ಕೊಹ್ಲಿ - ಡೇಲ್ ಸ್ಟೇನ್ ಅಪ್ಪುಗೆ- ಟ್ವಿಟರ್‌ನಲ್ಲಿ ಮೆಚ್ಚುಗೆ!

Published : Apr 23, 2019, 02:53 PM IST
ಕೊಹ್ಲಿ - ಡೇಲ್ ಸ್ಟೇನ್ ಅಪ್ಪುಗೆ- ಟ್ವಿಟರ್‌ನಲ್ಲಿ ಮೆಚ್ಚುಗೆ!

ಸಾರಾಂಶ

ವಿರಾಟ್ ಕೊಹ್ಲಿ ಹಾಗೂ ಡೇಲ್ ಸ್ಟೇನ್ ಅಪ್ಪುಗೆ ಸಾಮಾಜಿತ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಹಲವು ತಮಾಷೆ ಮಾಡೋ ಮೂಲಕ ಸ್ಟೇನ್ ಬೌಲಿಂಗ್ ದಾಳಿಯನ್ನು ಶ್ಲಾಘಿಸಿದ್ದಾರೆ.   ಇದಕ್ಕೆ ಕೊಹ್ಲಿ ಹಾಗೂ ಸ್ಟೇನ್ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿದೆ ಕೊಹ್ಲಿ ಹಾಗೂ ಸ್ಟೇನ್ ಪ್ರತಿಕ್ರಿಯೆ.

ಬೆಂಗಳೂರು(ಏ.23): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೀಗ ಸಂಭ್ರಮದ ವಾತಾವರಣ. ಸತತ 2 ಪಂದ್ಯ ಗೆದ್ದಿರುವ ಕೊಹ್ಲಿ ಪಡೆ ಆತ್ಮವಿಶ್ವಾಸ ಹೆಚ್ಚಾಗಿದೆ. ಇದರ ನಡುವೆ ಡ್ರೆಸ್ಸಿಂಗ್ ರೂಂ ಸೀಕ್ರೆಟ್‌ಗಳು, ತಮಾಷೆಗಳು ಒಂದೊಂದಾಗಿ ಹೊರಬರುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮಾರಕ ದಾಳಿ ನಡೆಸಿ ವಿಕೆಟ್ ಕಬಳಿಸಿದ ವೇಗಿ ಡೇಲ್ ಸ್ಟೇನ್ ಸಂಭ್ರಮಾಚರಣೆ ವೇಳೆ ನಾಯಕ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡಿದ್ದರು. ಈ ಅಪ್ಪುಗೆ ಭಾರಿ ಚರ್ಚೆಯಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ 2010ರಲ್ಲಿ ಕೊಹ್ಲಿ ಹಾಗೂ ಡೇಲ್ ಸ್ಟೇನ್ ಅಪ್ಪುಗೆ ಹಾಗೂ ಇದೀಗ 2019ರಲ್ಲಿ ಕೊಹ್ಲಿ ಡೇಲ್ ಸ್ಟೇನ್ ಅಪ್ಪುಗೆ ಫೋಟೋ ಹರಿದಾಡುತ್ತಿದೆ. ಇದಕ್ಕೆ ಸ್ವತಃ ಕೊಹ್ಲಿ ಹಾಗೂ ಡೇಲ್ ಸ್ಟೇನ್ ಪ್ರತಿಕ್ರಿಯೆ ನೀಡಿದ್ದಾರೆ. 2010 ಹಾಗೂ ಈಗ ಡೇಲ್ ಸ್ಟೇನ್ ಹಾಗೇ ಇದ್ದಾರೆ. ಆದರೆ ನಾನು ಮಾತ್ರ ಬದಲಾಗಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.

 

 

ಡೇಲ್ ಸ್ಟೇನ್ ಹಾಗೂ ಕೊಹ್ಲಿ ನಡುವಿನ ಅಪ್ಪುಗೆಯನ್ನು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಲಾಗಿದೆ.  ಪತ್ನಿ ಅನುಷ್ಕಾ  ಶರ್ಮಾ ಕೂಡ ಈ ರೀತಿ ಕೊಹ್ಲಿಯನ್ನು ಅಪ್ಪಿಕೊಂಡಿಲ್ಲ ಎಂದು ಟ್ವಿಟರ್‌ನಲ್ಲಿ ತಮಾಷೆ ಮಾಡಲಾಗಿದೆ. 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಚಿನ್ ತೆಂಡೂಲ್ಕರ್ ಮತ್ತೊಂದು ದಾಖಲೆ ನುಚ್ಚುನೂರು; ಕೇವಲ 521 ಇನ್ನಿಂಗ್ಸ್‌ನಲ್ಲೇ ಹೊಸ ದಾಖಲೆ ಬರೆದ ಜೋ ರೂಟ್..! ಆದ್ರೂ ಕೊಹ್ಲಿ ರೆಕಾರ್ಡ್ ಸೇಫ್
BCCI Chief Selector: ಅಜಿತ್ ಅಗರ್ಕರ್ ರಾಜೀನಾಮೆ ಖಚಿತ..! ಹೊಸ ಅಪ್‌ಡೇಟ್ ಕೊಟ್ಟ ಬಿಸಿಸಿಐ, ಯಾರಾಗ್ತಾರೆ ಮುಂದಿನ ಚೀಫ್ ಸೆಲೆಕ್ಟರ್?