
ಲಂಡನ್(ಜು.20): ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕೆವಿನ್ ಪೀಟರ್'ಸನ್ ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ಮತ್ತೆ ವಾಪಸ್ಸಾಗುವ ಕುರಿತು ಚಿಂತನೆ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.
2019ಕ್ಕೆ ದಕ್ಷಿಣ ಆಫ್ರಿಕಾ ಪರ ಆಡಲು ಅರ್ಹತೆ ಪಡೆಯಲಿರುವ ಪೀಟರ್'ಸನ್'ಗೆ ಆ ವೇಳೆ 40 ವರ್ಷ ವಯಸ್ಸಾಗಿರಲಿದೆ.
2013-14ರ ಆಷ್ಯಸ್ ಸರಣಿ ಸೋಲಿನ ಬಳಿಕ ಅವರನ್ನು ಇಂಗ್ಲೆಂಡ್ ತಂಡದಿಂದ ಕೈಬಿಡಲಾಗಿತ್ತು. ಮಾಜಿ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಜತೆಗಿನ ಕಿತ್ತಾಟ ಸಹ ಪೀಟರ್'ಸನ್ ಪಾಲಿಗೆ ಮುಳುವಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ವಾಪಸ್ಸಾಗುವ ಕುರಿತು ಮಾತನಾಡಿರುವ ಪೀಟರ್‌ಸನ್ ‘ಮುಂದಿನ 2 ವರ್ಷಗಳು ದಕ್ಷಿಣ ಆಫ್ರಿಕಾದಲ್ಲಿ ನಾನು ಹೆಚ್ಚು ಕ್ರಿಕೆಟ್ ಆಡಲಿದ್ದೇನೆ. 2 ವರ್ಷದಲ್ಲಿ ಏನು ಬೇಕಿದ್ದರೂ ಆಡಬಹುದು. ಅವಕಾಶ ಸಿಕ್ಕರೆ ಖಂಡಿತವಾಗಿಯೂ ಅಂತರಾಷ್ಟ್ರೀಯ ಕ್ರಿಕೆಟ್'ಗೆ ವಾಪಸ್ಸಾಗುತ್ತೇನೆ’ ಎಂದು ಹೇಳಿದ್ದಾರೆ.
ಪೀಟರ್'ಸನ್ ಇಂಗ್ಲೆಂಡ್ ಪರ 104 ಟೆಸ್ಟ್ ಪಂದ್ಯಗಳಲ್ಲಿ 8,181 ರನ್, 136 ಏಕದಿನ ಪಂದ್ಯಗಳಲ್ಲಿ 4,440 ರನ್ ಹಾಗೂ 37 ಟಿ20 ಪಂದ್ಯಗಳಲ್ಲಿ 1,176 ರನ್'ಗಳನ್ನು ಬಾರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.