
ಪ್ಯಾರಿಸ್(ಅ.04): ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆಯ ವರ್ಷದ ಅಥ್ಲೀಟ್ ಪ್ರಶಸ್ತಿ ಪಟ್ಟಿಯಲ್ಲಿ ವಿಶ್ವದ ವೇಗದ ಮಾನವ ಉಸೇನ್ ಬೋಲ್ಟ್'ಗೆ ಸ್ಥಾನ ಸಿಕ್ಕಿಲ್ಲ.
ಲಂಡನ್'ನಲ್ಲಿ ನಡೆದ ವಿಶ್ವ ಚಾಂಪಿಯನ್'ಶಿಪ್'ನ 100 ಮೀ. ಓಟದಲ್ಲಿ ಕಂಚು ಗೆದ್ದು, ಬಳಿಕ ಬೋಲ್ಟ್ ವೃತ್ತಿಬದುಕಿಗೆ ವಿದಾಯ ಘೋಷಿಸಿದರಾದರೂ, ಈ ವರ್ಷದ ಪ್ರದರ್ಶನವನ್ನು ಆಧರಿಸಿ ಪ್ರಶಸ್ತಿ ನೀಡುವುದರಿಂದ ಬೋಲ್ಟ್ ಹೆಸರನ್ನು ನಿರೀಕ್ಷೆ ಮಾಡಲಾಗಿತ್ತು. ಜತೆಗೆ 100 ಮೀ. ಓಟದ ವಿಶ್ವ ಚಾಂಪಿಯನ್ ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ ಹೆಸರು ಸಹ ಪಟ್ಟಿಯಲ್ಲಿ ಕಾಣಿಸುತ್ತಿಲ್ಲ.
ಆದರೆ 10,000 ಮೀಟರ್ ವಿಭಾಗದ ವಿಶ್ವಚಾಂಪಿಯನ್ ಮೋ ಫೆರಾ ವರ್ಷದ ಅಥ್ಲೀಟ್ ಪ್ರಶಸ್ತಿ ಪಡೆಯುವ ರೇಸ್'ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.