ಮ್ಯಾಚ್ ಫಿಕ್ಸಿಂಗ್ ಮಾಡುವವರಿಗೆ ಮರಣದಂಡನೆ ನೀಡಿ

By Suvarna Web DeskFirst Published Mar 19, 2017, 3:21 AM IST
Highlights

ಇತ್ತೀಚೆಗಷ್ಟೇ ಮುಕ್ತಾಯವಾದ ಪಾಕಿಸ್ತಾನ ಸೂಪರ್ ಲೀಗ್'ನಲ್ಲಿ ಕಳ್ಳಾಟ ನಡೆದಿದೆ ಎಂಬ ಆರೋಪದಡಿ ಈಗಾಗಲೇ ನಾಲ್ವರು ಆಟಗಾರರನ್ನು ಪಿಸಿಬಿ ಅಮಾನತು ಮಾಡಿದೆ.

ಕರಾಚಿ(ಮಾ.19): ಆಟಗಾರರು ಮೋಸದಾಟದಲ್ಲಿ ಭಾಗವಹಿಸುವುದನ್ನು ತಡೆಯಬೇಕಾದರೆ ಮರಣದಂಡನೆಯಂತಹ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟ್ ಕಳ್ಳಾಟದಲ್ಲಿ ಭಾಗವಹಿಸಿದ ಆಟಗಾರರ ಬಗ್ಗೆ ಮೃಧು ಧೋರಣೆ ತಳೆಯುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಮರಣದಂಡನೆಯಂತಹ ಕಠಿಣ ಶಿಕ್ಷೆ ನೀಡುವುದರಿಂದ ಮ್ಯಾಚ್'ಫಿಕ್ಸಿಂಗ್'ಗೆ ಕಡಿವಾಣ ಹಾಕಲು ಸಾಧ್ಯವಾಗಬಹುದು ಎಂದಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಪಾಕಿಸ್ತಾನ ಸೂಪರ್ ಲೀಗ್'ನಲ್ಲಿ ಕಳ್ಳಾಟ ನಡೆದಿದೆ ಎಂಬ ಆರೋಪದಡಿ ಈಗಾಗಲೇ ನಾಲ್ವರು ಆಟಗಾರರನ್ನು ಪಿಸಿಬಿ ಅಮಾನತು ಮಾಡಿದೆ.

"ಸಂಬಂಧಪಟ್ಟ ಅಧಿಕಾರಿಗಳು ಕಳಂಕಿತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು, ಇಲ್ಲದೇ ಹೋದರೆ ಇಂಥಹದ್ದಕ್ಕೆಲ್ಲಾ ಕಡಿವಾಣವೇ ಇರುವುದಿಲ್ಲ ಎಂದು ಮಿಯಾಂದಾದ್ ಹೇಳಿದ್ದಾರೆ.

click me!