
ಕೊಚ್ಚಿ(ಆ.28): ತೀವ್ರ ಪೈಪೋಟಿ ಹಾಗೂ ಯುವ ಕ್ರಿಕೆಟಿಗರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕರ್ನಾಟಕದ ಹಿರಿಯ ಕ್ರಿಕೆಟಿಗರು ಇತರ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕ ರಣಜಿ ತಂಡದ ನಾಯಕ, ಚಾಂಪಿಯನ್ ಕ್ರಿಕೆಟಿಗ ಆರ್ ವಿನಯ್ ಕುಮಾರ್ ಪುದುಚೇರಿ ತಂಡ ಸೇರಿಕೊಂಡಿದ್ದಾರೆ. ಇದಕ್ಕೂ ಮೊದಲು ಕರ್ನಾಟಕದಿಂದ ವಲಸೆ ಹೋಗಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ, ಇದೀಗ ಕೇರಳ ತಂಡ ಸೇರಿಕೊಂಡಿದ್ದಾರೆ. ಇದೀಗ ನಿಗದಿತ ಓವರ್ ಕ್ರಿಕೆಟ್‌ನಲ್ಲಿ ರಾಬಿನ್ ಉತ್ತಪ್ಪ ಕೇರಳ ತಂಡವನ್ನು ಮುನ್ನಡೆಸಲಿದ್ದಾರೆ ಕೇರಳ ಕ್ರಿಕೆಟ್ ಸಂಸ್ಥೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕರ್ನಾಟಕ ಕ್ರಿಕೆಟ್‌ಗೆ ವಿನಯ್ ಕುಮಾರ್ ಗುಡ್‌ಬೈ!
ಕರ್ನಾಟಕ ಬಿಟ್ಟು ವಿದರ್ಭ ತಂಡ ಸೇರಿಕೊಂಡಿದ್ದ ರಾಬಿನ್ ಉತ್ತಪ್ಪ ಕಳೆದೆರಡು ಋತುಗಳಲ್ಲಿ ವಿದರ್ಭ ತಂಡದ ಪರ ರಣಜಿ ಕ್ರಿಕೆಟ್ ಆಡಿದ್ದಾರೆ. ಇದೀಗ ವಿದರ್ಭ ತಂಡವನ್ನು ಬಿಟ್ಟು ಕೇರಳ ತಂಡ ಸೇರಿಕೊಂಡಿದ್ದಾರೆ. ಅನುಭವಿ ರಾಬಿನ್ ಉತ್ತಪ್ಪಾಗೆ ನಿಗದಿತ ಓವರ್ ಮಾದರಿಯಲ್ಲಿ ಕೇರಳ ತಂಡವನ್ನು ಉತ್ತಪ್ಪ ಮುನ್ನಡೆಸಲಿದ್ದಾರೆ. ವಿಜಯ್ ಹಜಾರೆ ಹಾಗೂ ಸಯ್ಯದ್ ಮುಷ್ತಾಕ್ ಆಲಿ ಟಿ20 ಟೂರ್ನಿಯಲ್ಲಿ ಉತಪ್ಪ ಕೇರಳ ತಂಡದ ನಾಯಕಾರಿ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ: ಧೋನಿ-ಸಾಕ್ಷಿ ಮದುವೆಯಾಗಲು ರಾಬಿನ್ ಉತ್ತಪ್ಪ ಕಾರಣ!
ಕೇರಳ ರಣಜಿ ತಂಡದ ನಾಯಕತ್ವವನ್ನು ರಾಬಿನ್ ಉತ್ತಪ್ಪಾಗೆ ನೀಡಲು ಚಿಂತನೆ ನಡೆದಿದೆ. ಆದರೆ ಈ ಕುರಿತು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಉತ್ತಪ್ಪ ನಾಯಕತ್ವ ಕುರಿತು ಕೋಚ್ ಡೇವ್ ವಾಟ್ಮೋರ್‌ಗೆ ಸೂಚಿಸಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿರುವ ಉತ್ತಪ್ಪ ಅನುಭವಿ ಆಟಗಾರ. ಉತ್ತಪ್ಪ ನಾಯಕತ್ವದಿಂದ ಕೇರಳ ಕ್ರಿಕೆಟ್ ಉತ್ತುಂಗಕ್ಕೇರಲಿದೆ ಅನ್ನೋ ವಿಶ್ವಾಸ ನಮಗಿದೆ ಎಂದು ಕೇರಳ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಶ್ರೀಜಿತ್ ವಿ ನಾಯರ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.