ಒಲಿಂಪಿಕ್ಸ್ ಕನಸು ನನಸಾಗಿರಲು ವಿರಾಟ್ ಕೊಹ್ಲಿ ನೆರವು ಯಾಚಿಸಿದ ಟೇಕ್ವಾಂಡೋ ಅಥ್ಲೀಟ್ ಡ್ಯಾನಿಶ್ ಮಂಜೂರ್!

By Naveen KodaseFirst Published Jul 23, 2022, 6:03 PM IST
Highlights

* ಒಲಿಂಪಿಕ್ ಶ್ರೇಯಾಂಕದ ಈವೆಂಟ್‌ನಲ್ಲಿ ಭಾಗವಹಿಸಲು ಸಹಾಯ ಹಸ್ತ ಎದುರು ನೋಡುತ್ತಿರುವ ಡ್ಯಾನಿಶ್ ಮಂಜೂರ್
* ಡ್ಯಾನಿಶ್ ಮಂಜೂರ್ ಯುವ ಟೇಕ್ವಾಂಡೋ ಅಥ್ಲೀಟ್
* ಸಾಮಾಜಿಕ ಜಾಲತಾಣವಾದ ಕೂ ವೇದಿಕೆ ಮೂಲಕ ವಿವಿಧ ಗಣ್ಯರ ಬಳಿ ಸಹಾಯಕ್ಕೆ ಮನವಿ

ಶ್ರೀನಗರ (ಜು.23): ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಯುವ ಟೇಕ್ವಾಂಡೋ ಅಥ್ಲೀಟ್ ಡ್ಯಾನಿಶ್ ಮಂಜೂರ್ ಅವರು ಮುಂದಿನ ತಿಂಗಳು ಆಗಸ್ಟ್‌ನಲ್ಲಿ ಇಸ್ರೇಲ್‌ನ ರಮ್ಲಾದಲ್ಲಿ ನಡೆಯಲಿರುವ ಒಲಿಂಪಿಕ್ ಶ್ರೇಯಾಂಕದ ಈವೆಂಟ್‌ನಲ್ಲಿ(ಜಿ 2) ಭಾಗವಹಿಸಲು ಸಹಾಯ ಹಸ್ತ ಎದುರು ನೋಡುತ್ತಿದ್ದಾರೆ. ಮುಂಬರುವ ಆಗಸ್ಟ್ 12 ರಿಂದ ಆಗಸ್ಟ್ 15 ರವರೆಗೆ ರಾಮ್ಲಾದಲ್ಲಿ ನಡೆಯಲಿರುವ ಒಲಂಪಿಕ್ ಶ್ರೇಯಾಂಕದ ಸ್ಪರ್ಧೆಯಲ್ಲಿ(G2) ಡ್ಯಾನಿಶ್ ಮಂಜೂರ್ ಭಾಗವಹಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣವಾದ ಕೂ ವೇದಿಕೆ ಮೂಲಕ ವಿವಿಧ ಗಣ್ಯರ ಬಳಿ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ. 

ನಾನು ಜಮ್ಮು ಕಾಶ್ಮೀರದ ಡ್ಯಾನಿಶ್ ಮಂಜೂರ್. ನಾನು ಅಂತರಾಷ್ಟ್ರೀಯ ಟೇಕ್ವಾಂಡೋ ಅಥ್ಲೀಟ್. ಇಸ್ರೇಲ್ ನ ರಾಮ್ಲಾದಲ್ಲಿ ಆ.12 ರಿಂದ 15ರವರೆಗೆ ನಡೆಯುವ ಒಲಿಂಪಿಕ್ ಶ್ರೇಯಾಂಕದಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಆದರೆ ದುರದೃಷ್ಟಾವಶಾತ್ ನನಗೆ ಇನ್ನು ಯಾವುದೇ ಪ್ರಾಯೋಜಕತ್ವ ಸಿಕ್ಕಿಲ್ಲ. ವಿರಾಟ್ ಕೊಹ್ಲಿ, ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು, ಅಭಿನವ್ ಬಿಂದ್ರಾ, ಆಸಿಫ್ ಕಮಲ್ ಫೌಂಡೇಶನ್, ಸಂಜನಾ ಫೌಂಡೇಶನ್ ದಯಮಾಡಿ ಸಹಾಯ ಮಾಡುವ ಮೂಲಕ ಬೆಂಬಲಿಸಬೇಕೆಂದು ವಿನಂತಿಸುತ್ತೇನೆ" ಎಂದು ಡ್ಯಾನಿಶ್ ಮಂಜೂರ್ ಕೂ ನಲ್ಲಿ ಬರೆದುಕೊಂಡಿದ್ದಾರೆ .

ನೇಪಾಳದಲ್ಲಿ ಸುರಪುರದ ಬಿಲ್ವಿದ್ಯೆ ಪಟುಗಳ ಮಿಂಚು: ಬಡತನದಲ್ಲೆ ಅರಳಿದ ಪ್ರತಿಭೆಗಳಿಗೆ ರಾಜೂಗೌಡ ಶಹಬ್ಬಾಶ್

58 ಕೆಜಿ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ಅಥ್ಲೀಟ್ ಡ್ಯಾನಿಶ್ ಮಂಜೂರ್ ಅವರಿಗೆ ಈಗಾಗಲೇ ಒಬ್ಬರು ಪ್ರಾಯೋಜಕತ್ವ ದೊರೆತಿದ್ದು, ಅವರು ರೂ.50,000 ನೀಡಲಿದ್ದಾರೆ ಮತ್ತು ಈಗ ಅವರಿಗೆ ತಮ್ಮ ಪ್ರಯಾಣ, ವೀಸಾ, ಹೋಟೆಲ್, ಆಹಾರ, ಮತ್ತು ಪ್ರವೇಶ ಶುಲ್ಕ ಸೇರಿದಂತೆ ರೂ.1,15,000 ಬೇಕಾಗಿದೆ. ಹಾಗಾಗಿ ಮತ್ತೊಬ್ಬ ಪ್ರಾಯೋಜಕರ ಹುಡುಕಾಟದಲ್ಲಿದ್ದಾರೆ.  2021ರಲ್ಲಿ ರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ, ಪಂಜಾಬ್‌ನ ರೋಪರ್‌ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಡ್ಯಾನಿಶ್ ಬೆಳ್ಳಿ ಪದಕವನ್ನು ಗೆದ್ದಿದ್ದರು.

click me!