ಇಬ್ಬರು ಕನ್ನಡತಿಯರಿಗೆ ರಾಜ್ಯ ಸರ್ಕಾರದಿದ ಬಂಪರ್ ಬಹುಮಾನ

By Suvarna Web DeskFirst Published Jul 29, 2017, 6:18 PM IST
Highlights

ವಿಶ್ವಕಪ್ ಫೈನಲ್'ನಲ್ಲಿ  ಇಂಗ್ಲೆಂಡ್ ವಿರುದ್ಧ ಭಾರತ ತಂಡ 9 ರನ್'ಗಳಿಂದ ಪರಾಭವಗೊಂಡಿತ್ತು. ಅಲ್ಲದೆ ಈ ಪಂದ್ಯದಲ್ಲಿ ಅಂತಿಮ ಕ್ಷಣದವರೆಗೂ ವೇದಾ ಹೋರಾಟ ನಡೆಸಿದ್ದರು. ಅವರು ಔಟಾದ ನಂತರವೇ ಪಂದ್ಯ ತಿರುವು ಪಡೆದುಕೊಂಡಿತು.

ಉಡುಪಿ(ಜು.29): ಭಾರತ ಮಹಿಳಾ ಕ್ರಿಕೆಟ್ ತಂಡದ ಇಬ್ಬರು ಕನ್ನಡತಿಯರಿಗೆ ಕರ್ನಾಟಕ ರಾಜ್ಯ ಸರ್ಕಾರ ತಲಾ 25 ಲಕ್ಷ ಬಹುಮಾನ ಘೋಷಿಸಿದೆ.

ಮಧ್ಯಮ ಕ್ರಮಾಂಕದ ಆಟಗಾರ್ತಿ ಚಿಕ್ಕಮಗಳೂರಿನ ವೇದಾ ಕೃಷ್ಣಮೂರ್ತಿ ಹಾಗೂ ವಿಜಯಪುರದ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಬಹುಮಾನ ಘೋಷಿಸಿದ್ದಾರೆ. ಇಂಗ್ಲೆಂಡ್'ನಲ್ಲಿ ನಡೆದ ಮಹಿಳಾ ವಿಶ್ವಕಪ್'ನಲ್ಲಿ ಟೀಂ ಇಂಡಿಯಾ ರನ್ನರ್'ಅಪ್ ಸ್ಥಾನ ಗಳಿಸಲು ಪ್ರಮುಖ ಕಾರಣರಾದ ಈ ಇಬ್ಬರು ಆಟಗಾರ್ತಿಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಶ್ವಕಪ್ ಫೈನಲ್'ನಲ್ಲಿ  ಇಂಗ್ಲೆಂಡ್ ವಿರುದ್ಧ ಭಾರತ ತಂಡ 9 ರನ್'ಗಳಿಂದ ಪರಾಭವಗೊಂಡಿತ್ತು. ಅಲ್ಲದೆ ಈ ಪಂದ್ಯದಲ್ಲಿ ಅಂತಿಮ ಕ್ಷಣದವರೆಗೂ ವೇದಾ ಹೋರಾಟ ನಡೆಸಿದ್ದರು. ಅವರು ಔಟಾದ ನಂತರವೇ ಪಂದ್ಯ ತಿರುವು ಪಡೆದುಕೊಂಡಿತು.

click me!