ಶ್ರೇಯಸ್ ಗೋಪಾಲ್ ಆಕರ್ಷಕ ಶತಕ; ಬೃಹತ್ ಮೊತ್ತ ಕಲೆ ಹಾಕಿ ಆಲೌಟ್ ಆದ ಕರ್ನಾಟಕ

By Suvarna Web DeskFirst Published Dec 9, 2017, 1:45 PM IST
Highlights

ಎರಡನೇ ದಿನ ಅರ್ಧಶತಕ ಬಾರಿಸಿದ್ದ ಎಸ್. ಗೋಪಾಲ್ ಇಂದು ಕೂಡಾ ದಿಟ್ಟ ಬ್ಯಾಟಿಂಗ್ ನಡೆಸಿದರು.

ನಾಗ್ಪುರ(ಡಿ.09): ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅಜೇಯ (150) ಶತಕ ಹಾಗೂ ಬೌಲರ್ ಶ್ರೀನಾಥ್ ಅರವಿಂದ್ ಸ್ಫೋಟಕ ಅರ್ಧಶತಕದ ನೆರವಿನಿಂದ ಕರ್ನಾಟಕ 570 ರನ್ ಕಲೆಹಾಕಿದ್ದು, 397 ರನ್'ಗಳ ಬೃಹತ್ ಮುನ್ನಡೆ ಸಾಧಿಸಿದೆ. ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಕರ್ನಾಟಕ ಇದೀಗ ಬಿಗಿ ಹಿಡಿತ ಸಾಧಿಸಿದೆ.  

ಕರ್ನಾಟಕ ಮೂರನೇ ದಿನದಾಟದ ಆರಂಭದಲ್ಲೇ ವಿನಯ್ ಕುಮಾರ್ ರೂಪದಲ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ದಿನ ಅರ್ಧಶತಕ ಬಾರಿಸಿದ್ದ ಎಸ್. ಗೋಪಾಲ್ ಇಂದು ಕೂಡಾ ದಿಟ್ಟ ಬ್ಯಾಟಿಂಗ್ ನಡೆಸಿದರು. ಇವರಿಗೆ ಕೆಳ ಕ್ರಮಾಂಕದಲ್ಲಿ ಕೆ. ಗೌತಮ್ ಹಾಗೂ ಎಸ್. ಅರವಿಂದ್ ಉತ್ತಮ ಸಾಥ್ ನೀಡಿದರು. ಕರ್ನಾಟಕ 478 ರನ್'ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು.

ಆ ಬಳಿಕ ಜತೆಯಾದ ಎಸ್. ಅರವಿಂದ್ ಹಾಗೂ ಎಸ್. ಗೋಪಾಲ್ 92 ರನ್'ಗಳ ಜತೆಯಾಟವಾಡುವ ಮೂಲಕ ಬೃಹತ್ ಮೊತ್ತ ಕಲೆಹಾಕಿದೆ. ಅಂತಿಮವಾಗಿ ಶ್ರೀನಾಥ್ ಕೇವಲ 41 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್'ನೊಂದಿಗೆ 51 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಮುಂಬೈ ಪರ ಶಿವಂ ದುಬೈ 5 ವಿಕೆಟ್ ಪಡೆದರೆ, ಶಿವಂ ಮಲ್ಹೋತ್ರ 3, ಧವಳ್ ಕುಲಕರ್ಣಿ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಮುಂಬೈ ಮೊದಲ ಇನಿಂಗ್ಸ್: 173/10

ಧವಳ್ ಕುಲಕರ್ಣಿ: 75

ವಿನಯ್ ಕುಮಾರ್ : 34/6

ಕರ್ನಾಟಕ ಮೊದಲ ಇನಿಂಗ್ಸ್: 570/10

ಶ್ರೇಯಸ್ ಗೋಪಾಲ್: 150*

ಶಿವಂ ದುಬೈ: 98/5

click me!