
ಜಮೈಕಾ(ಮಾ.21): ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ನಡೆಯಲಿರುವ 3 ಪಂದ್ಯಗಳ ಟಿ2೦ ಸರಣಿಯಲ್ಲಿ ಪಾಲ್ಗೊಳ್ಳಲು, ವೆಸ್ಟ್'ಇಂಡೀಸ್ ಕ್ರಿಕೆಟ್ ಮಂಡಳಿ ತನ್ನ ಆಟಗಾರರ ಮುಂದೆ ಭರ್ಜರಿ ಪ್ರಸ್ತಾಪವಿಟ್ಟಿದೆ.
ಸರಣಿಯಲ್ಲಿ ಆಡುವ ಎಲ್ಲಾ 13 ಸದಸ್ಯರಿಗೆ ತಲಾ 25೦೦೦ ಅಮೆರಿಕನ್ ಡಾಲರ್ (₹16.30 ಲಕ್ಷ) ನೀಡುವುದಾಗಿ ಘೋಷಿಸಿದೆ ಎಂದು ವರದಿಯಾಗಿದೆ. ಕರಾಚಿಯಲ್ಲಿ ಏ.1, 2 ಹಾಗೂ 3ರಂದು ಪಂದ್ಯಗಳು ನಡೆಯಲಿವೆ.
2009ರಲ್ಲಿ ಲಂಕಾ ಆಟಗಾರರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ, ಜಿಂಬಾಬ್ವೆ ಹೊರತು ಪಡಿಸಿ ಇನ್ಯಾವ ತಂಡವೂ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. ಭದ್ರತೆ ಸಮಸ್ಯೆಯಿಂದಾಗಿ ಆಟಗಾರರು ಪಾಕ್'ಗೆ ತೆರಳಲು ಹಿಂಜರಿಯಬಹುದು ಎನ್ನುವ ದೃಷ್ಟಿಯಿಂದ ವಿಂಡೀಸ್ ಕ್ರಿಕೆಟ್ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.