ಆಸ್ಟ್ರೇಲಿಯಾ ಫುಟ್ಬಾಲ್ ಪಂದ್ಯಕ್ಕೆ ಅಡ್ಡಿಪಡಿಸಿದ ಕಾಂಗರೂ

First Published Jun 25, 2018, 4:45 PM IST
Highlights

ಫುಟ್ಬಾಲ್ ಪಂದ್ಯ ಸ್ಥಗಿತಗೊಳ್ಳೋದು ವಿರಳ. ಇಂಜುರಿ, ಹಾಗೂ ಇತರ ಕಾರಣಗಳಿಂದ ಹೆಚ್ಚು ಅಂದರೆ 5 ರಿಂದ 10 ನಿಮಿಷ ಪಂದ್ಯ ಸ್ಥಗಿತಗೊಂಡ ಉದಾಹರಣೆಗಳಿವೆ. ಆದರೆ ಆಸ್ಟ್ರೇಲಿಯಾದ ಮಹಿಳಾ ತಂಡದ ಮಹತ್ವದ ಪಂದ್ಯ ಅರ್ಧಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು. ಇದಕ್ಕೆ ಕಾರಣ ಕಾಂಗರೂ. ಏನಿದು ಸ್ಟೋರಿ,ಇಲ್ಲಿದೆ.

ಕ್ಯಾನಬೆರಾ(ಜೂ.25): ಆಸ್ಟ್ರೇಲಿಯಾ ಫಿಪಾ ವಿಶ್ವಕಪ್ ಟೂರ್ನಿಯಲ್ಲಿ ಹೋರಾಟ ನಡೆಸುತ್ತಿದ್ದರೆ, ಇತ್ತ ಆಸ್ಟ್ರೇಲಿಯಾ ಮಹಿಳಾ ತಂಡಗಳಾದ ಕ್ಯಾಪಿಟಲ್ ಫುಟ್ಬಾಲ್ ಕ್ಲಬ್ ಹಾಗೂ ಬೆಲ್ಕಾನೆನ್ ಯುನೈಟೆಡ್ ತಂಡಗಳು ಮಹತ್ವದ ಪಂದ್ಯ ಆಡುತ್ತಿದೆ. ರೋಚಕ ಪಂದ್ಯದ ಮೊದಲಾರ್ಧ ಇನ್ನೇನು ಅಂತ್ಯವಾಗಬೇಕು ಅನ್ನುವಷ್ಟರಲ್ಲೇ ಕಾಂಗರೂ ದಿಢೀರ್ ಎಂಟ್ರಿ ಕೊಟ್ಟು, ಪಂದ್ಯವನ್ನೇ ನಿಲ್ಲಿಸಿಬಿಟ್ಟಿತು.

 

This kangaroo was just trying to get in on the action 🤣 (via ) pic.twitter.com/KejD3OVnO1

— Bleacher Report (@BleacherReport)

 

ಬೆಲ್ಕಾನೆನ್ 1-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿತ್ತು. ಇತ್ತ ಕ್ಯಾಪಿಟಲ್ ತಂಡ ಇನ್ನೇನು ಗೋಲು ಬಾರಿಸಬೇಕು ಅನ್ನುವಷ್ಟರಲ್ಲೇ ಪಂದ್ಯ ಸ್ಥಗಿತಗೊಂಡಿತು. ದಿಢೀರ್ ಆಗಿ ಕಾಂಗರೂ ಮೈದಾನಕ್ಕೆ ಲಗ್ಗೆ ಇಟ್ಟಿತು. ಸುಮಾರು ಅರ್ಧ ಗಂಟೆಗಳಷ್ಟು ಕಾಲ ಕಾಂಗರೂ ಮೈದಾನದಲ್ಲಿ ಸುತ್ತಾಡಿತು.

ಮೈದಾನದಲ್ಲೇ ಬೀಡುಬಿಟ್ಟ ಕಾಂಗರೂ ಒಡಿಸಲು ಸಿಬ್ಬಂಧಿ ಒಳಪ್ರವೇಶಿಸಿ ಬೇಕಾಯಿತು. ಸಿಬ್ಬಂಧಿಗಳ ಪ್ರಯತ್ನದಿಂದ ಕಾಂಗರೂ ಮೈದಾನ ಬಿಟ್ಟು ತೆರಳಿತು. ಬಳಿಕ ಪಂದ್ಯ ಆರಂಭಗೊಂಡಿತು.

click me!