ಕಿಂಗ್ಸ್ XI ಪಂಜಾಬ್ ಫುಲ್ ಟೀಂ- ದಾಖಲೆ ಬರೆದ ವರುಣ್ ಚಕ್ರವರ್ತಿ!

Published : Dec 18, 2018, 10:31 PM ISTUpdated : Dec 18, 2018, 10:33 PM IST
ಕಿಂಗ್ಸ್ XI ಪಂಜಾಬ್ ಫುಲ್ ಟೀಂ- ದಾಖಲೆ ಬರೆದ ವರುಣ್ ಚಕ್ರವರ್ತಿ!

ಸಾರಾಂಶ

ಐಪಿಎಲ್ ಹರಾಜಿನ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹೇಗಿದೆ? ಯಾರೆಲ್ಲಾ ತಂಡ ಸೇರಿಕೊಂಡಿದ್ದಾರೆ. ಪಂಜಾಬ್ ತಂಡದಲ್ಲಿ ಜಾಕ್‌ಪಾಟ್ ಹೊಡೆದಿದ್ದು ಯಾರಿಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಜೈಪುರ(ಡಿ.18): ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ  13 ಆಟಗಾರರನ್ನ ಖರೀದಿಸಿತು. ಈ ಮೂಲಕ ಒಟ್ಟು 23 ಆಟಗಾರರ ಪಂಜಾಬ್ ತಂಡ ಈ ಬಾರಿಯ ಐಪಿಎಲ್ ಹೋರಾಟಕ್ಕೆ ಸಜ್ಜಾಗಿದೆ. ಈ ಹರಾಜಿನಲ್ಲಿ ತಮಿಳುನಾಡು ಯುವ ಕ್ರಿಕೆಟಿಗ ವರುಣ್ ಚಕ್ರವರ್ತಿಗೆ ಪಂಜಾಬ್ ತಂಡ ಬರೋಬ್ಬರಿ 8.4 ಕೋಟಿ ರೂಪಾಯಿ ನೀಡಿ ಖರೀದಿಸಿತು.

ಇದನ್ನೂ ಓದಿ: ಹರಾಜಿನ ಬಳಿಕ RCB ಕಂಪ್ಲೀಟ್ ತಂಡ ಹೀಗಿದೆ ನೋಡಿ!

ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ಕ್ರಿಕೆಟಿಗರಲ್ಲಿ ವರುಣ್ ಚಕ್ರವರ್ತಿ, ರಾಜಸ್ಥಾನ ರಾಯಲ್ಸ್ ತಂಡದ ಜಯದೇವ್ ಉನಾದ್ಕಟ್ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. 6 ಕ್ರಿಕೆಟಿಗರನ್ನ ಪಂಜಾಬ್ ಕೋಟಿ ಮೊತ್ತಕ್ಕೆ ಖರೀದಿಸಿದೆ.

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ಫುಲ್ ಟೀಂ: ಕೋಟಿ ಬಾಚಿಕೊಂಡ ಐವರು ಕ್ರಿಕೆಟಿಗರು..!​​​​​​​

ಹರಾಜಿನಲ್ಲಿ ಖರೀದಿಸಿದ ಆಟಗಾರರು:
ವರುಣ್ ಚಕ್ರವರ್ತಿ - 8.4 ಕೋಟಿ
ಸ್ಯಾಮ್ ಕುರ್ರನ್ - 7.2 ಕೋಟಿ
ಮೊಹಮ್ಮದ್ ಶಮಿ- 4.3 ಕೋಟಿ
ಪ್ರಭಾಸಿಮ್ರನ್ ಸಿಂಗ್ - 4.8 ಕೋಟಿ
ನಿಕೋಲಾಸ್ ಪೂರನ್ - 4.2 ಕೋಟಿ
ಮೊಯಿಸಿಸ್ ಹೆನ್ರಿಕೆಸ್ - 1 ಕೋಟಿ
ಹರ್ದಸ್ ವಿಲ್ಜೋನ್ - 75 ಲಕ್ಷ 
ದರ್ಶನ್ ನಲ್ಕಂಡೆ - 30 ಲಕ್ಷ
ಸರ್ಫರಾಜ್ ಖಾನ್ 25 ಲಕ್ಷ
ಅರ್ಶದೀಪ್ ಸಿಂಗ್ - 20 ಲಕ್ಷ
ಅಗ್ನಿವಶ್ ಆಯ್ಚಿ - 20 ಲಕ್ಷ
ಹರ್ಪ್ರೀತ್ ಬಾರ್ - 20 ಲಕ್ಷ
ಮುರುಗನ್ ಅಶ್ವಿನ್ - 20 ಲಕ್ಷ

ತಂಡದಲ್ಲೇ ಉಳಿಸಿಕೊಂಡಿದ್ದ ಆಟಗಾರರು:
ಆರ್ ಅಶ್ವಿನ್, ಕೆಎಲ್ ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಅಂಕಿತ್ ರಜಪೂತ್, ಮುಜೀಬ್ ರಹೆಮಾನ್, ಕರುಣ್ ನಾಯರ್, ಡೇವಿಡ್ ಮಿಲ್ಲರ್, 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರ್ಜುನ್ ತೆಂಡೂಲ್ಕರ್-ಸಾನಿಯಾ ಮದುವೆಗೆ ರಾಹುಲ್ ಗಾಂಧಿ ಆಹ್ವಾನಿಸಿದ ಸಚಿನ್ ಫ್ಯಾಮಿಲಿ!
T20 ವಿಶ್ವಕಪ್‌ನಲ್ಲಿ ಇದೇ ಮೊದಲು! ಡಬಲ್ ಸೂಪರ್ ಓವರ್‌ಗೆ ಸಾಕ್ಷಿಯಾದ ದಕ್ಷಿಣ ಆಫ್ರಿಕಾ-ಆಫ್ಘಾನಿಸ್ತಾನ ಮ್ಯಾಚ್! ಗೆದ್ದಿದ್ದು ಯಾರು?