ಐತಿಹಾಸಿಕ ಪಂದ್ಯದಲ್ಲಿ ಲಾರಾ ರೆಕಾರ್ಡ್ ಬ್ರೇಕ್ ಮಾಡಿದ ಗೇಲ್!

By Web Desk  |  First Published Aug 12, 2019, 1:25 PM IST

ಏಕದಿನ ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ದಾಖಲೆ ಬರೆದಿದ್ದಾರೆ. ಭಾರತ ವಿರುದ್ಧದ 2ನೇ ಏಕದಿನ ಪಂದ್ಯ ಕ್ರಿಸ್ ಗೇಲ್ ಪಾಲಿಗೆ 300ನೇ ಪಂದ್ಯ.  ಐತಿಹಾಸಿಕ ಪಂದ್ಯದಲ್ಲೇ ದಾಖಲೆ ಬರೆದಿದ್ದಾರೆ. ಗೇಲ್ ದಾಖಲೆಯ ವಿವರ ಇಲ್ಲಿದೆ.  
 


ಟ್ರಿನಿಡಾಡ್(ಆ.12): ಭಾರತ ವಿರುದ್ದದ 2ನೇ ಏಕದಿನ ಪಂದ್ಯದ ಫಲಿತಾಂಶ ವೆಸ್ಟ್ ಇಂಡೀಸ್‌ಗೆ ನಿರಾಸೆ ತಂದಿದೆ. ದ್ವಿತೀಯ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದ್ದ ವಿಂಡೀಸ್ ಸೋಲಿಗೆ ಶರಣಾಗಿತ್ತು. ಈ ಪಂದ್ಯ ಕ್ರಿಸ್ ಗೇಲ್ ಪಾಲಿಗೆ ಸ್ಮರಣೀಯಾಗಿತ್ತು. ಕಾರಣ 300ನೇ ಏಕದಿನ ಪಂದ್ಯ ಆಡಿದ ಗೇಲ್ ಐತಿಹಾಸಿಕ ಪಂದ್ಯದಲ್ಲಿ ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರ ದಾಖಲೆ ಪುಡಿ ಮಾಡಿದರು.

ಇದನ್ನೂ ಓದಿ: ಗೇಲ್ ಜತೆ ಭರ್ಜರಿ ಡ್ಯಾನ್ಸ್ ಮಾಡಿದ ಕೊಹ್ಲಿ..! ವಿಡಿಯೋ ವೈರಲ್‌!

Tap to resize

Latest Videos

undefined

2ನೇ ಏಕದಿನ ಪಂದ್ಯದಲ್ಲಿ ಗೇಲ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. 11 ರನ್ ಸಿಡಿಸಿ ಗೇಲ್ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಗೇಲ್ 7 ರನ್ ಸಿಡಿಸುತ್ತಿದ್ದಂತೆ, ಲಾರಾ ದಾಖಲೆ ಪುಡಿ ಮಾಡಿದರು. ಏಕದಿನ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಪರ ಗರಿಷ್ಠ ರನ್ ಸಿಡಿಸಿದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಗೇಲ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ:  ಸೌರವ್ ಗಂಗೂಲಿ ದಾಖಲೆ ಮುರಿದ ವಿರಾಟ್!

ಬ್ರಿಯಾನ್ ಲಾರ ಏಕದಿನ ಕ್ರಿಕೆಟ್‌ನಲ್ಲಿ 10348ರನ್ ಸಿಡಿಸಿದ್ದಾರೆ. ಇದೀಗ ಗೇಲ್ 10353 ರನ್ ಸಿಡಿಸೋ ಮೂಲಕ ಲಾರಾ ಹಿಂದಿಕ್ಕಿ, ವಿಂಡೀಸ್ ಪರ ಗರಿಷ್ಠ ರನ್ ಸಿಡಿಸಿದ ಏಕದಿನ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. 

click me!