
ಕೇಪ್'ಟೌನ್(ಜ.03): ದಕ್ಷಿಣ ಆಫ್ರಿಕಾದಲ್ಲಿ ಇನ್ನೊಬ್ಬ ಹೊಸ ಬೌಲರ್ ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಲು ವೇದಿಕೆ ಸಿದ್ದವಾಗಿದೆ. ಸೀಮಿತ ಓವರ್ ಪಂದ್ಯಗಳ ಸ್ಪೆಷಲಿಸ್ಟ್ ಬೌಲರ್ ಜಸ್'ಪ್ರೀತ್ ಬುಮ್ರಾ ಇದೀಗ ಬಿಳಿ ಜೆರ್ಸಿ ಹಾಕಲು ಸಜ್ಜಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಎರಡು ವರ್ಷವಾಗಿದ ಬಳಿಕ ಬುಮ್ರಾಗೆ ಕೊನೆಗೂ ಟೆಸ್ಟ್ ತಂಡದಲ್ಲಿ ಆಡಲು ಅವಕಾಶ ಸಿಕ್ಕಿದೆ. ಐಪಿಎಲ್ ಮೂಲಕ ಬೆಳಕಿಗೆ ಬಂದ ಬುಮ್ರಾ, ತಮ್ಮ ಕರಾರುವಕ್ಕಾದ ಬೌಲಿಂಗ್ ಮೂಲಕ ಟೀಂ ಇಂಡಿಯಾದಲ್ಲೂ ಸ್ಥಾನ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಟೀಂ ಇಂಡಿಯಾ ಪರ ಬುಮ್ರಾ 31 ಟೆಸ್ಟ್ ಪಂದ್ಯಗಳನ್ನಾಡಿದ್ದು 56 ವಿಕೆಟ್ ಕಬಳಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್'ನಲ್ಲೂ ಮ್ಯಾಜಿಕ್ ಮಾಡಿರುವ ಅವರು ತಾವಾಡಿದ 32 ಪಂದ್ಯಗಳಲ್ಲಿ 40 ವಿಕೆಟ್ ಪಡೆದು ಮಿಂಚಿದ್ದಾರೆ.
ಆಫ್ರಿಕಾದಲ್ಲಿ ಚೊಚ್ಚಲ ಟೆಸ್ಟ್ ಆಡಲು ವೇದಿಕೆ ಸಜ್ಜು:
ಇದೇ ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಬುಮ್ರಾ, ದಕ್ಷಿಣ ಆಫ್ರಿಕಾ ವಿರುದ್ದ ಕೇಪ್'ಟೌನ್'ನಲ್ಲಿ ಪದಾರ್ಪಣೆ ಮಾಡಲು ವೇದಿಕೆ ಸಿದ್ದವಾಗಿದೆ. ಈಗಾಗಲೇ ಬುಮ್ರಾ ಟೆಸ್ಟ್ ಡ್ರೆಸ್'ನಲ್ಲಿ ಫೋಟೋ ಶೂಟ್ ಸಹ ನಡೆಸಿದ್ದಾರೆ. ಜತೆಗೆ ಬೌನ್ಸಿ ಪಿಚ್'ನಲ್ಲಿ ಆಫ್ರಿಕಾದ ಬ್ಯಾಟ್ಸ್'ಮನ್'ಗಳನ್ನು ತಬ್ಬಿಬ್ಬುಗೊಳಿಸುವ ವಿಶ್ವಾಸದಲ್ಲಿದ್ದಾರೆ ಬುಮ್ರಾ ಎಂಬ ಚಾಣಾಕ್ಯ ಬೌಲರ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.