
ಬೆಂಗಳೂರು(ನ.26): ಉದಾಂತ್ ಸಿಂಗ್ (87ನೇ ನಿಮಿಷ) ಗಳಿಸಿದ ಗೋಲಿನಿಂದ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ 1-0 ಗೋಲಿನಿಂದ ಜಯಗಳಿಸಿ ನಾಯಕ ಸುನಿಲ್ ಛೆಟ್ರಿ ಗೆ ಜಯದ ಉಡುಗೊರೆ ನೀಡಿತು. ಈ ಜಯದೊಂದಿಗೆ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.
ಕಂಠೀರವ ಕ್ರೀಡಾಂಗಣ ನಿನ್ನೆಯ ದಿನ ನೋವಿನ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ನಟ, ರಾಜಕಾರಣ ಅಂಬರೀಶ್ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕಾಗಿ ಕಂಠೀರವ ಕ್ರೀಡಾಂಗಣದಲ್ಲಿ ಇರಿಸಲಾಗಿತ್ತು. ಆದರೆ ಸೋಮವಾರ ಅಲ್ಲಿಯ ದೃಶ್ಯವೇ ಬೇರೆಯಾಗಿತ್ತು, ಅಲ್ಲಿ ಫುಟ್ಬಾಲ್ ಸಂಭ್ರಮ ಮನೆ ಮಾಡಿತ್ತು.
ಡೆಲ್ಲಿ ಡೈನಮೋಸ್ ಹಾಗೂ ಬೆಂಗಳೂರು ತಂಡಗಳ ನಡುವಿನ ಇಂಡಿಯನ್ ಸೂಪರ್ ಲೀಗ್‌ನ 40ನೇ ಪಂದ್ಯದ ಮೊದಲಾರ್ಧದಲ್ಲಿ ಗೋಲು ದಾಖಲಾಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಸ್ವೀಡ್ ಸ್ಟಾರ್ ಉದಾಂತ್ ಸಿಂಗ್ ಗೋಲು ಗಳಿಸಿ ಬೆಂಗಳೂರು ಎಫ್‌ಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಪಂದ್ಯ ಮುಕ್ತಾಯಗೊಂಡಾದ ಬೆಂಗಳೂರು 1-0 ಅಂತರ ಗೆಲುವು ಸಾಧಿಸಿತು.
ಇದುವರೆಗೂ ಬೆಂಗಳೂರು ಎಫ್ ಸಿ ಪರ 150 ಪಂದ್ಯಗಳನ್ನಾಡಿರುವ ನಾಯಕ ಸುನಿಲ್ ಛೆಟ್ರಿಗೆ 150 ನೇ ನಂಬರಿನ ಜೆರ್ಸಿ ನೀಡಿ ಗೌರವಿಸಲಾಯಿತು. 2013ರಲ್ಲಿ ಬೆಂಗಳೂರು ಎಫ್ ಸಿ ಸೇರಿದ ಛೆಟ್ರಿ ಇದುವರೆಗೂ 75 ಗೋಲುಗಳನ್ನು ಗಳಿಸಿದ್ದಾರೆ. ಛೆಟ್ರಿ ನಾಯಕತ್ವದಲ್ಲಿ ಬೆಂಗಳೂರು ತಂಡ ಕಳೆದ ಬಾರಿಯ ಐ ಎಸ್ ಎಲ್ ನಲ್ಲಿ ಫೈನಲ್ ತಲುಪಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.