
ನವದೆಹಲಿ(ಸೆ.01): ಸೆ. ರಂದು ಬಿಸಿಸಿಐ ಮುಂದಿನ 5 ವರ್ಷಗಳ ಅವಧಿಗೆ ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ವಿತರಿಸಲಿದೆ. ಇದರಿಂದ ಕೇವಲ ಕ್ರಿಕೆಟ್ ಮಂಡಳಿಗಳಿಗೆ ಮಾತ್ರವಲ್ಲ ಎಲ್ಲಾ 8 ಫ್ರಾಂಚೈಸಿ ತಂಡಗಳಿಗೂ ಭಾರೀ ಲಾಭವಾಗುವ ನಿರೀಕ್ಷೆ ಇದೆ. 2018ರ ಐಪಿಎಲ್ ಪಂದ್ಯಾವಳಿ ಮೊದಲ ಎಸೆತ ಕಾಣುವುದಕ್ಕೂ ಮುನ್ನವೇ ಪ್ರತಿ ತಂಡಕ್ಕೂ 150 ಕೋಟಿ ಸಿಗಲಿದೆ ಎಂದು ಹೇಳಲಾಗಿದೆ
ಅಂದಾಜಿನ ಪ್ರಕಾರ ಮಾಧ್ಯಮ ಪ್ರಸಾರ ಹಕ್ಕು ವಿತರಣೆಯಿಂದ ಬಿಸಿಸಿಐ ಮುಂದಿನ 5 ವರ್ಷಕ್ಕೆ (2018-2022) ಕನಿಷ್ಠ ₹12000-14000 ಕೋಟಿ ಪಡೆಯಲಿದೆ ಎನ್ನಲಾಗಿದೆ. ಇದರೊಂದಿಗೆ ಶೀರ್ಷಿಕೆ ಪ್ರಾಯೋಜಕತ್ವ ಹೊಂದಿರುವ ‘ವೀವೋ’ ಸಂಸ್ಥೆ ಈಗಾಗಲೇ ₹700-800 ಸಿಗಲಿದೆ. ಒಟ್ಟಾರೆಯಾಗಿ ಬಿಸಿಸಿಐನ ಆದಾಯ 2199 ಕೋಟಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ ಇನ್ನೂ ಮೂರು ನಾಲ್ಕು ಅಧಿಕೃತ ಪ್ರಾಯೋಜಕರಿಂದ ಬಿಸಿಸಿಐಗೆ 700-800 ಸಿಗಲಿದೆ.
ಒಟ್ಟಾರೆಯಾಗಿ ಬಿಸಿಸಿಐನ ಆದಾಯ 15000 ತಲುಪಲಿದೆ. ಅಂದರೆ ವರ್ಷಕ್ಕೆ 3000 ಕೋಟಿ ಆದಾಯ ಬಿಸಿಸಿಐ ಬೊಕ್ಕಸಕ್ಕೆ ಸೇರಲಿದೆ. ಒಪ್ಪಂದದಂತೆ ಮುಂದಿನ ವರ್ಷದಿಂದ ಬಿಸಿಸಿಐ ತನ್ನ ಆದಾಯದ ಶೇ.40೦ರಷ್ಟನ್ನು ಫ್ರಾಂಚೈಸಿಗಳಿಗೆ ಹಂಚಲಿದೆ. ಅಂದರೆ 1200 ಕೋಟಿಯನ್ನು 8 ಫ್ರಾಂಚೈಸಿಗಳಿಗೆ ತಲಾ 150 ಕೋಟಿಯಂತೆ ನೀಡಲಿದೆ. ವರದಿಗಳ ಪ್ರಕಾರ ಆಟಗಾರರ ಸಂಭಾವನೆ, ಫ್ರಾಂಚೈಸಿ ಮೊತ್ತ, ನಿರ್ವಹಣೆ ವೆಚ್ಚ ಎಂದು ಪ್ರತಿ ತಂಡ ವರ್ಷಕ್ಕೆ 120-130 ಕೋಟಿ ಖರ್ಚು ಮಾಡಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.