ಇಂಗ್ಲೆಂಡ್ ಕ್ರಿಕೆಟ್‌ ಸ್ಟೇಡಿಯಂಗೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗನ ಹೆಸರು..!

Published : Jul 23, 2022, 04:29 PM IST
ಇಂಗ್ಲೆಂಡ್ ಕ್ರಿಕೆಟ್‌ ಸ್ಟೇಡಿಯಂಗೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗನ ಹೆಸರು..!

ಸಾರಾಂಶ

* ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಾಧನೆಗೆ ಮತ್ತೊಂದು ಗರಿ * ಇಂಗ್ಲೆಂಡ್‌ನಲ್ಲಿ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ * ಸಂತಸ ವ್ಯಕ್ತಪಡಿಸಿದ ಲಿಟ್ಲ್‌ ಮಾಸ್ಟರ್

ಬೆಂಗಳೂರು(ಜು.23): ಭಾರತ ಕ್ರಿಕೆಟ್ ದಂತಕಥೆ ಸುನಿಲ್‌ ಗವಾಸ್ಕರ್ ಅವರ ಸಾಧನೆಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೇ 73ನೇ ವಸಂತಕ್ಕೆ ಕಾಲಿರಿಸಿದ ಲಿಟ್ಲ್‌ ಮಾಸ್ಟರ್ ಖ್ಯಾತಿಯ ಸುನಿಲ್‌ ಗವಾಸ್ಕರ್‌ ಹಲವಾರು ದಾಖಲೆಯ ಒಡೆಯ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದೀಗ ಇಂಗ್ಲೆಂಡ್‌ನ ಲೀಸೆಸ್ಟರ್‌ ಸ್ಟೇಡಿಯಂಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಹೆಸರಿಡಲು ಮುಂದಾಗಿದೆ. 5 ಎಕರೆ ವಿಸ್ತೀರ್ಣವನ್ನು ಹೊಂದಿರುವ ಕ್ರಿಕೆಟ್ ಸ್ಟೇಡಿಯಂಗೆ ಸುನಿಲ್ ಗವಾಸ್ಕರ್ ಅವರ ಹೆಸರಿಡಲಾಗಿದೆ. ಈ ಮೂಲಕ ಇಂಗ್ಲೆಂಡ್ ಸೇರಿದಂತೆ ಯೂರೋಪ್‌ ಖಂಡದಲ್ಲಿ ಸ್ಟೇಡಿಯಂ ಹೆಸರು ಹೊಂದಿದ ಮೊದಲ ಭಾರತೀಯ ಕ್ರೀಡಾಪಟು ಎನ್ನುವ ಹಿರಿಮೆಗೆ ಸುನಿಲ್ ಗವಾಸ್ಕರ್ ಪಾತ್ರರಾಗಿದ್ದಾರೆ.

ಸುನಿಲ್ ಗವಾಸ್ಕರ್ ಸದ್ಯ ಲಂಡನ್‌ನಲ್ಲಿದ್ದು, ಈ ವಿಚಾರದ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ಲೀಸೆಸ್ಟರ್‌ ಮೈದಾನಕ್ಕೆ ನನ್ನ ಹೆಸರಿಟ್ಟಿರುವುದನ್ನು ಕೇಳಿ ಖುಷಿಯಾಗುತ್ತಿದ್ದೆ ಹಾಗೂ ಇದೊಂದು ಗೌರವದ ಕ್ಷಣ. ಲೀಸೆಸ್ಟರ್ ನಗರದಲ್ಲಿ ಕ್ರಿಕೆಟ್‌ ಪ್ರೀತಿಸುವ ಹಾಗೂ ಬೆಂಬಲಿಸುವ ದೊಡ್ಡ ಸಮೂಹವೇ ಇದೆ. ಅದರಲ್ಲೂ ಭಾರತೀಯ ಕ್ರಿಕೆಟ್ ಬೆಂಬಲಿಗರು ಈ ಭಾಗದಲ್ಲಿ ಹೆಚ್ಚಿದ್ದು, ಇಲ್ಲಿಯೇ ನನ್ನ ಹೆಸರಿನ ಸ್ಟೇಡಿಯಂ ಆಗಿರುವುದು ಗೌರವವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ ಎಂದು ಗವಾಸ್ಕರ್ ಟೈಮ್ಸ್‌ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸುನಿಲ್ ಗವಾಸ್ಕರ್‌, ಲೀಸೆಸ್ಟರ್‌ಗೆ ತೆರಳಲಿದ್ದು, ಅಲ್ಲಿನ ಸ್ಟೇಡಿಯಂನಲ್ಲಿನ ಪೆವಿಲಿಯನ್‌ನಲ್ಲಿ ಚಿತ್ರಿಸಲಾಗಿರುವ ತಮ್ಮ ದೊಡ್ಡ ಫೋಟೋವನ್ನು ಅನಾವರಣ ಮಾಡಲಿದ್ದಾರೆ. ಭಾರತ ಸ್ಪೋರ್ಟ್ಸ್‌ ಅಂಡ್ ಕ್ರಿಕೆಟ್ ಕ್ಲಬ್ ಈ ಸ್ಟೇಡಿಯಂ ನಿರ್ಮಿಸಿದ್ದು, ಪೆವಿಲಿಯನ್‌ನ ಸಂಪೂರ್ಣ ಗೋಡೆಯ ಮೇಲೆ ಬೃಹದಾಕಾರದ ಸುನಿಲ್‌ ಗವಾಸ್ಕರ್ ಅವರ ಚಿತ್ರವನ್ನು ಬರೆಯಲಾಗಿದೆ.

ಜಡೇಜಾ ಇಂಜುರಿ; ಶ್ರೇಯಸ್ ಅಯ್ಯರ್‌ಗೆ ಒಲಿದ ಟೀಂ ಇಂಡಿಯಾ ಉಪನಾಯಕ ಪಟ್ಟ..!

ಲೀಸೆಸ್ಟರ್‌ನಲ್ಲಿ ಸ್ಟೇಡಿಯಂ ನಿರ್ಮಾಣವಾಗುವುದರ ಹಿಂದೆ ಅಲ್ಲಿನ ಭಾರತೀಯ ಮೂಲದ ಸಂಸದ ಕೇಥ್ ವ್ಯಾಜ್‌ ಅವರ ಪರಿಶ್ರಮ ಸಾಕಷ್ಟಿದೆ. ಯುನೈಟೆಡ್ ಕಿಂಗ್‌ಡಮ್‌ನ ಪಾರ್ಲಿಮೆಂಟ್‌ನಲ್ಲಿ ಕಳೆದ 32 ವರ್ಷಗಳಿಂದ ಕೇಥ್ ವ್ಯಾಜ್‌ ಸಂಸದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಈ ಸ್ಟೇಡಿಯಂಗೆ ಸುನಿಲ್ ಗವಾಸ್ಕರ್ ಅವರ ಹೆಸರಿನ್ನಿಡಲು ಅವರು ಒಪ್ಪಿಕೊಂಡಿದ್ದನ್ನು ಕೇಳಿ ನಾವಂತೂ ರೋಮಾಂಚಿತರಾಗಿದ್ದೇವೆ. ಅವರೊಬ್ಬ ಜೀವಂತ ದಂತಕಥೆ. ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಕೇವಲ ಭಾರತೀಯರಷ್ಟೇ ಅಲ್ಲದೇ ಇಡೀ ಕ್ರಿಕೆಟ್ ಜಗತ್ತೇ ಎಂಜಾಯ್ ಮಾಡಿದೆ. ಅವರು ಕೇವಲ ಲಿಟ್ಲ್‌ ಮಾಸ್ಟರ್ ಅಲ್ಲ ಬದಲಾಗಿ ಇಡೀ ಕ್ರಿಕೆಟ್‌ಗೆ ಮಾಸ್ಟರ್‌ ಎಂದು ವ್ಯಾಜ್ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ಕೀರ್ತಿ ಸುನಿಲ್ ಗವಾಸ್ಕರ್ ಅವರ ಹೆಸರಿನಲ್ಲಿದೆ. ಈ ಮೊದಲು ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಜಾನ್‌ಜಿಬರ್ ಹಾಗೂ ಕೆಂಟಕಿನಲ್ಲಿ ಸ್ಟೇಡಿಯಂ ನಿರ್ಮಾಣ ಮಾಡಲಾಗಿದೆ. ಆದರೆ ಇದೀಗ ಇದೇ ಮೊದಲ ಬಾರಿಗೆ ಕ್ರಿಕೆಟ್ ಜನಕರ ನಾಡಾದ ಇಂಗ್ಲೆಂಡ್‌ನಲ್ಲಿ ಭಾರತೀಯ ಆಟಗಾರನ ಹೆಸರಿನಲ್ಲಿ ಸ್ಟೇಡಿಯಂ ತಲೆ ಎತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಿವೀಸ್ ಸರಣಿ: ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಮತ್ತಷ್ಟು ತಡ; ಈ ಆಟಗಾರನಿಗೆ ಚಾನ್ಸ್?
2025ರಲ್ಲಿ ಅತೀ ಹೆಚ್ಚು ಗೂಗಲ್‌ ಹುಡುಕಾಟದಲ್ಲಿ ಇವರೇ ಟಾಪ್! ಕ್ರಿಕೆಟ್ ಲೋಕದ ಅಚ್ಚರಿಯ ಮುಖಗಳಿವು