ಖೋಖೋ ವಿಶ್ವಕಪ್: ಭಾರತದ ಎರಡೂ ತಂಡಗಳು ಕ್ವಾರ್ಟರ್‌ಗೆ ಲಗ್ಗೆ

By Naveen Kodase  |  First Published Jan 16, 2025, 11:26 AM IST

ಚೊಚ್ಚಲ ಖೋ ಖೋ ವಿಶ್ವಕಪ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಕ್ವಾರ್ಟರ್‌ಫೈನಲ್‌ಗೆ ಪ್ರವೇಶ. ಮಹಿಳಾ ತಂಡ ಇರಾನ್ ವಿರುದ್ಧ 84 ಅಂಕಗಳಿಂದ ಗೆದ್ದರೆ, ಪುರುಷರ ತಂಡ ಪೆರುವನ್ನು 32 ಅಂಕಗಳಿಂದ ಮಣಿಸಿತು.


ನವದೆಹಲಿ: ಚೊಚ್ಚಲ ಆವೃತ್ತಿಯ ಖೋ ಖೋ ವಿಶ್ವಕಪ್‌ನಲ್ಲಿ ಭಾರತದ 2 ತಂಡಗಳೂ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಬುಧವಾರ ನಡೆದ ಮಹಿಳಾ ವಿಭಾಗದ 'ಎ' ಗುಂಪಿನ ಪಂದ್ಯದಲ್ಲಿ ಇರಾನ್ ತಂಡವನ್ನು ಭಾರತ 84 ಅಂಕಗಳಿಂದ ಸೋಲಿಸಿತು. 

ಆರಂಭಿಕ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ದ 175-18 ಅಂತರದಲ್ಲಿ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ ಇರಾನ್ ವಿರುದ್ಧ 100-16 ಅಂಕಗಳಲ್ಲಿ ಜಯಭೇರಿ ಬಾರಿಸಿತು. ಮೊದಲ ಟರ್ನ್‌ನಲ್ಲೇ 50 ಅಂಕ ದೋಚಿದ ಭಾರತ, ಕೊನೆವರೆಗೂ ಎದುರಾಳಿ ಮೇಲೆ ಪ್ರಾಬಲ್ಯ ಸಾಧಿಸಿತು. ಕೊನೆ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಆಡಲಿದೆ. 

Tap to resize

Latest Videos

ಇರಾನಿನ ಮಹಿಳೆಯರ ಆರಂಭ ಕೂಡ ಉತ್ತಮವಾಗಿತ್ತಾದರೂ, ನಾಯಕಿ ಪ್ರಿಯಾಂಕಾ ಇಂಗಲ್ ಮತ್ತು ನಿರ್ಮಲಾ ಭಾಟಿ ತಂಡವನ್ನು ಡ್ರೀಮ್ ರನ್‌ಗೆ ಕೊಂಡೊಯ್ದರು. ಇರಾನ್ ಪಂದ್ಯದ ಅಂತಿಮ ಟರ್ನ್‌ನಲ್ಲಿ 42 ಅಂಕಗಳನ್ನು ಬಿಟ್ಟುಕೊಟ್ಟಿತು.

ಇನ್ನು, ಪುರುಷರ ತಂಡ ಪೆರು ವಿರುದ್ಧ 70-38 ಅಂಕಗಳಲ್ಲಿ ಜಯಗಳಿಸಿತು. ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ನೇಪಾಳ ಹಾಗೂ ಬ್ರೆಜಿಲ್ ವಿರುದ್ಧ ಗೆದ್ದಿದ್ದ ತಂಡ 'ಎ' ಗುಂಪಿನಲ್ಲಿ ಮತ್ತೊಂದು ಪಂದ್ಯ ಬಾಕಿ ಇರುವಂತೆಯೇ ನಾಕೌಟ್ ಪ್ರವೇಶಿಸಿತು. ಗುರುವಾರ ಭೂತಾನ್ ವಿರುದ್ಧ ಆಡಲಿದೆ.

ಟೂರ್ನಮೆಂಟ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ ಮೆನ್ ಇನ್ ಬ್ಲೂ ತಂಡವು ತಮ್ಮ ರಣತಂತ್ರದ ಅಮೋಘ ನಿರ್ವಹಣೆ ಮತ್ತು ಅಥ್ಲೆಟಿಕ್ ಪರಾಕ್ರಮವನ್ನು ಪ್ರದರ್ಶಿಸುವ ಪ್ರಬಲ ಪ್ರದರ್ಶನದೊಂದಿಗೆ ತಮ್ಮ ಚಾಂಪಿಯನ್‌ಶಿಪ್‌ನಲ್ಲಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು.

ಮೊದಲ ಟರ್ನ್ ನ ಆರಂಭಿಕ ಹಂತಗಳಲ್ಲಿ ಪ್ರಾಬಲ್ಯ ಸಾಧಿಸಿದ ಟೀಮ್ ಇಂಡಿಯಾಗೆ ಅಮೋಘ ಆರಂಭವು ಉತ್ತಮ ವೇದಿಕೆಯಾಯಿತು, ಆದರೆ ಎರಡನೇ ಟರ್ನ್ ನಲ್ಲಿ ಪೆರು ಸಣ್ಣ ರಕ್ಷಣಾತ್ಮಕ ನಿಲುವಿನೊಂದಿಗೆ  ತಿರುಗೇಟು ನೀಡುವ ಲಕ್ಷಣ ತೋರಿತು. ಹಾಗಿದ್ದರೂ, ಆತಿಥೇಯ ತಂಡ ಪ್ರತೀಕ್‌ ವೈಕರ್‌ ಅವರ ನಾಯಕತ್ವದ ಮೂಲಕ ತಮ್ಮ ಅಧಿಕಾರವನ್ನು ಸಮರ್ಥವಾಗಿ ತೋರಿದರು. 

click me!