2047ರ ವೇಳೆಗೆ ಒಲಿಂಪಿಕ್ಸ್ ನಲ್ಲಿ ವಿಶ್ವದ ಐದು ಬಲಿಷ್ಠ ರಾಷ್ಟ್ರಗಳಲ್ಲಿ ಭಾರತ ಒಂದಾಗಬೇಕು ಎಂದ ಅಮಿತ್ ಶಾ!

By Santosh Naik  |  First Published May 3, 2022, 10:34 PM IST

ಖೇಲೋ ಇಂಡಿಯಾ ವಿವಿ ಗೇಮ್ಸ್ ಗೆ ಮಂಗಳವಾರ ಬೆಂಗಳೂರಿನಲ್ಲಿ ತೆರೆ ಬಿದ್ದಿದೆ. ಸಮಾರೋಪ ಸಮಾರಂಭದಲ್ಲಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಫಲಿತಾಂಶ ದಾಖಲಿಸಿದ ಭಾರತದ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳನ್ನು ಸನ್ಮಾನ ಮಾಡಿದ್ದು ದಿನದ ಹೈಲೈಟ್ ಆಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಷಾ ಈ ತಂಡಗಳನ್ನು ಸನ್ಮಾನಿಸಿದರು.
 


ಬೆಂಗಳೂರು (ಮೇ.3): ಆಕರ್ಷಕ ಸಮಾರೋಪ ಸಮಾರಂಭವು (closing ceremony ) ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ರ (Khelo India University Games 2021) ಮತ್ತೊಂದು ಸ್ಮರಣೀಯ ಆವೃತ್ತಿಗೆ ತೆರೆ ಎಳೆದಿದೆ. ದೇಶದ ಯುವ ಹಾಗೂ ಮಹತ್ವಾಕಾಂಕ್ಷೆಯ ಕ್ರೀಡಾಪಟುಗಳು ತಮ್ಮ ವಿಶ್ವವಿದ್ಯಾಲಯಗಳಿಗೆ ಪ್ರಶಸ್ತಿಯನ್ನು ಗೆಲ್ಲುವ ನಿಟ್ಟಿನಲ್ಲಿ ಮಹತ್ವದ ವೇದಿಕೆಯಾಗಿ ಮಾರ್ಪಟ್ಟಿತು.

ಮಂಗಳವಾರ ಬೆಂಗಳೂರಿನ ಕಂಠೀರವ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister for Home Affairs Shri Amit Shah) ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಗೇಮ್ಸ್ ನಲ್ಲಿ 20 ಚಿನ್ನ, 7 ಬೆಳ್ಳಿ ಹಾಗು 5 ಕಂಚಿನ ಪದಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದ ಆತಿಥೇಯ ಜೈನ್ ವಿಶ್ವವಿದ್ಯಾಲಯ (Jain VV) ಸಮಗ್ರ ಚಾಂಪಿಯನ್ ಎನಿಸಿಕೊಂಡರೆ, ಪಂಜಾಬ್ ನ ಲವ್ಲಿ ಪ್ರೊಫೆಷನಲ್ ವಿವಿ, 17 ಚಿನ್ನ, 15 ಬೆಳ್ಳಿ ಹಾಗೂ 19 ಕಂಚಿನ ಪದಕದೊಂದಿಗೆ 2ನೇ ಸ್ಥಾನ ಪಡೆಯಿತು. ಹಾಲಿ ಚಾಂಪಿಯನ್ ಆಗಿದ್ದ ಪಂಜಾಬ್ ವಿವಿ, 15 ಚಿನ್ನ, 9 ಬೆಳ್ಳಿ ಹಾಗೂ 24 ಕಂಚಿನ ಪದಕದೊಂದಿಗೆ ಮೂರನೇ ಸ್ಥಾನ ಪಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, "ಕ್ರೀಡೆಗಳು ನಮ್ಮ ಜೀವನದ ಪ್ರಮುಖ ಅಂಶವಾಗಿದೆ ಎಂದು ನಾನು ಕ್ರೀಡಾಪಟುಗಳಿಗೆ ಹೇಳಲು ಬಯಸುತ್ತೇನೆ. ಕ್ರೀಡೆಯನ್ನು ಆಡುವವನಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಏಕೆಂದರೆ ಜೀವನದಲ್ಲಿ ಸೋಲನ್ನು ಸಹಿಸಿಕೊಳ್ಳುವ ಶಕ್ತಿ ಕ್ರೀಡೆಗಳು ನಮಗೆ ನೀಡುತ್ತವೆ. ಆಗ ಮಾತ್ರ ನೀವು ಗೆಲ್ಲುವ ಬಯಕೆಯನ್ನು ಬೆಳೆಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ನಮ್ಮ ಕ್ರೀಡಾಪಟುಗಳು ಒಲಿಂಪಿಕ್ಸ್ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ.  2047 ರ ವೇಳೆಗೆ ಭಾರತವು 100 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಮಯದಲ್ಲಿ ಭಾರತವು ಒಲಿಂಪಿಕ್ಸ್‌ನಲ್ಲಿ ಅಗ್ರ ಐದು ರಾಷ್ಟ್ರಗಳಲ್ಲಿ ಒಂದಾಗಿರಬೇಕು ಎಂದು ಪ್ರಧಾನಿ ಮೋದಿ ಬಯಸಿದ್ದು ಅದಕ್ಕಾಗಿಯೇ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಿದ್ದಾರೆ, ಎಂದು ಅಮಿತ್ ಶಾ ಹೇಳಿದರು.

ಖೇಲೋ ಇಂಡಿಯಾ ವಿಶ್ವವಿದ್ಯಾಲಯದ ಕ್ರೀಡಾಕೂಟದ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದ ದೇಶದ ಯುವ ಬ್ರಿಗೇಡ್‌ನ ಪ್ರದರ್ಶನಗಳನ್ನು ಗೌರವಿಸಿದ ಅವರು, “ನಾನು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ಅಲ್ಲಿ ಭಾಗವಹಿಸಿದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಭಾಗವಹಿಸಿದ ಕ್ರೀಡಾಪಟುಗಳನ್ನು ಅಭಿನಂದಿಸುತ್ತೇನೆ.  ಭಾಗವಹಿಸುವ ಎಲ್ಲಾ ಅಥ್ಲೀಟ್‌ಗಳು ಶ್ಲಾಘನೆಗೆ ಅರ್ಹರು. 2014 ರಿಂದ, ಪ್ರಧಾನಿ ನರೇಂದ್ರ ಮೋದಿ ಅವರು ಕ್ರೀಡೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ನಂಬರ್ 1 ರಾಷ್ಟ್ರವನ್ನಾಗಿ ಮಾಡಲು ತಮ್ಮ ಜೀವನದ ಧ್ಯೇಯವನ್ನು ಮಾಡಿದ್ದಾರೆ. ಅವರು ಎಂದಿಗೂ ಸಮಸ್ಯೆಗಳ ಬಗ್ಗೆ ಚಿಂತಿಸಲಿಲ್ಲ, ಆದರೆ ಯೋಜಿಸಿದರು, ಶ್ರಮಿಸಿದರು ಮತ್ತು ಫಲಿತಾಂಶಗಳನ್ನು ತರುವ ಮಾರ್ಗಗಳನ್ನು ಕಂಡುಕೊಂಡರು. ಕ್ರೀಡೆಯಲ್ಲಿ, ಪ್ರಧಾನಿ ಮೋದಿ ಅವರು ಕಾರ್ಯಕ್ರಮಗಳ ಸರಣಿಯನ್ನು ಪರಿಚಯಿಸಿದರು. ಇಂದು ನಾವು ಅದೇ ಕಾರ್ಯಕ್ರಮಗಳ ಸುಂದರ ಫಲಿತಾಂಶವನ್ನು ನೋಡಬಹುದು ಎಂದರು.

Khelo India University Games: ಇಂದಿನ ಸಮಾರೋಪ ಸಮಾರಂಭಕ್ಕೆ ಅಮಿತ್‌ ಶಾ ಮುಖ್ಯ ಅತಿಥಿ

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕ್ರೀಡಾ ಸಚಿವಾಲಯದ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್, ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿದ್ದರು. ಖೇಲೋ ಇಂಡಿಯಾ ಯೂತ್ ಗೇಮ್ಸ್ 2021 ರ ಅಂಚೆ ಕವರ್ ಅನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರ ಮತ್ತು ಜೈನ್ ವಿಶ್ವವಿದ್ಯಾಲಯದ ಪ್ರಯತ್ನಗಳನ್ನು ಶ್ಲಾಘಿಸಿದರು, “ಕ್ರೀಡೆಗಳು ಮಾನವನ ನೈಸರ್ಗಿಕ ಅಂಶಗಳಾಗಿವೆ.

Tap to resize

Latest Videos

Khelo India University Games: ಜೈನ್ ಯೂನಿವರ್ಸಿಟಿ ಸಮಗ್ರ ಚಾಂಪಿಯನ್

ಇದು ಎಲ್ಲಾ ಮಾನವರ ಪಾತ್ರವನ್ನು ತೋರಿಸುತ್ತದೆ ಮತ್ತು ರೂಪಿಸುತ್ತದೆ. ಇದು ಒಬ್ಬ ವ್ಯಕ್ತಿಗೆ ಕ್ರೀಡಾ ಮನೋಭಾವದ ಮಹತ್ವವನ್ನು ಕಲಿಸುತ್ತದೆ.  ನಮಗೆ ಸೋಲುವ ಭಯ ಇರಬಾರದು ಆದರೆ ಗೆಲ್ಲುವ ಇಚ್ಛೆ ಇರಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಖೇಲೋ ಇಂಡಿಯಾದ ದೃಷ್ಟಿಕೋನದಿಂದ ಬಂದಿದ್ದಾರೆ. ಕ್ರೀಡೆಗೆ ದೇಶದ ದಿಕ್ಕನ್ನೇ ಬದಲಿಸುವ ಶಕ್ತಿ ಇದೆ ಮತ್ತು ಭಾರತದಲ್ಲಿರುವ ಎಲ್ಲಾ ಯುವಕರು ರಾಷ್ಟ್ರಕ್ಕೆ ಕೀರ್ತಿ ತರುವಂತೆ ನಾನು ಒತ್ತಾಯಿಸುತ್ತೇನೆ ಎಂದರು.

click me!