ದೇಶಕ್ಕೆ ಹೆಮ್ಮೆ ತಂದ ಕರ್ನಾಟಕದ ಮಹಿಳಾ ಕ್ರಿಕೆಟ್ ಕಲಿಗಳಿಗೆ ಸೈ ಎಂದ ಕಿಚ್ಚ ಸುದೀಪ್

By Suvarna Web DeskFirst Published Jul 29, 2017, 6:13 PM IST
Highlights

ಮಹಿಳಾ ಕ್ರಿಕೆಟ್ ಮತ್ತು ಪುರುಷರ ಕ್ರಿಕೆಟ್ ನಡುವೆ ಭೇದ ಮಾಡುವುದಕ್ಕೂ ಸುದೀಪ್ ವಿರೋಧ ವ್ಯಕ್ತಪಡಿಸಿದರು. ಮಹಿಳೆಯೇ ಆಗಲೀ, ಪುರುಷರೇ ಆಗಲೀ ಕ್ರಿಕೆಟ್ ಅಂದರೆ ಕ್ರಿಕೆಟ್ ಎಂದು ಹೇಳಿದ ಸುದೀಪ್, ಮಹಿಳಾ ಕ್ರಿಕೆಟ್'ಗೆ ಭಾರತದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಆಶಿಸಿದರು.

ಬೆಂಗಳೂರು(ಜುಲೈ 29): ಮಹಿಳಾ ವಿಶ್ವಕಪ್ ಗೆಲ್ಲಲು ಕೂದಲೆಳೆ ಅಂತರದಿಂದ ಮಿಸ್ ಮಾಡಿಕೊಂಡರೂ ಫೈನಲ್'ವರೆಗೂ ಹೋಗಿ ಮಹಾನ್ ಸಾಧನೆಗೈದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಕಿಚ್ಚ ಸುದೀಪ್ ಅಭಿನಂದನೆ ಸಲ್ಲಿಸಿದ್ದಾರೆ. ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಕರ್ನಾಟಕದ ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್ ಅವರ ಆಟವನ್ನು ಸುದೀಪ್

ವಿಶ್ವಕಪ್ ಫೈನಲ್'ವರೆಗೆ ತಲುಪಿದ್ದಕ್ಕೆ ಸಂಭ್ರಮಿಸಬೇಕಾ? ವಿಶ್ವಕಪ್ ಗೆಲ್ಲಲಾಗಲಿಲ್ಲವೆಂದು ವ್ಯಥೆ ಪಡಬೇಕಾ? ಇದು ಮಹಿಳಾ ಟೀಮ್ ಇಂಡಿಯಾದಲ್ಲಿರುವ ಕನ್ನಡತಿಯರಾದ ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್ ಅವರ ಸಂದಿಗ್ಧ ಮನಃಸ್ಥಿತಿ. ಸುವರ್ಣನ್ಯೂಸ್ ಸ್ಟುಡಿಯೋದಲ್ಲಿ ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ಇಬ್ಬರು ಆಟಗಾರ್ತಿಯರು ತಮಗೆ ವಿಶ್ವಕಪ್ ದಕ್ಕಲಿಲ್ಲವಲ್ಲಾ ಎಂಬ ಅಸಮಾಧಾನವನ್ನು ತೋರ್ಪಡಿಸಿದರು. ಈ ವೇಳೆ ದೂರವಾಣಿಯಲ್ಲಿ ಮಾತನಾಡಿದ ಸ್ಯಾಂಡಲ್ವುಡ್ ಹೀರೋ ಕಿಚ್ಚ ಸುದೀಪ್ ಈ ಆಟಗಾರ್ತಿಯರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು.

"ವಿಶ್ವಕಪ್ ಗೆಲ್ಲಲಿಲ್ಲವೆಂಬ ಬೇಸರ ಇರೋದು ಸಹಜ. ನಿರಾಶೆ ಬೇಡ ಎಂದು ಬಾಯಿ ಮಾತಲ್ಲಿ ಹೇಳೋದು ಸುಲಭ" ಎಂದು ಕಿಚ್ಚ ಸುದೀಪ್ ಹೇಳಿದರು.

ಇದೇ ವೇಳೆ, ಮಹಿಳಾ ಕ್ರಿಕೆಟ್ ಮತ್ತು ಪುರುಷರ ಕ್ರಿಕೆಟ್ ನಡುವೆ ಭೇದ ಮಾಡುವುದಕ್ಕೂ ಸುದೀಪ್ ವಿರೋಧ ವ್ಯಕ್ತಪಡಿಸಿದರು. ಮಹಿಳೆಯೇ ಆಗಲೀ, ಪುರುಷರೇ ಆಗಲೀ ಕ್ರಿಕೆಟ್ ಅಂದರೆ ಕ್ರಿಕೆಟ್ ಎಂದು ಹೇಳಿದ ಸುದೀಪ್, ಮಹಿಳಾ ಕ್ರಿಕೆಟ್'ಗೆ ಭಾರತದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಆಶಿಸಿದರು.

English Summary:

Kichcha Sudeep says contratulations to Karnataka women Veda Krishnamurthy and Rajeshwari Gaikwad, who were part of the Indian Women's Cricket team that reached final of ICC Women's Cricket World Cup 2017. It's nothing wrong in the girls feeling disappointed that they couldn't win the world cup, says Sandalwood hero. However he strongly commended the women's team for what they have achieved. Meanwhile, Veda Krishnamurthy and Rajeshwari Gaikwad both shared their experiences, feelings and emotions of World Cup with Suvarna News. Parents of Rajeshwari Gaikwad too had participated in this live show.

click me!