ಟೆಸ್ಟ್ ಸರಣಿ ಗೆಲುವಿಗೆ ಆಸಿಸ್ ತಂಡಕ್ಕೆ ಪಾಂಟಿಂಗ್ ಸಲಹೆ!

By Web DeskFirst Published Nov 26, 2018, 9:29 PM IST
Highlights

ಭಾರತ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾ ತಂಡಕ್ಕೆ ಮಾಜಿ ನಾಯಕ ಸಲಹೆ ನೀಡಿದ್ದಾರೆ. ರಿಕಿ ಪಾಂಟಿಂಗ್ ನೀಡಿದ ಸಲಹೆ ಪಾಲಿಸದರೆ ಆಸಿಸ್ ಸರಣಿ ಗೆಲ್ಲುತ್ತಾ? ಇಲ್ಲಿದೆ ಹೆಚ್ಚಿನ ವಿವರ.

ಸಿಡ್ನಿ(ನ.26): ಭಾರತ ವಿರುದ್ಧದ ಟಿ20 ಸರಣಿ ಸಮಬಲ ಮಾಡಿಕೊಂಡಿರುವ ಆಸ್ಟ್ರೇಲಿಯಾ ಇದೀಗ ಟೆಸ್ಟ್ ಸರಣಿಯತ್ತ ಚಿತ್ತ ಹರಿಸಿದೆ. ಇದಕ್ಕಾಗಿ ಅಭ್ಯಾಸ ಕೂಡ ಆರಂಭಿಸಿದೆ. ಇದೀಗ ಭಾರತ ವಿರುದ್ಧ ಟೆಸ್ಟ ಸರಣಿ ಗೆಲುವಿಗೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಸಲಹೆ ನೀಡಿದ್ದಾರೆ.

ಡಿಸೆಂಬರ್ 6 ರಿಂದ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಉತ್ತಮ ಪ್ರದರ್ಶನ ನೀಡಲು ಕೆಲ ಬದಲಾವಣೆ ಮಾಡಬೇಕು ಎಂದು ಪಾಂಟಿಂಗ್ ಹೇಳಿದ್ದಾರೆ. ಬ್ಯಾಟಿಂಗ್ ಆರ್ಡರ್‌ನಲ್ಲಿ ಬದಲಾವಣೆ ಮಾಡಿದರೆ ಟೀಂ ಇಂಡಿಯಾ ವಿರುದ್ಧ ಸರಣಿ ಗೆಲುವು ಖಚಿತ ಎಂದಿದ್ದಾರೆ.

ಆ್ಯರೋನ್ ಫಿಂಚ್ ಹಾಗೂ ಮಾರ್ಕಸ್ ಹ್ಯಾರಿಸ್ ಆರಂಭಿಕರಾಗಿ ಕಣಕ್ಕಿಳಿಯಬೇಕು. ಇನ್ನು ಉಸ್ಮಾನ್ ಖವಾಜ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಟಿ20 ಹಾಗೂ ಏಕದಿನ ಮಾದರಿಯಲ್ಲಿ ಆ್ಯರೋನ್ ಫಿಂಚ್ ಆರಂಭಿಕನಾಗಿ ಯಶಸ್ಸು ಕಂಡಿದ್ದಾರೆ. ಅದೇ ಮೈಂಡ್ ಸೆಟ್‌ನಲ್ಲಿ ಫಿಂಚ್ ಕಣಕ್ಕಿಳಿಯಬೇಕು. ಹೀಗಾದಲ್ಲಿ ಅತ್ಯುತ್ತಮ ಆರಂಭ ಸಿಗಲಿದೆ ಎಂದಿದ್ದಾರೆ.

click me!