ಜೆಮಿಯಾ ಆಕರ್ಷಕ ಬ್ಯಾಟಿಂಗ್: ವೆಲಾಸಿಟಿಗೆ ಸವಾಲಿನ ಗುರಿ

By Web DeskFirst Published May 9, 2019, 9:16 PM IST
Highlights

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸೂಪರ್’ನೋವಾಸ್ ಆರಂಭದಲ್ಲೇ ಪ್ರಿಯಾ ಪೂನಿಯಾ[16] ವಿಕೆಟ್ ಕಳೆದುಕೊಂಡಿತು. ಶಿಖಾ ಪಾಂಡೆ ವೆಲಾಸಿಟಿ ತಂಡಕ್ಕೆ ಮೊದಲ ಮುನ್ನಡೆ ತಂದಿತ್ತರು. ಆ ಬಳಿಕ ಚಮಾರಿ ಅಟಪಟ್ಟು ಕೂಡಿಕೊಂಡ ಜೆಮಿಯಾ ರೋಡ್ರಿಗರ್ಸ್ ತಂಡಕ್ಕೆ ಆಸರೆಯಾದರು

ಜೈಪುರ[ಮೇ.09]: ಜೆಮಿಯಾ ರೋಡ್ರಿಗರ್ಸ್ ಆಕರ್ಷಕ ಅರ್ಧಶತಕದ ನೆರವಿನಿಂದ ಸೂಪರ್’ನೋವಾಸ್ ತಂಡವು ನಿಗದಿತ 20 ಓವರ್’ಗಳಲ್ಲಿ 142 ರನ್ ಬಾರಿಸಿದ್ದು, ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡಕ್ಕೆ ಸವಾಲಿನ ಗುರಿ ನೀಡಿದೆ.

Innings Break!

A stupendous knock of 77* by Jemimam guides the Supernovas to a total of 142/3. Onto the bowlers now to defend it? pic.twitter.com/UEqiYwv5sX

— IndianPremierLeague (@IPL)

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸೂಪರ್’ನೋವಾಸ್ ಆರಂಭದಲ್ಲೇ ಪ್ರಿಯಾ ಪೂನಿಯಾ[16] ವಿಕೆಟ್ ಕಳೆದುಕೊಂಡಿತು. ಶಿಖಾ ಪಾಂಡೆ ವೆಲಾಸಿಟಿ ತಂಡಕ್ಕೆ ಮೊದಲ ಮುನ್ನಡೆ ತಂದಿತ್ತರು. ಆ ಬಳಿಕ ಚಮಾರಿ ಅಟಪಟ್ಟು ಕೂಡಿಕೊಂಡ ಜೆಮಿಯಾ ರೋಡ್ರಿಗರ್ಸ್ ತಂಡಕ್ಕೆ ಆಸರೆಯಾದರು. ಈ ಜೋಡಿ ಎರಡನೇ ವಿಕೆಟ್’ಗೆ 53 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 80ರ ಗಡಿ ದಾಟಿಸಿದರು. ಉತ್ತಮವಾಗಿ ಆಡುತ್ತಿದ್ದ ಚಮಾರಿ 31 ರನ್ ಬಾರಿಸಿ ಅಮೇಲಿಯಾ ಕೆರ್ರ್’ಗೆ ವಿಕೆಟ್ ಒಪ್ಪಿಸಿದರು. ಸೋಪಿಯಾ ಡಿವೈನ್ ಬ್ಯಾಟಿಂಗ್ ಕೇವಲ 9 ರನ್’ಗಳಿಗೆ ಸೀಮಿತವಾಯಿತು. ಮತ್ತೊಂದೆಡೆ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ರೋಡ್ರಿಗರ್ಸ್ ಕೇವಲ 48 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 77 ರನ್ ಬಾರಿಸಿ ಅಜೇಯರಾಗುಳಿದರು.

ವೆಲಾಸಿಟಿ ಪರ ಅಮೇಲಿಯಾ ಕೆರ್ರ್ 2 ವಿಕೆಟ್ ಪಡೆದರೆ, ಶಿಖಾ ಪಾಂಡೆ 1 ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್:

ಸೂಪರ್’ನೋವಾ: 142/3

ರೋಡ್ರಿಗರ್ಸ್: 77*

ಅಮೇಲಿಯಾ ಕೆರ್ರ್: 21/2

(* ವಿವರ ಅಪೂರ್ಣ]

click me!