ಟ

By Web DeskFirst Published Feb 8, 2019, 10:28 AM IST
Highlights

ಇಂಗ್ಲೆಂಡ್ ಲಯನ್ಸ್  ವಿರುದ್ಧದ ಭಾರತ ಎ ತಂಡಕ್ಕೆ ಕೆ.ಎಲ್.ರಾಹುಲ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ರೆಸ್ಟ್ ಆಫ್ ಇಂಡಿಯಾ ತಂಡಕ್ಕೆ ಅಜಿಂಕ್ಯ ರಹಾನೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇಲ್ಲಿದೆ ಭಾರತ ಎ ಹಾಗೂ ರೆಸ್ಟ್ ಆಫ್ ಇಂಡಿಯಾ ತಂಡದ ವಿವರ.

ಮುಂಬೈ(ಫೆ.08): ಇರಾನಿ ಟ್ರೋಫಿಗಾಗಿ  ರೆಸ್ಟ್ ಆಫ್ ಇಂಡಿಯಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಭಾರತ ಎ ತಂಡವನ್ನ ಮುನ್ನಡೆಸುತ್ತಿದ್ದ ಅಜಿಂಕ್ಯ ರಹಾನೆಗೆ ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕತ್ವ ನೀಡಲಾಗಿದೆ. ಹೀಗಾಗಿ ಸದ್ಯ ಭಾರತ ಎ ತಂಡದ ನಾಯಕತ್ವವನ್ನು ಕನ್ನಡಿಗ ಕೆ.ಎಲ್.ರಾಹುಲ್‌ಗೆ ನೀಡಲಾಗಿದೆ.

ರಣಜಿ ಟ್ರೋಫಿಯಲ್ಲಿ ವಿದರ್ಭ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಹಾನೆ ನಾಯಕತ್ವದ ರೆಸ್ಟ್ ಆಫ್ ಇಂಡಿಯಾ ತಂಡ, ಫೆಬ್ರವರಿ 12 ರಿಂದ ವಿದರ್ಭ ವಿರುದ್ಧ ಇರಾನಿ ಟ್ರೋಫಿ ಆಡಲಿದೆ. ಇತ್ತ ರಾಹುಲ್ ನಾಯಕತ್ವದ ಭಾರತ ಎ ತಂಡ, ಇಂಗ್ಲೆಂಡ್ ಲಯನ್ಸ್ ವಿರುದ್ಧ 4 ದಿನಗಳ ಟೆಸ್ಟ್ ಪಂದ್ಯ ಆಡಲಿದೆ.

ಭಾರತ ಎ ತಂಡ:
ಕೆ.ಎಲ್.ರಾಹುಲ್(ನಾಯಕ), ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಾಲ್, ಅಂಕಿತ್ ಭಾವ್ನೆ, ಕರುಣ್ ನಾಯರ್, ರಿಕಿ ಭುಯಿ, ಸಿದ್ದೇಶ್ ಲಾಡ್, ಕೆ.ಎಸ್.ಭರತ್, ಶಹಭಾಝ್ ನದೀಮ್, ಜಲಜ್ ಸಕ್ಸೇನಾ, ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ವರಣ್ ಆರೋನ್

ರೆಸ್ಟ್ ಆಫ್ ಇಂಡಿಯಾ:
ಅಜಿಂಕ್ಯ ರಹಾನೆ(ನಾಯಕ), ಮಯಾಂಕ್ ಅಗರ್ವಾಲ್, ಅನ್ಮೋಲ್‌ಪ್ರೀತ್ ಸಿಂಗ್, ಹನುಮಾ ವಿಹಾರಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆ.ಗೌತಮ್, ಧರ್ಮೇಂದ್ರಸಿನ್ ಜಡೇಜಾ, ರಾಹುಲ್ ಚಹಾಲ್, ಅಕಿಂತ್ ರಜಪೂತ್, ತನ್ವೀರ್ ಉಲ್ ಹಕ್, ರೋನಿತ್ ಮೊರೆ, ಸಂದೀಪ್ ವಾರಿಯರ್, ರಿಂಕು ಸಿಂಗ್, ಸ್ನೆಲ್ ಪಟೇಲ್

click me!