
ನವದೆಹಲಿ(ಮಾ.21): ಮೊಹಮ್ಮದ್ ಶಮಿ ಕುರಿತ ಟ್ವಿಸ್ಟ್'ಗಳಿಗೆ ಕೊನೆ ಯಾವಾಗ ಎಂದು ತಿಳಿಯುತ್ತಿಲ್ಲ. ಫೆಬ್ರವರಿಯಲ್ಲಿ 2 ದಿನ ಶಮಿ ದುಬೈನಲ್ಲಿದ್ದರು ಎಂದು ಬಿಸಿಸಿಐ ಕೊಲ್ಕತ್ತಾ ಪೊಲೀಸರಿಗೆ ತಿಳಿಸಿದ್ದಾರೆ.
ಶಮಿ ಫೆ.17 ಮತ್ತು 18ರಂದು ದುಬೈನ ಹೋಟೆಲ್‌ವೊಂದರಲ್ಲಿ ತಂಗಿದ್ದರು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೋಲ್ಕತಾ ಪೊಲೀಸರಿಗೆ ಪತ್ರದಲ್ಲಿ ತಿಳಿಸಲಾಗಿದೆ.
ಹಸೀನ್ ಜಹಾನ್ ತಮ್ಮ ಪತಿ ಶಮಿ ಆಫ್ರಿಕಾ ಪ್ರವಾಸದಿಂದ ಹಿಂದಿರುಗುವಾಗ ದುಬೈ ಭೇಟಿ ನೀಡಿದ್ದರು ದೂರಿನಲ್ಲಿ ತಿಳಿಸಿದ್ದರು. ಇದೀಗ ಬಿಸಿಸಿಐ ಕೂಡಾ ಶಮಿ ದುಬೈನಲ್ಲಿದ್ದರು ಎಂದು ದೃಢಪಡಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಿನ್ನೆಯಷ್ಟೇ ಪಾಕ್ ಯುವತಿ ಅಲಿಶ್ಬಾ ಕೂಡಾ ಶಮಿಯನ್ನು ದುಬೈನಲ್ಲಿ ಭೇಟಿಯಾಗಿರುವುದಾಗಿ ತಿಳಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.