2018ರ ಐಪಿಎಲ್ ಹರಾಜಿನಲ್ಲಿ 12 ದೇಶಗಳ 1122 ಆಟಗಾರರು ನೋಂದಣಿ : ಅಮೆರಿಕಾ, ಸ್ಕಾಟ್'ಲ್ಯಾಂಡ್ ಕಣಕ್ಕೆ

By Suvarna Web DeskFirst Published Jan 13, 2018, 3:31 PM IST
Highlights

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಈ ಬಾರಿಯ ಹರಾಜಿನಲ್ಲಿ ಸ್ಥಾನ ಪಡೆದಿದ್ದು ಒಟ್ಟು 282 ವಿದೇಶಿ ಆಟಗಾರರು ಹರಾಜಾಗುವ ಸಾಧ್ಯತೆಯಿದೆ. ಭಾರತದಿಂದ778 ಮಂದಿ ಹರಾಜು ಪ್ರಕ್ರಿಯೆಯಲ್ಲಿದ್ದಾರೆ.

ಮುಂಬೈ(ಜ.13):  ಬೆಂಗಳೂರಿನಲ್ಲಿ ಜನವರಿ 27 ಹಾಗೂ 28ರಂದು ನಡೆಯುವ 11ನೇ ಆವೃತ್ತಿಗೆ ನಡೆಯುವ ಐಪಿಎಲ್ ಹರಾಜಿನಲ್ಲಿ 12 ದೇಶದಿಂದ 1122 ಮಂದಿ ಆಟಗಾರರು ನೋಂದಣಿ ಮಾಡಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಣೆ ತಿಳಿಸಿದೆ.

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಈ ಬಾರಿಯ ಹರಾಜಿನಲ್ಲಿ ಸ್ಥಾನ ಪಡೆದಿದ್ದು ಒಟ್ಟು 282 ವಿದೇಶಿ ಆಟಗಾರರು ಹರಾಜಾಗುವ ಸಾಧ್ಯತೆಯಿದೆ. ಭಾರತದಿಂದ  778 ಮಂದಿ ಹರಾಜು ಪ್ರಕ್ರಿಯೆಯಲ್ಲಿದ್ದಾರೆ.

ಮಿಚೆಲ್ ಸ್ಟಾರ್ಕ್, ಕ್ರಿಸ್ ಗೇಲ್, ಬೆನ್ ಸ್ಟೋಕ್ಸ್, ಕ್ರಿಸ್ ಲಿನ್, ಇಯೋನ್ ಮಾರ್ಗ'ನ್, ಪ್ಯಾಟ್ ಕಮ್ಮಿನ್ಸ್, ಡಿ. ಬ್ರಾವೋ, ಕಾರ್ಲೋಸ್ ಬ್ರಾತ್'ವೈಟ್, ಎವಿನ್ ಲೆವಿಸ್ ಹಾಗೂ ಜಾಸೆನ್ ಹೋಲ್ಡ್'ರ್, ಶೇನ್ ವ್ಯಾಟ್ಸ್'ನ್, ಮ್ಯಾಕ್ಸ್'ವೆಲ್,ಹಶೀಮ್ ಆಮ್ಲ ಸೇರಿದಂತೆ ಹಲವು ಆಟಗಾರರ ಹಿಂದಿನ ಕರಾರು ಮುಗಿದಿದ್ದು ಇವರೆಲ್ಲರೂ ಮತ್ತೆ ಹೊಸದಾಗಿ ಹರಾಜಾಗಲಿದ್ದಾರೆ.

ಅಘ್ಘಾನಿಸ್ತಾನ 13, ಆಸ್ಟ್ರೇಲಿಯಾ 58, ಬಾಂಗ್ಲಾದೇಶ 8, ಇಂಗ್ಲೆಂಡ್ 26, ಐರ್ಲಾಂಡ್ 2, ನ್ಯೂಜಿಲ್ಯಾಂಡ್ 30, ಸ್ಕಾಟ್'ಲ್ಯಾಂಡ್ 1, ದಕ್ಷಿಣ ಆಫ್ರಿಕಾ 57, ಶ್ರೀಲಂಕಾ 39, ಅಮೆರಿಕ 2, ವೆಸ್ಟ್ ಇಂಡೀಸ್ 39, ಜಿಂಬಾಬ್ವೆ 7 ಮಂದಿ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

click me!