ದಿಲ್ಲಿ ಟೆಸ್ಟ್'ನಲ್ಲಿನ ವಾಯು ಮಾಲಿನ್ಯದ ಬಗ್ಗೆ ಐಸಿಸಿ ಚರ್ಚೆ

By Suvarna Web DeskFirst Published Dec 9, 2017, 1:04 PM IST
Highlights

140 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ವಾಯು ಮಾಲಿನ್ಯದ ಕಾರಣದಿಂದ 26 ನಿಮಿಷಗಳ ಕಾಲ ಪಂದ್ಯವನ್ನು ರದ್ದು ಪಡಿಸಿದ್ದು ಮೊದಲ ಉದಾಹರಣೆ ಎನಿಸಿಕೊಂಡಿತು.

ದುಬೈ(ಡಿ.09): ಇತ್ತೀಚೆಗೆ ‘ಭಾರತ- ಶ್ರೀಲಂಕಾ ನಡುವೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ವಾಯುಮಾಲಿನ್ಯದ ಕಾರಣ ಉಂಟಾಗಿದ್ದ ವಿವಾದದ ಕುರಿತು ಫೆಬ್ರವರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚಿಸುವುದಾಗಿ ಐಸಿಸಿ ತಿಳಿಸಿದೆ. ಅಲ್ಲದೇ ‘ವಿಷಯದಲ್ಲಿ ಈ ರೀತಿಯ ಪರಿಸ್ಥಿತಿ ಉಂಟಾದಾಗ ಅನುಸರಿಸಬೇಕಾದ ನಿಯಮಗಳನ್ನು ರಚಿಸುವುದಾಗಿ ಹೇಳಿದೆ.

ವಾಯು ಮಾಲಿನ್ಯದ ಕಾರಣ ಲಂಕಾ ಆಟಗಾರರು ಮಾಸ್ಕ್ ಧರಿಸಿ ಕ್ಷೇತ್ರರಕ್ಷಣೆ ಮಾಡಿದ್ದರು. ಕೆಲಕಾಲ ಆಟವನ್ನು ಸ್ಥಗಿತಗೊಳಿಸಿದ್ದರು. ಲಂಕಾದ ಲಕ್ಮಲ್, ಭಾರತದ ಶಮಿ ಮೈದಾನ ದಲ್ಲೇ ವಾಂತಿ ಮಾಡಿಕೊಂಡಿದ್ದರು. ಐಸಿಸಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

140 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ವಾಯು ಮಾಲಿನ್ಯದ ಕಾರಣದಿಂದ 26 ನಿಮಿಷಗಳ ಕಾಲ ಪಂದ್ಯವನ್ನು ರದ್ದು ಪಡಿಸಿದ್ದು ಮೊದಲ ಉದಾಹರಣೆ ಎನಿಸಿಕೊಂಡಿತು.

 

click me!