
ಪೋರ್ಟ್ ಎಲಿಜೆಬೆತ್(ಫೆ.15): ಭಾರತ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ವಿಕೆಟ್ ಪಡೆದು, ಅವರಿಗೆ ಕ್ರೀಸ್'ನಿಂದ ಬೀಳ್ಕೊಡುವ ವೇಳೆ ಅನುಚಿತ ವರ್ತನೆ ತೋರಿದ ಕಾರಣ, ಆಫ್ರಿಕಾದ ವೇಗಿ ಕಗಿಸೊ ರಬಾಡಗೆ ಪಂದ್ಯದ ಸಂಭಾವನೆಯ ಶೇ.15ರಷ್ಟನ್ನು ದಂಡವಾಗಿ ವಿಧಿಸಲಾಗಿದೆ. ಇದರೊಂದಿಗೆ ಶಿಸ್ತು ಕ್ರಮಕೈ ಗೊಂಡಾಗ ವಿಧಿಸುವ ಋಣಾತ್ಮಕ ಅಂಕಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ರಬಾಡ ಈ ಮೊದಲು ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 3 ಡಿಮೆರಿಟ್ಸ್ ಅಂಕಗಳನ್ನು ಪಡೆದಿದ್ದರೆ, ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್'ನಲ್ಲಿ ನಡೆದ ಪಂದ್ಯದಲ್ಲಿ ಒಂದು ಡಿಮೆರಿಟ್ಸ್ ಅಂಕವನ್ನು ಪಡೆದಿದ್ದರು. ಒಟ್ಟು 4 ಡಿಮೆರಿಟ್ಸ್ ಅಂಕ ಕಲೆಹಾಕಿದ್ದರಿಂದ ಐಸಿಸಿ ನಿಯಮ ಉಲ್ಲಂಘಿಸಿದ್ದರಿಂದ ಟ್ರೆಂಟ್ ಬ್ರಿಡ್ಜ್ ಪಂದ್ಯಕ್ಕೆ ರಬಾಡ ಮೇಲೆ ನಿಷೇಧ ಹೇರಲಾಗಿತ್ತು.
ಒಂದೊಮ್ಮೆ ಮುಂದಿನ 24 ತಿಂಗಳೊಳಗೆ ಈ ಅಂಕಗಳು 8 ಅಥವಾ ಅದನ್ನು ದಾಟಿದರೆ ರಬಾಡ 2 ಟೆಸ್ಟ್ ಅಥವಾ 1 ಟೆಸ್ಟ್, 2 ಏಕದಿನ/ಟಿ20, ಇಲ್ಲವೇ 4 ಏಕದಿನ/ಟಿ20 ಪಂದ್ಯಗಳಿಂದ ಅಮಾನತುಗೊಳ್ಳಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.