
ನವದೆಹಲಿ[ಏ.23]: ರಿಷಭ್ ಪಂತ್ ಹಾಗೂ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅಬ್ಬರದ ಬ್ಯಾಟಿಂಗ್, ಸೆಂಚುರಿ ಸಿಡಿಸಿದ ಅಜಿಂಕ್ಯ ರಹಾನೆಗೆ ಭಾರೀ ನಿರಾಸೆಯುಂಟು ಮಾಡಿದೆ. ರಾಜಸ್ಥಾನದ ಬೃಹತ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗೆಲುವು ಸಾಧಿಸಿ, 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಸದ್ಯ ಈ ಒಪಂದ್ಯದ ವಿಡಿಯೋ ಹಾಗೂ ಫೋಟೋ ಒಂದು ಭಾರೀ ವೈರಲ್ ಆಗುತ್ತಿದೆ.
ಹೌದು, ರಿಷಭ್ ಪಂತ್ 78 ರನ್ ಗಳ ಆಟವಾಡಿದ್ದಾರೆ ಹಾಗೂ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಪಂತ್ ಸಿಕ್ಸರ್ ಕಂಡು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ಅಚ್ಚರಿಗೀಡಾಗಿದ್ದಾರೆ. ಖುಷಿಯನ್ನು ತಡೆಯಲಾಗದ ದಾದಾ ಪಂದ್ಯ ಮುಗಿದದ್ದೇ ತಡ ಪಂತ್ ರನ್ನು ಎತ್ತಿದ್ದಾರೆ. ಸದ್ಯ ಈ ಫೋಟೋ ಭಾರೀ ವೈರಲ್ ಆಗಿದೆ.
ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯಿಸಿದ ಪಂತ 'ಪಂದ್ಯ ಮುಗಿಸಿ ಮರಳುತ್ತಿದ್ದಾಗ ಪ್ರತಿಯೊಬ್ಬರು ಖುಷಿ ವ್ಯಕ್ತಪಡಿಸಿದ್ದಾರೆ. ಸೌರವ್ ಸರ್ ಕೂಡಾ ನನ್ನನ್ನು ಎತ್ತಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಇದು ನನ್ನ ಪಾಲಿಗೆ ಅತ್ಯದ್ಭುತ ಹಾಗೂ ಮರೆಯಲಾಗದ ಕ್ಷಣ. ಅದು ವಿಭಿನ್ನ ಅನುಭವವಾಗಿತ್ತು' ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.