2 ದೇಶಗಳ ಪರ ಕ್ರಿಕೆಟ್ ಈತ ವಿಶ್ವದ 6ನೇ ಆಟಗಾರ

By Suvarna Web DeskFirst Published Feb 14, 2018, 8:26 PM IST
Highlights

ಮಂಗಳವಾರ ಚಾಪ್ಮನ್, ನ್ಯೂಜಿಲೆಂಡ್ ಟಿ20 ತಂಡಕ್ಕೆಕಾಲಿಟ್ಟರು. ಇದಕ್ಕೂ ಮುನ್ನಅವರು ಹಾಂಕಾಂಗ್ ಪರಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು.

ವೆಲ್ಲಿಂಗ್ಟನ್(ಫೆ.14): ಅಂತಾರಾಷ್ಟ್ರೀಯ ಟಿ20ಯಲ್ಲಿ 2 ದೇಶಗಳನ್ನು ಪ್ರತಿನಿಧಿಸಿದ ವಿಶ್ವದ 6ನೇ ಆಟಗಾರ ಎನ್ನುವ ದಾಖಲೆಯನ್ನು ಮಾರ್ಕ್ ಚಾಪ್ಮನ್ ಬರೆದಿದ್ದಾರೆ.

ಮಂಗಳವಾರ ಚಾಪ್ಮನ್, ನ್ಯೂಜಿಲೆಂಡ್ ಟಿ20 ತಂಡಕ್ಕೆ ಕಾಲಿಟ್ಟರು. ಇದಕ್ಕೂ ಮುನ್ನ ಅವರು ಹಾಂಕಾಂಗ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಹಾಂಕಾಂಗ್ ಹಾಗೂ ನ್ಯೂಜಿಲೆಂಡ್ ಎರಡೂ ದೇಶಗಳ ಪೌರತ್ವ ಹೊಂದಿರುವ ಚಾಪ್ಮನ್, 2010ರ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಹಾಂಕಾಂಗ್ ಪರ ಆಡಿದ್ದರು. ಬಳಿಕ 2014ರ ಟಿ20 ವಿಶ್ವಕಪ್‌ನಲ್ಲಿ ಹಾಂಕಾಂಗ್ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ದೇಸಿ ಕ್ರಿಕೆಟ್‌ನಲ್ಲಿ ಚಾಪ್ಮನ್, ನ್ಯೂಜಿಲೆಂಡ್‌ನ ಆಕ್ಲೆಂಡ್ ತಂಡವನ್ನು ಪ್ರತಿನಿಧಿಸುತ್ತಾರೆ. ಈ ಮೊದಲು ವಾನ್ ಡೆರ್ ಮೆರ್ವೆ, ಲ್ಯೂಕ್ ರೊಂಚಿ, ಬಾಯ್ಡ್ ರಾಂಕಿನ್, ಎಡ್ ಜಾಯ್ಸ್,ಡರ್ಕ್ ನ್ಯಾನಸ್, 2 ದೇಶಗಳ ಪರ ಅಂ.ರಾ.ಟಿ20 ಆಡಿದ್ದರು.

click me!