ಕೇರಳ ಪರ ರಣಜಿ ಆಡಲು ರೆಡಿಯಾದ ಉತ್ತಪ್ಪ

By Web Desk  |  First Published Jul 23, 2019, 1:20 PM IST

ಕನ್ನಡಿಗ ರಾಬಿನ್ ಉತ್ತಪ್ಪ ಸೌರಾಷ್ಟ್ರ ತಂಡವನ್ನು ತೊರೆದು ಈ ಬಾರಿ ಕೇರಳ ಪರ ರಣಜಿ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದ ಉತ್ತಪ್ಪ ಇದೀಗ ಕೇರಳ ತಂಡದ ಪರ ಬ್ಯಾಟ್ ಬೀಸಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...  


ಬೆಂಗಳೂರು[ಜು.23]: ಕರ್ನಾಟಕದ ಆಟಗಾರ ರಾಬಿನ್‌ ಉತ್ತಪ್ಪ, ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಸೌರಾಷ್ಟ್ರ ತಂಡವನ್ನು ತೊರೆದು ಕೇರಳ ತಂಡದಲ್ಲಿ ಆಡಲಿದ್ದಾರೆ. ಈ ಸಂಬಂಧ ರಾಬಿನ್‌ ಕೇರಳ ಸಂಸ್ಥೆಯೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ್ದರೆ. 

ವಿಶ್ವಕಪ್’ಗೆ ಕಾರ್ತಿಕ್ ಆಯ್ಕೆ ಬಗ್ಗೆ ಉತ್ತಪ್ಪ ಹೇಳಿದ್ದಿಷ್ಟು...

Latest Videos

undefined

ಕಳೆದ 2 ರಣಜಿ ಋುತುವಿನಲ್ಲಿ ರಾಬಿನ್‌ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಶ್ರಯದಲ್ಲಿ ನಡೆಯುತ್ತಿರುವ ಡಾ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯಲ್ಲಿ ರಾಬಿನ್‌ ಕೇರಳ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 

2002-03ನೇ ಸಾಲಿನಲ್ಲಿ ಕರ್ನಾಟಕ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಬಿನ್‌ 2016-17 ರ ವರೆಗೆ ಒಟ್ಟು 13 ವರ್ಷ ರಾಜ್ಯ ತಂಡದ ಪರ ಆಡಿದ್ದರು. 2009ರ ರಣಜಿ ಟ್ರೋಫಿ ಟೂರ್ನಿಯಲ್ಲಿ ರಾಬಿನ್‌ ನಾಯಕತ್ವದಲ್ಲಿ ಕರ್ನಾಟಕ ಫೈನಲ್‌ ತಲುಪಿತ್ತು. 33 ವರ್ಷ ವಯಸ್ಸಿನ ರಾಬಿನ್‌ ಭಾರತ ಪರ 43 ಏಕದಿನ, 13 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.
 

click me!