RCB ಬ್ರ್ಯಾಂಡ್ ಮೌಲ್ಯ ಕುಸಿತ..! ಆದರೆ ಕೊಹ್ಲಿ ನಾಯಕತ್ವಕ್ಕಿಲ್ಲ ಕುತ್ತು..!

By Kannadaprabha NewsFirst Published Sep 20, 2019, 2:10 PM IST
Highlights

ಕಳೆದ 12 ಆವೃತ್ತಿಗಳಿಂದಲೂ ಐಪಿಎಲ್ ಚಾಂಪಿಯನ್ ಆಗಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರ್ಯಾಂಡ್‌ ವ್ಯಾಲ್ಯೂ ಕುಸಿತಗೊಂಡಿದೆ. ಆದರೆ ನಾಯಕ ವಿರಾಟ್ ಕೊಹ್ಲಿಯೇ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವ​ದೆ​ಹ​ಲಿ(ಸೆ.20): ಐಪಿ​ಎಲ್‌ನಲ್ಲಿ ಕಳಪೆ ಪ್ರದ​ರ್ಶನ ಮುಂದು​ವ​ರಿ​ಸಿ​ರುವ ರಾಯಲ್‌ ಚಾಲೆಂಜ​ರ್ಸ್ ಬೆಂಗ​ಳೂರು ತಂಡದ ಬ್ರ್ಯಾಂಡ್‌ ಮೌಲ್ಯ ಶೇ.8ರಷ್ಟುಕುಸಿತಗೊಂಡಿದೆ. 2018ರಲ್ಲಿ ₹ 647 ಕೋಟಿ ಇದ್ದ ಆರ್‌ಸಿಬಿ ತಂಡದ ಮೌಲ್ಯ ಈಗ 595 ಕೋಟಿ ರುಪಾಯಿಗೆ ಇಳಿಕೆಯಾಗಿದೆ. ನ್ಯೂಯಾ​ರ್ಕ್ ಮೂಲದ ಡಫ್‌ ಅಂಡ್‌ ಫೆಲ್ಫ್ಸ್ ಎನ್ನುವ ಕಾರ್ಪೋ​ರೇಟ್‌ ಹಣ​ಕಾಸು ಸಲಹಾ ಸಂಸ್ಥೆ ನಡೆ​ಸಿ​ರುವ ಸಮೀಕ್ಷೆಯಲ್ಲಿ ಈ ವಿಚಾರ ತಿಳಿದು ಬಂದಿದೆ.

ಧೋನಿ IPL ಭವಿಷ್ಯ; CSK ಮಾಲೀಕ ಬಿಚ್ಚಿಟ್ಟ ಸೀಕ್ರೆಟ್!

ವಿಶ್ವದ ಶ್ರೀಮಂತ ಕ್ರಿಕೆ​ಟಿಗ ವಿರಾಟ್‌ ಕೊಹ್ಲಿ ತಂಡದ ನಾಯ​ಕ​ನಾ​ಗಿ​ದ್ದರೂ, ಬ್ರ್ಯಾಂಡ್‌ ಮೌಲ್ಯ ಕುಸಿ​ದಿ​ರು​ವುದು ಅಚ್ಚರಿ ಮೂಡಿ​ಸಿದೆ. ಆರ್‌ಸಿಬಿ ಮಾತ್ರವಲ್ಲ, ಬಾಲಿ​ವುಡ್‌ ತಾರೆ ಶಾರುಖ್‌ ಖಾನ್‌ ಒಡೆತನದ ಕೋಲ್ಕತಾ ನೈಟ್‌ ರೈಡ​ರ್ಸ್(ಕೆ​ಕೆ​ಆರ್‌), ರಾಜ​ಸ್ಥಾನ ರಾಯಲ್ಸ್‌ ತಂಡದ ಬ್ರ್ಯಾಂಡ್‌ ಮೌಲ್ಯಕ್ಕೂ ಹೊಡೆತ ಬಿದ್ದಿ​ದೆ.

ಸಿಎಸ್‌ಕೆಗೆ ಭರ್ಜರಿ ಲಾಭ: ಬೆಟ್ಟಿಂಗ್‌ ಪ್ರಕ​ರಣದಲ್ಲಿ 2 ವರ್ಷ ನಿಷೇಧ ಅನು​ಭ​ವಿಸಿದರೂ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬ್ರ್ಯಾಂಡ್‌ ಮೌಲ್ಯ ಭಾರೀ ಏರಿಕೆ ಕಂಡಿದೆ. ತಂಡ 11ನೇ ಆವೃ​ತ್ತಿ​ಯಲ್ಲಿ ಚಾಂಪಿ​ಯನ್‌ ಆಗಿದ್ದು, ಎಂ.ಎಸ್‌.ಧೋನಿ ಉಪ​ಸ್ಥಿತಿ ಈ ಬೆಳ​ವ​ಣಿ​ಗೆಗೆ ಕಾರ​ಣ​ವಾ​ಗಿದೆ. ಸಿಎಸ್‌ಕೆ ಮೌಲ್ಯ ಶೇ.13.1ರಷ್ಟು ಏರಿಕೆಯಾಗಿದ್ದರೆ, ಮುಂಬೈ ಇಂಡಿ​ಯನ್ಸ್‌ ಮೌಲ್ಯ ಶೇ.8.5ರಷ್ಟು ಏರಿಕೆ ಕಂಡಿದೆ.

ಲೀಗ್‌ ಮೌಲ್ಯವೂ ಏರಿಕೆ: 2018ಕ್ಕೆ ಹೋಲಿ​ಸಿ​ದರೆ 2019ರ ಆವೃತ್ತಿ ಬಳಿಕ ಐಪಿಎಲ್‌ ಟೂರ್ನಿಯ ಒಟ್ಟಾರೆ ಬ್ರ್ಯಾಂಡ್‌ ಮೌಲ್ಯ​ದಲ್ಲಿ ಭಾರೀ ಏರಿಕೆಯಾಗಿದೆ. 2018ರ ಆವೃತ್ತಿ ಮುಕ್ತಾ​ಯದ ಬಳಿಕ ₹ 44 ಸಾವಿರ ಕೋಟಿ​ಯಿದ್ದ ಮೌಲ್ಯ, ಸದ್ಯ ₹ 48 ಸಾವಿರ ಕೋಟಿಗೆ ಏರಿಕೆಯಾಗಿದೆ.

ಆರ್‌ಸಿಬಿ ನಾಯ​ಕ​ನಾ​ಗಿ ಕೊಹ್ಲಿ ಮುಂದು​ವ​ರಿಕೆ

ಹಲವು ವರ್ಷಗಳಿಂದ ತಂಡ​ವನ್ನು ಮುನ್ನ​ಡೆ​ಸು​ತ್ತಿ​ದ್ದರೂ ವಿರಾಟ್‌ ಕೊಹ್ಲಿ ಆರ್‌ಸಿಬಿಗೆ ಟ್ರೋಫಿ ಗೆಲ್ಲಿ​ಸಿ​ಕೊ​ಡು​ವಲ್ಲಿ ಯಶಸ್ಸು ಕಂಡಿಲ್ಲ. ಅಲ್ಲದೇ ತಂಡ​ದ ಬ್ರ್ಯಾಂಡ್‌ ಮೌಲ್ಯವೂ ಕುಸಿ​ದಿದೆ. ಆದರೆ ಅವ​ರನ್ನು ನಾಯ​ಕ​ತ್ವ​ದಿಂದ ಕೆಳ​ಗಿ​ಳಿ​ಸುವ ಪ್ರಶ್ನೆಯೇ ಇಲ್ಲ ಎಂದು ತಂಡದ ನಿರ್ದೇ​ಶ​ಕ ಮೈಕ್‌ ಹೆಸ್ಸನ್‌ ಸ್ಪಷ್ಟಪಡಿ​ಸಿ​ದ್ದಾರೆ. 2020ರ ಐಪಿ​ಎಲ್‌ನಲ್ಲಿ ಕೊಹ್ಲಿಯೇ ಆರ್‌ಸಿಬಿ ತಂಡ​ವನ್ನು ಮುನ್ನ​ಡೆ​ಸ​ಲಿ​ದ್ದಾರೆ.

ತಂಡ​ಗಳ ಬ್ರ್ಯಾಂಡ್‌ ಮೌಲ್ಯ

ತಂಡ     2019ರ      ಮೌಲ್ಯ 2018ರ ಮೌಲ್ಯ 

ಮುಂಬೈ   809        746

ಚೆನ್ನೈ      732         647

ಕೆಕೆ​ಆ​ರ್‌   629         686

ಆರ್‌ಸಿಬಿ  595          647

ಸನ್‌ರೈಸ​​ರ್ಸ್ 483    462

ಡೆಲ್ಲಿ          374       343

ಪಂಜಾ​ಬ್‌   358       343

ರಾಜ​ಸ್ಥಾ​ನ  271      284

(ಕೋ​ಟಿ​ ರುಪಾಯಿಗ​ಳ​ಲ್ಲಿ​)

click me!