ಐಎಸ್ಎಲ್ 2018: ಕೇರಳ ಬ್ಲಾಸ್ಟರ್ಸ್-ಡೆಲ್ಲಿ ಡೈನಾಮೊಸ್ ಪಂದ್ಯ ಡ್ರಾ!

By Web DeskFirst Published Oct 20, 2018, 10:07 PM IST
Highlights

ಇಂಡಿಯನ್ ಸೂಪರ್ ಲೀಗ್ ಟೂರ್ನಿಯ 13ನೇ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಆತಿಥೇಯ ಕೇಳ ಗೆಲುವಿನ ಫೇವರಿಟ್ ಆಗಿದ್ದರೂ, ಪಂದ್ಯವನ್ನ ಡ್ರಾಮಾಡುವಲ್ಲಿ ಡೆಲ್ಲಿ ಯಶಸ್ವಿಯಾಗಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್!

ಕೊಚ್ಚಿ(ಅ.20):  ಕೇರಳಾ ಬ್ಲಾಸ್ಟರ್ಸ್ ಹಾಗೂ ಡೆಲ್ಲಿ ಡೈನಾಮೊಸ್ ನಡುವಿನ ಐಎಸ್ಎಲ್ ಲೀಗ್ ಪಂದ್ಯ 1-1 ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಕೇರಳದ ಪರ ಸಿ ಕೆ ವಿನೀತ್ 48ನೇ ನಿಮಿಷದಲ್ಲಿ ಹಾಗೂ  ಅಂಡ್ರಿಜ ಕಾಲುಜರೊವಿಕ್ ಡೆಲ್ಲಿ ಡೈನಮೋಸ್ ಪರ 84ನೇ ನಿಮಿಷದಲ್ಲಿ ಗೋಲು ಗಳಿಸುವುದರೊಂದಿಗೆ ಇಂಡಿಯನ್ ಸೂಪರ್ ಲೀಗ್ ನ 13ನೇ ಪಂದ್ಯ 1-1 ಗೋಲಿನಿಂದ ಸಮಬಲಗೊಂಡಿತು.

ಮೊದಲಾರ್ಧದಲ್ಲಿ  ಗೋಲು ದಾಖಲಾಗದಿದ್ದರೂ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದವು. ಮನೆಯಂಗಣದಲ್ಲಿ ಕೇರಳಕ್ಕೆ ನಾಲ್ಕು ಬಾರಿ ಗೋಲು ಗಳಿಸುವ ಅವಕಾಶವಿದ್ದಿತ್ತು. ಆದರೆ ಸಿಕ್ಕ ಅವಕಾಶಕ್ಕೆ ಗೋಲಿನ ರೂಪು ನೀಡುವಲ್ಲಿ ಆತಿಥೇಯ ತಂಡ ವಿಲವಾಯಿತು. 

ಡೆಲ್ಲಿ ಡೈನಮೋಸ್ ತಂಡ ಆರಂಭದಿಂದಲೂ ಕೇರಳದ ಮೇಲೆ ಒತ್ತಡ ಹೇರಿತ್ತು. 28ನೇ ನಿಮಿಷದಲ್ಲಿ ನಾರಾಯಣ ದಾಸ್ ನೀಡಿದ ಕಾರ್ನರ್ ಕಿಕ್ , 18ನೇ ನಿಮಿಷದಲ್ಲಿ ಹಲಿಚರಣ್ ನಾರ್ಜರಿ ಸೇರಿದಂತೆ ಹಲವು ಅವಕಾಶವನ್ನ ಡೆಲ್ಲಿ ಕೂಡ ಮಿಸ್ ಮಾಡಿಕೊಂಡಿತು.

ಕೊಚ್ಚಿಯ ನೆಹರು ಕ್ರೀಡಾಂಗಣದಲ್ಲಿ ಕೇರಳ ತಂಡ ಗೆಲ್ಲುವ ಫೇವರಿಟ್ ಆಗಿತ್ತು. ಆದರೆ ಈ ಬಾರಿಯ ಐಎಸ್‌ಎಲ್‌ನಲ್ಲಿ ಅನಿರೀಕ್ಷಿತ ಫಲಿತಾಂಶಗಳೇ ಬಂದಿರುವುದರಿಂದ ಫೇವರಿಟ್ ತಂಡವನ್ನು ನಿಖರವಾಗಿ ಹೇಳುವುದು ಕಷ್ಟಸಾಧ್ಯ . ಕೋಲ್ಕೊತಾ ವಿರುದ್ಧದ ಪಂದ್ಯದಲ್ಲಿ ಕೇರಳ ಜಯ ಗಳಿಸಿತ್ತು. ಮುಂಬೈ ವಿರುದ್ಧದ ಪಂದ್ಯದಲ್ಲಿ ಅಂತಿಮ ಕ್ಷಣದಲ್ಲಿ ಎದುರಾಳಿ ತಂಡಕ್ಕೆ ಗೋಲು ನೀಡಿ ಅಂಕವನ್ನು ಹಂಚಿಕೊಂಡಿತ್ತು. 
ಮನೆಯಂಗಣದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರಿಂದ ಬೆಂಬಲ ಪಡೆಯುವ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಜಯದ ಹೊರತಾಗಿ ಬೇರೆ ಪ್ರಕಾರದ ಲಿತಾಂಶದಲ್ಲಿ ನಿರೀಕ್ಷೆಯನ್ನು ಹೊಂದಿಲ್ಲ.  ಈ ರೀತಿಯ ಲಿತಾಂಶ ಪಡೆಯುವ ಸಾಮರ್ಥ್ಯವನ್ನೂ ತಂಡ ಹೊಂದಿದೆ.

ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಅಂಕ ಗಳಿಸಿರುವ ಡೆಲ್ಲಿ ತಂಡ ಎಟಿಕೆ ವಿರುದ್ಧ ಸೋಲನುಭವಿಸಿತ್ತು. ಆಡಿರುವ ಎರಡು ಪಂದ್ಯಗಳಲ್ಲಿ ಡೆಲ್ಲಿ ಕೊನೆಯ ಕ್ಷಣದಲ್ಲಿ ಗೋಲು ನೀಡಿ ಆಘಾತ ಅನುಭವಿಸಿತ್ತು. 

click me!