
ಕರುಣ್ ನಾಯರ್ ಅವರ ಕ್ರಿಕೆಟ್ ಪ್ರೇಮವನ್ನು ಪೋಷಿಸುವಲ್ಲಿ ಪ್ರಧಾನ ಪಾತ್ರ ವಹಿಸಿರುವ ತಾಯಿ ಪ್ರೇಮಾ ನಾಯರ್‌ಗೆ ಮಗನ ಬ್ಯಾಟಿಂಗ್ ಅನ್ನು ಎಂದೂ ನೇರವಾಗಿ ನೋಡಿಲ್ಲವಂತೆ! ‘ನೇರಪ್ರಸಾರದ ವೇಳೆ ಅವರು ಮಗನ ಬ್ಯಾಟಿಂಗ್ ನೋಡುವಾಗ ಸಿಕ್ಕಾಬಟ್ಟೆ ನರ್ವಸ್ ಆಗುತ್ತಾರೆ. ಹಾಗಾಗಿಯೇ, ಕರುಣ್ ಆಟವನ್ನು ರೆಕಾರ್ಡ್ ಮಾಡಿ ಆನಂತರ ಪ್ರೇಮಾರಿಗೆ ತೋರಿಸುತ್ತೇನೆ’ ಎನ್ನುತ್ತಾರೆ ಕರುಣ್ ನಾಯರ್ ತಂದೆ ಕಲಾಧರನ್ ನಾಯರ್.
ಹಾಲಿ ನಡೆಯುತ್ತಿರುವ ಚೆನ್ನೈ ಟೆಸ್ಟ್ ಪಂದ್ಯದ ಮೂರನೇ ದಿನಾಂತ್ಯಕ್ಕೆ ಕರುಣ್ 71 ರನ್ ಗಳಿಸಿದ್ದಾಗ ಮಗ ಶತಕ ಸಿಡಿಸುತ್ತಾನೆಂಬ ಅದೆಂಥದ್ದೊ ಆತ್ಮವಿಶ್ವಾಸ ಕಲಾಧರನ್ ಅವರಲ್ಲಿ ಮೂಡಿತ್ತು. ಅದನ್ನು ಕಣ್ಣಾರೆ ನೋಡಬೇಕೆಂಬ ಹಂಬಲ ಮೂಡಿತ್ತಾದರೂ ಪ್ರೇಮಾ ಅವರನ್ನು ಮನೆಯಲ್ಲಿ ಬಿಟ್ಟು ಒಬ್ಬನೇ ಅದನ್ನು ಎಂಜಾಯ್ ಮಾಡುವ ಮನಸ್ಥಿತಿಯಲ್ಲಿ ಅವರಿರಲಿಲ್ಲ. ಹಾಗಾಗಿ, ಪ್ರೇಮಾ ಅವರನ್ನು ಜತೆಯಲ್ಲಿ ಬರಲು ಕೇಳಿಕೊಂಡಿದ್ದರು.
ಮಗನ ಆಟವನ್ನು ನೇರಪ್ರಸಾರದಲ್ಲೇ ನೋಡದವರು, ಕ್ರೀಡಾಂಗಣಕ್ಕೇ ಹೋಗಿ ನೋಡುತ್ತಾರೆಯೇ ? ಪ್ರೇಮಾ ಅವರು ಇಲ್ಲ ಎಂದುಬಿಟ್ಟರು. ಆದರೆ, ಕಲಾಧರನ್ ಅವರು ಪಟ್ಟು ಬಿಡಲಿಲ್ಲ. ‘‘ಮಗನ ಶತಕ ನೋಡುವುದಿಲ್ಲವೇ?’’, ‘‘ದಕ್ಷಿಣ ಭಾರತದಲ್ಲಿ ಮಗ ಆಡುತ್ತಿರುವ ಮೊಟ್ಟಮೊದಲ ಟೆಸ್ಟ್ ಪಂದ್ಯವಿದು, ಬರುವುದಿಲ್ಲವೆಂದರೆ ಹೇಗೆ?’’ ಎಂಬಿತ್ಯಾದಿ ಪ್ರಶ್ನೆಗಳನ್ನು ಎಸೆದು ಪ್ರೇಮಾ ಅವರನ್ನು ಹೊರಡಿಸಿದರು.
ಆದರೆ, ಕ್ರೀಡಾಂಗಣದಲ್ಲಿ ಅವರ ನಿರೀಕ್ಷೆಗೂ ಮೀರಿ ಕರುಣ್ ಬೆಳಗಿದರು. ಮಗ ಶತಕ ಸಿಡಿಸುವುದನ್ನು ನೋಡಲು ಬಂದಿದ್ದ ತಂದೆ, ತಾಯಿಗೆ ಅವರು ತ್ರಿಶತಕದ ಸಂಭ್ರಮವನ್ನು ಉಡುಗೊರೆಯಾಗಿ ನೀಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.