
ಮುಂಬೈ(ಮೇ.18): ರಣಜಿ ಟ್ರೋಫಿ ಪಂದ್ಯಗಳಲ್ಲಿ ಡಿಆರ್‌ಎಸ್ ಅಳವಡಿಸಲು ರಾಜ್ಯ ಕ್ರಿಕೆಟ್ ತಂಡಗಳ ನಾಯಕರು ಹಾಗೂ ಕೋಚ್‌ಗಳು ಬಿಸಿಸಿಐಗೆ ಆಗ್ರಹಿಸಿದ್ದರೆ.
ಶುಕ್ರವಾರ ಇಲ್ಲಿ ನಡೆದ ಬಿಸಿಸಿಐ ವಾರ್ಷಿಕ ಸಮಾವೇಶದಲ್ಲಿ ಈ ವಿಚಾರ ಪ್ರಸ್ತಾಪಿಸಲಾಯಿತು. 2018-19ರ ಋುತುವಿನಲ್ಲಿ ಸಾಕಷ್ಟು ಕೆಟ್ಟಅಂಪೈರಿಂಗ್ ಪ್ರಸಂಗಗಳು ನಡೆದ ಕಾರಣ, ಮುಂದಿನ ಆವೃತ್ತಿಯಲ್ಲಿ ಅಂಪೈರಿಂಗ್ ಸಮಸ್ಯೆ ನಿಯಂತ್ರಿಸಲು ಡಿಆರ್‌ಎಸ್ ಅಳವಡಿಸಬೇಕು ಎಂದು ಕೇಳಿಕೊಳ್ಳಲಾಯಿತು.
ಇದೇ ವೇಳೆ ಟಾಸ್ ಗೆಲ್ಲುವ ತಂಡಕ್ಕೆ ಲಾಭ ತಪ್ಪಿಸಲು, ರಣಜಿ ಟ್ರೋಫಿಯಲ್ಲಿ ಟಾಸ್ ರದ್ದುಗೊಳಿಸುವ ಪ್ರಸ್ತಾಪವನ್ನು ಮಾಡಲಾಯಿತು. ಮೊದಲು ಬ್ಯಾಟಿಂಗ್ ಇಲ್ಲವೇ ಬೌಲಿಂಗ್ ಆಯ್ಕೆ ಮಾಡುವ ಅವಕಾಶವನ್ನು ಪ್ರವಾಸಿ ತಂಡದ ನಾಯಕನಿಗೆ ಬಿಡಬೇಕು ಎನ್ನುವ ಸಲಹೆ ಕೇಳಿಬಂತು. ಇದೇ ಮೊದಲ ಬಾರಿಗೆ ವಾರ್ಷಿಕ ಸಮಾವೇಶದಲ್ಲಿ ರಾಜ್ಯ ಮಹಿಳಾ ತಂಡದ ನಾಯಕಿ ಹಾಗೂ ಕೋಚ್‌ಗಳು ಸಹ ಪಾಲ್ಗೊಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.