
ನವದೆಹಲಿ(ಫೆ.08): ಭಾರತ ತಂಡದ ಯುವ ಬ್ಯಾಟ್ಸ್‌ಮನ್‌ಗಳಾದ ಪೃಥ್ವಿ ಶಾ ಮತ್ತು ಶುಭ್‌ಮನ್ ಗಿಲ್ ಅಗಾಧ ಸಾಮರ್ಥ್ಯ ಹೊಂದಿದ್ದಾರೆ. ಇಬ್ಬರೂ ಕ್ರಿಕೆಟ್ ಆಟವನ್ನು ಆನಂದಿಸಬೇಕು ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಕಿವಿ ಮಾತು ಹೇಳಿದ್ದಾರೆ.
ಇದನ್ನೂ ಓದಿ: ಮಾಜಿ ಕ್ರಿಕೆಟಿಗನ ಚಿಕಿತ್ಸೆಗೆ ನೆರವಾದ ಕೆ.ಎಲ್.ರಾಹುಲ್!
ಇಬ್ಬರ ಪ್ರತಿಭೆಯನ್ನು ಕೊಂಡಾಡಿರುವ ಸಚಿನ್, ‘ಪೃಥ್ವಿಗೆ 8-9 ವಯಸ್ಸಿದ್ದಾಗ ಆತ ಬ್ಯಾಟ್ ಮಾಡುವುದನ್ನು ನೋಡಿದೆ. ಆತ ಒಂದು ದಿನ ಭಾರತ ತಂಡಕ್ಕೆ ಆಡುತ್ತಾನೆ ಎಂದು ಆಗಲೇ ಭವಿಷ್ಯ ನುಡಿದಿದ್ದೆ. ಶುಭ್‌ಮನ್ ಸಹ ದೇಸಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಇಬ್ಬರೂ ಈಗಾಗಲೇ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ಪಿನ್ನರ್ ಚಹಲ್ ಕಾಲೆಳೆದ ಮಹಿಳಾ ಕ್ರಿಕೆಟರ್ ಸ್ಮೃತಿ
ಈ ಹಿಂದೆ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕುರಿತು ಭವಿಷ್ಯ ನುಡಿದಿದ್ದರು. ನನ್ನ ದಾಖಲೆ ಮುರಿಯುವ ಸಾಮರ್ಥ್ಯ ಕೊಹ್ಲಿ ಹಾಗೂ ರೋಹಿತ್‌ಗೆ ಇದೆ ಎಂದಿದ್ದರು. ಇದೇ ರೀತಿ ಈ ಇಬ್ಬರೂ ಕ್ರಿಕೆಟಿಗರು ಸಚಿನ್ ತೆಂಡೂಲ್ಕರ್ ಹಲವು ದಾಖಲೆ ಮುರಿದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.