ಬಿಕರಿಯಾಗದ ಟಾಪ್ ಫೈವ್ ಸ್ಟಾರ್ ಕ್ರಿಕೆಟಿಗರಿವರು

By Suvarna Web DeskFirst Published Feb 20, 2017, 11:36 AM IST
Highlights

ಅಂತಾರಾಷ್ಟ್ರೀಯ ಕ್ರಿಕೆಟ್‌'ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಅನುಭವಿ ಆಟಗಾರರನ್ನು ಫ್ರಾಂಚೈಸಿಗಳು ಕಡೆಗಣಿಸಿದ್ದು ವಿಚಿತ್ರವೆನಿಸಿತು.

ಬೆಂಗಳೂರು(ಫೆ.20): ಹತ್ತನೇ ಐಪಿಎಲ್ ಹರಾಜಿನಲ್ಲಿ ಇಬ್ಬರು ಆಫ್ಘನ್ ಆಟಗಾರರು, ಓರ್ವ ಯುಎಇ ಆಟಗಾರ ಬಿಕರಿಯಾದರೂ, ಅಂತಾರಾಷ್ಟ್ರೀಯ ಕ್ರಿಕೆಟ್‌'ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಅನುಭವಿ ಆಟಗಾರರನ್ನು ಫ್ರಾಂಚೈಸಿಗಳು ಕಡೆಗಣಿಸಿದ್ದು ವಿಚಿತ್ರವೆನಿಸಿತು.

1. ಇಶಾಂತ್ ಶರ್ಮ

ಹರಾಜಿಗೆ 2 ಕೋಟಿ ರು. ಮೂಲಧನದೊಂದಿಗೆ ಇದ್ದ ಏಳು ಮಂದಿ ಪ್ರಮುಖ ಆಟಗಾರರಲ್ಲಿ ಗುರುತಿಸಿಕೊಂಡಿದ್ದ ಇಶಾಂತ್ ಶರ್ಮಾ ಕಡೆಗಣನೆಗೆ ಒಳಗಾದ ಪ್ರಮುಖರಲ್ಲಿ ಒಬ್ಬರು.

2. ಇಮ್ರಾನ್ ತಾಹೀರ್

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌'ನ ಬೌಲರ್‌ಗಳ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ, ದ.ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್ ಮೂಲಧನ 50 ಲಕ್ಷವಾದರೂ, ಅವರು ಈ ಮೊತ್ತಕ್ಕೂ ಬಿಕರಿಯಾಗಲಿಲ್ಲ.

3. ಇರ್ಫಾನ್ ಪಠಾಣ್

₹ 50 ಲಕ್ಷ ಮೂಲಧನದೊಂದಿಗೆ ಹರಾಜಿಗೆ ಲಭ್ಯವಿದ್ದ ಭಾರತ ತಂಡದ ಆಲ್ರೌಂಡರ್ ಇರ್ಫಾನ್ ಪಠಾಣ್ ಕೂಡ ಫ್ರಾಂಚೈಸಿಗಳನ್ನು ಓಲೈಸುವಲ್ಲಿ ವಿಫಲವಾದರು.

4. ರಾಸ್ ಟೇಲರ್

ಐಪಿಎಲ್ ಲೀಗ್‌ನ ಮೊದಲ ಹಂತದಲ್ಲಿ ಅತ್ಯಂತ ಪ್ರಭಾವಿ ಆಟಗಾರನಾಗಿದ್ದ ಆರ್‌ಸಿಬಿಯ ಮಾಜಿ ಆಟಗಾರ (ಮೂಲಧನ 50 ಲಕ್ಷ) ರಾಸ್ ಟೇಲರ್ ಕೂಡ ಬಿಕರಿಯಾಗದೆ ಉಳಿದರು.

5. ಜಾನಿ ಬೇರ್‌'ಸ್ಟೋ

ಮೂಲಧನ ₹ 1.50 ಕೋಟಿಗಳಾಗಿದ್ದ ಇಂಗ್ಲೆಂಡ್ ಕ್ರಿಕೆಟಿಗ ಜಾನಿ ಬೇರ್‌ಸ್ಟೋ ಇತ್ತೀಚಿನ ಭಾರತ ವಿರುದ್ಧದ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರೂ, ಅವರ ಅಗತ್ಯವೂ ಯಾವ ಫ್ರಾಂಚೈಸಿಗಳಿಗೂ ಕಂಡುಬರಲಿಲ್ಲ.

click me!