ISI ಹೆಲ್ಮೆಟ್ ಕಡ್ಡಾಯ: ಪೊಲೀಸರ ಮೇಲೆ ಮೊದಲ ಕಾರ್ಯಾಚರಣೆ..!

By naveena -First Published Jan 13, 2018, 5:22 PM IST
Highlights

ಈ ಮೊದಲು ಮೈಸೂರು ಟ್ರಾಫಿಕ್ ಪೊಲೀಸರು, 'ಆಪರೇಶನ್ ಸೇಫ್ ರೈಡಿಂಗ್' ಹೆಸರಿನಡಿ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿದ ದ್ವಿಚಕ್ರ ವಾಹನ ಸವಾರರ ವಿರುದ್ಧ ಕಾರ್ಯಾಚರಣೆ ನಡೆಸಿ ಸುಮಾರು 15 ಸಾವಿರಕ್ಕೂ ಹೆಚ್ಚು ಹೆಲ್ಮೆಟ್'ಗಳನ್ನು ವಶಕ್ಕೆ ಪಡೆದಿದ್ದರು. ಆ ಬಳಿಕ ಮೈಸೂರು ನಗರದಾದ್ಯಂತ ಸಂಪೂರ್ಣ ತಲೆ ಮುಚ್ಚುವ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.

ಬೆಂಗಳೂರು(ಜ.13): ಐಎಸ್'ಐ, ಬಿಎಸ್'ಐ ಗುರುತು ಹೊಂದಿರದ ದ್ವಿಚಕ್ರ ವಾಹನ ಸವಾರರಿಗೆ ಐಎಸ್'ಐ ಮಾರ್ಕಿನ ಹೆಲ್ಮೆಟ್ ಖರೀಧಿಸಲು ಜನವರಿ 31ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಫೆಬ್ರವರಿಯಿಂದ ಸಂಚಾರಿ ಪೊಲೀಸರು ಕಾರ್ಯಚರಣೆಗಿಳಿಯಲಿದ್ದಾರೆ.

ಆದರೆ ಇದೀಗ ಹೊಸ ವಿಚಾರವೊಂದು ಹೊರಬಿದ್ದಿದ್ದು, ಹೆಲ್ಮೆಟ್ ಗುಣಮಟ್ಟದ ತಪಾಸಣೆಗೆ ಮೊದಲು ಪೊಲೀಸರೇ ಒಳಗಾಗಲಿದ್ದು, ಆ ಬಳಿಕ ಸಾರ್ವಜನಿಕರ ದ್ವಿಚಕ್ರ ವಾಹನ ಸವಾರರ ತಪಾಸಣೆ ಮಾಡಲಾಗುವುದು ಎಂದು ಪೂರ್ವ ವಲಯದ ಡಿಸಿಪಿ ಟ್ವೀಟ್ ಮಾಡಿದ್ದಾರೆ.

Police Bike Riders 🏍 have been given time to procure ISI mark Helmets up to 31st January. From 1st Feb onwards helmet checking will first start against our own police riders. Then against YOU pic.twitter.com/NxhiMPLBOa

— DCP Traffic East (@DCPTrEastBCP)

click me!