ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಆಡುವೆ ಎಂದ ರಾಹುಲ್

By Web Desk  |  First Published May 18, 2019, 12:03 PM IST

ಮೀಸಲು ಆರಂಭಿಕನಾಗಿ ಸ್ಥಾನ ಪಡೆದಿರುವ ರಾಹುಲ್‌, ಪ್ರತಿಯೊಂದು ಸವಾಲಿಗೂ ತಾವು ಸಿದ್ಧರಿರುವುದಾಗಿ ಹೇಳಿಕೊಂಡಿದ್ದಾರೆ. ನಾನು ತಂಡದ ಭಾಗವಾಗಿದ್ದು, ತಂಡ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಕೆ.ಎಲ್ ರಾಹುಲ್ ಹೇಳಿದ್ದಾರೆ.


ನವದೆಹಲಿ(ಮೇ.18): ಐಸಿಸಿ ಏಕದಿನ ವಿಶ್ವಕಪ್‌ಗೆ ಆಯ್ಕೆಯಾಗಿರುವ ಕರ್ನಾಟಕದ ಕೆ.ಎಲ್‌.ರಾಹುಲ್‌, ಭಾರತ ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಆಡಲು ಸಿದ್ಧ ಎಂದಿದ್ದಾರೆ.

ಮೀಸಲು ಆರಂಭಿಕನಾಗಿ ಸ್ಥಾನ ಪಡೆದಿರುವ ರಾಹುಲ್‌, ಪ್ರತಿಯೊಂದು ಸವಾಲಿಗೂ ತಾವು ಸಿದ್ಧರಿರುವುದಾಗಿ ಹೇಳಿಕೊಂಡಿದ್ದಾರೆ. ನಾನು ತಂಡದ ಭಾಗವಾಗಿದ್ದು, ತಂಡ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ. ಕಳೆದ ಕೆಲ ತಿಂಗಳಿಂದ ಉತ್ತಮವಾಗಿ ಬ್ಯಾಟ್‌ ಮಾಡುತ್ತಿದ್ದೇನೆ. ಭಾರತ ‘ಎ’ ತಂಡದಲ್ಲಿ ಆಡಿದ ಅನುಭವ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಐಪಿಎಲ್‌ ಸಹ ವಿಶ್ವಕಪ್‌ ತಯಾರಿಗೆ ಉತ್ತಮ ವೇದಿಕೆಯಾಗಿದೆ’ ಎಂದು ರಾಹುಲ್‌ ಹೇಳಿದ್ದಾರೆ.

Tap to resize

Latest Videos

undefined

ಕೊಹ್ಲಿ ಜತೆ ಕನ್ನಡಿಗನನ್ನು ಹೋಲಿಸಿದ ಕ್ರಿಸ್ ಗೇಲ್..!

ಇತ್ತೀಚೆಗಷ್ಟೇ ಮುಕ್ತಾಯವಾದ 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ರಾಹುಲ್ ತಂಡದ ಪರ ಗರಿಷ್ಠ 593 ರನ್ ಬಾರಿಸಿದ ಸಾಧನೆ ಮಾಡಿದ್ದರು. ಇದರಲ್ಲಿ 1 ಶತಕ ಹಾಗೂ 6 ಅರ್ಧಶತಕಗಳು ಸೇರಿದ್ದವು.

click me!