Karnataka Police: ದಾವಣಗೆರೆ ಮಣಿಸಿ ಬೆಂಗಳೂರು ಪೊಲೀಸರು ಕಬಡ್ಡಿ ಚಾಂಪಿಯನ್ಸ್

By Contributor Asianet  |  First Published Feb 11, 2022, 3:44 AM IST

* ಪೊಲೀಸ್ ಕಬಡ್ಡಿ ಕ್ರೀಡಾಕೂಟದಲ್ಲಿ ಬೆಂಗಳೂರಿಗೆ ಜಯಭೇರಿ
* ದಾವಣಗೆರೆ ವಿರುದ್ಧ ಗೆದ್ದು ಬೀಗಿದ ತಂಡ 
* ಗೃಹ ಸವಿವ ಆರಗ ಜ್ಞಾನೇಂದ್ರರಿಂದ ಬಹುಮಾನ ವಿತರಣೆ


ಬೆಂಗಳೂರು(ಫೆ. 11)  ಬೆಂಗಳೂರಿನ (Bengaluru) ಕೋರಮಂಗಲದಲ್ಲಿ ನಡೆದ ಪೊಲೀಸ್ (Karnataka Police) ವಾರ್ಷಿಕ ಕ್ರೀಡಾಕೂಟದಲ್ಲಿ.. ಕಬಡ್ಡಿ ಕ್ರೀಡಾಕೂಟ ಎಲ್ಲರ ಗಮನ ಸೆಳೆದಿದ್ದು ಒಟ್ಟು 26 ತಂಡಗಳು ಭಾಗಿಯಾಗಿದ್ದವು.. 26 ತಂಡಗಳಲ್ಲಿ ಬಲಿಷ್ಠ ಬೆಂಗಳೂರು ಪೊಲೀಸ್ ತಂಡ ಜಯಭೇರಿಯನ್ನ ಬಾರಿಸಿತು.

 ಒಟ್ಟು ಎಂಟು ಪಂದ್ಯಾಟಗಳನ್ನಾಡಿ ಫೈನಲ್ ಹಂತಕ್ಕೆ ಪ್ರವೇಶಿಸಿದರು.  ಫೈನಲ್ ಪಂದ್ಯದಲ್ಲಿ ದಾವಣಗೆರೆ (Davanagere) ವಿರುದ್ದ ಸೆಣೆಸಾಡಿದ ಬೆಂಗಳೂರು ಪೊಲೀಸ್ ತಂಡ 21 ಅಂಕಗಳಿಂದ ಜಯಗಳಿಸಿತು.

Tap to resize

Latest Videos

 ಮೊದಲ ಐದು ನಿಮಿಷಗಳಲ್ಲಿ 5-5 ಸಮಬಲ ಹೋರಾಟದಲ್ಲಿದ್ದ ಎರಡೂ ತಂಡ ಮಧ್ಯಂತರ ಆಟದ ವೇಳೆಗೆ ದಾವಣಗೆರೆ ತಂಡದ ವಿರುದ್ದ 15-21 ಅಂತರದಿಂದ ಬೆಂಗಳೂರು ಪೊಲೀಸ್ ತಂಡ ( ಬಿಸಿಪಿ) ಮುಂದಿತ್ತು..  ನಂತರ ಪಂದ್ಯ ಮುಗಿಯುವುದರ ವೇಳೆಗೆ ಪಂದ್ಯದ ಮೇಲೆ ಪೂರ್ತಿ ಹಿಡಿತವನ್ನ ಸಾಧಿಸಿದ್ದು 20-41ರಿಂದ ಗೆಲುವನ್ನ ಸಾಧಿಸಿ 21 ಅಂಕಗಳ ಅಂತರದಿಂದ ಮೊದಲ ಸ್ಥಾನವನ್ನ ಅಲಂಕರಿಸಿತು.. ತಂಡಕ್ಕೆ ಗೃಹ  ಸಚಿವ ಆರಗ ಜ್ಞಾನೇಂದ್ರ ಬಹುಮಾನ ವಿತರಣೆ ಮಾಡಿದರು.

Pro Kabaddi League: ಗುಜರಾತ್ ಎದುರು ಬೆಂಗಳೂರು ಬುಲ್ಸ್‌ಗೆ ಆಘಾತಕಾರಿ ಸೋಲು..!

ಪ್ರೋ ಕಬಡ್ಡಿ ಹವಾ:  ಬೆಂಗಳೂರು ಬುಲ್ಸ್‌ (Bengaluru Bulls) 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ (Pro Kabaddi League) ಸೋಲು ಮತ್ತು ಗೆಲುವು ಸಮನಾಗಿ ಕಾಣುತ್ತಿದೆ.  ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.  ಬೆಂಗಳೂರು ತಂಡ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೆವರೇಟ್ ತಂಡ 

ಸಾವಿನ ಮನೆಗೆ ತೆರಳಿದ ಬಾಲಕಿ:  ಮರದ ರೆಂಬೆ ಬಿದ್ದು ಗಾಯಗೊಂಡಿದ್ದ  ರೆಚೆಲ್ ಪ್ರಿಷಾ ಸತತ ಎರಡು ವರ್ಷ ಆಸ್ಪತ್ರೆಯಲ್ಲಿದ್ದಳು . ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಾಲಕಿ  ಈಗ ಜೀವ ಕಳೆದುಕೊಂಡಿದ್ದಾಳೆ. 2020 ಮಾರ್ಚ್ 11ರಂದು ಬಾಲಕಿ ಮೇಲೆ ಒಣಕೊಂಬೆ ಬಿದ್ದಿತ್ತು ತಂದೆಯ ಜೊತೆ ಬೈಕ್ ನಲ್ಲಿ (School) ಶಾಲೆಗೆ ತೆರಳುತ್ತಿದ್ದ ಬಾಲಕಿ ಮೇಲೆ ಕೊಂಬೆಯೇ ಮೃತ್ಯುವಾಗಿ ಬಿದ್ದಿತ್ತು.

ರಾಮಮೂರ್ತಿನಗರದ (Bengaluru) ಕೌದೇನಹಳ್ಳಿಯಲ್ಲಿ ನಡೆದಿದ್ದ ಘಟನೆ ನಡೆದಿದ್ದು ತಲೆಗೆ ತೀವ್ರ ಗಾಯವಾದ ಕಾರಣ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಒಂದೂವರೆ ವರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಮನೆಗೆ ಕರೆದುಕೊಂಡು ಬರಲಾಗಿತ್ತು.  ಕೊನೆಗೂ ಚಿಕಿತ್ಸೆ ಫಲಿಸದೇ ಸಾವಿನ ಮನೆಯನ್ನು 10 ವರ್ಷದ ಬಾಲಕಿ ಸೇರಿದ್ದಾಳೆ.

click me!