ಭಾರತದಲ್ಲೇ ನಡೆಯಲಿದೆ IPL: ನಿಗದಿಗಿಂತ ಮೊದಲೇ IPL ಕಿಕ್ ಸ್ಟಾರ್ಟ್

Published : Jan 09, 2019, 01:16 PM ISTUpdated : Jan 09, 2019, 01:23 PM IST
ಭಾರತದಲ್ಲೇ ನಡೆಯಲಿದೆ IPL: ನಿಗದಿಗಿಂತ ಮೊದಲೇ IPL ಕಿಕ್ ಸ್ಟಾರ್ಟ್

ಸಾರಾಂಶ

ಮೇ 30ರಿಂದ ಇಂಗ್ಲೆಂಡ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ಆರಂಭಗೊಳ್ಳಲಿದ್ದು, ಐಪಿಎಲ್‌ ಹಾಗೂ ಭಾರತದ ಅಂತಾರಾಷ್ಟ್ರೀಯ ವೇಳಾಪಟ್ಟಿಗೂ ನಡುವೆ ಕನಿಷ್ಠ 15 ದಿನಗಳ ಅಂತರವಿರಬೇಕಿದೆ. ಭಾರತ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಜೂನ್‌ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದು, ಮೇ 20ರೊಳಗೆ ಐಪಿಎಲ್‌ ಮುಕ್ತಾಯಗೊಳ್ಳಬೇಕಿದೆ.

ನವದೆಹಲಿ(ಜ.09): ಐಪಿಎಲ್‌ 12ನೇ ಆವೃತ್ತಿ ವಿದೇಶದಲ್ಲಿ ನಡೆಯಲಿದೆ ಎನ್ನುವ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಲೋಕಸಭಾ ಚುನಾವಣೆ ಇದ್ದರೂ ವಿಶ್ವದ ಶ್ರೇಷ್ಠ ಟಿ20 ಹಬ್ಬವನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ಹಾಗೂ ಸದಸ್ಯೆ ಡಯಾನ ಎಡುಲ್ಜಿ ಮಂಗಳವಾರ ಸಭೆ ನಡೆಸಿ ತೀರ್ಮಾನ ಕೈಗೊಂಡರು. ಸದ್ಯದ ಮಟ್ಟಿಗೆ ಮಾರ್ಚ್ 23ರಂದು ಪಂದ್ಯಾವಳಿಗೆ ಚಾಲನೆ ದೊರೆಯಲಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

‘ಪಂದ್ಯಗಳಿಗೆ ಆತಿಥ್ಯ ವಹಿಸುವ ನಗರಗಳಲ್ಲಿ ಭದ್ರತೆ ಸಮಸ್ಯೆ ಎದುರಾಗಿ ಪಂದ್ಯಗಳನ್ನು ಸ್ಥಳಾಂತರ ಮಾಡಬೇಕಾದ ಪರಿಸ್ಥಿತಿ ಎದುರಾದರೆ ಈಗಾಗಲೇ ಬದಲಿ ಸ್ಥಳಗಳನ್ನು ಗುರುತಿಸಿದ್ದೇವೆ. ಎಲ್ಲಾ ಕಡೆಗಳಲ್ಲೂ ಅಗತ್ಯ ಸಿದ್ಧತೆ ಮಾಡಿಕೊಂಡಿರಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ ಪಂದ್ಯಗಳ ಆಯೋಜನೆ ಕುರಿತು ನಿರ್ಧರಿಸಲಾಗುತ್ತದೆ. ಭದ್ರತಾ ಸಂಸ್ಥೆಗಳೊಂದಿಗೂ ನಾವು ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದು ವಿನೋದ್‌ ರಾಯ್‌ ಹೇಳಿದ್ದಾರೆ.

2008ರ ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ 5 ಕ್ರಿಕೆಟಿಗರು ಯಾರು?

‘ಬದಲಿ ಸ್ಥಳಗಳನ್ನು ಗುರುತಿಸಲು ನಿರ್ದಿಷ್ಟಕಾರಣವಿದೆ. ಒಂದೊಮ್ಮೆ ಐಪಿಎಲ್‌ ನಡೆಯುವ ದಿನದಂದೇ ಆ ಸ್ಥಳದಲ್ಲಿ ಮತದಾನ, ಮತ ಎಣಿಕೆ ಇಲ್ಲವೇ ಪ್ರಧಾನಿಯ ಕಾರ್ಯಕ್ರಮ ಆಯೋಜನೆಗೊಂಡಿದ್ದರೆ ಪಂದ್ಯವನ್ನು ಸ್ಥಳಾಂತರಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಿರಲು ಈಗಿನಿಂದಲೂ ಸಿದ್ಧತೆ ಆರಂಭಿಸಿದ್ದೇವೆ’ ಎಂದು ರಾಯ್‌ ಹೇಳಿದ್ದಾರೆ.

ಮೇ 30ರಿಂದ ಇಂಗ್ಲೆಂಡ್‌ನಲ್ಲಿ ಐಸಿಸಿ ಏಕದಿನ ವಿಶ್ವಕಪ್‌ ಆರಂಭಗೊಳ್ಳಲಿದ್ದು, ಐಪಿಎಲ್‌ ಹಾಗೂ ಭಾರತದ ಅಂತಾರಾಷ್ಟ್ರೀಯ ವೇಳಾಪಟ್ಟಿಗೂ ನಡುವೆ ಕನಿಷ್ಠ 15 ದಿನಗಳ ಅಂತರವಿರಬೇಕಿದೆ. ಭಾರತ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಜೂನ್‌ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದು, ಮೇ 20ರೊಳಗೆ ಐಪಿಎಲ್‌ ಮುಕ್ತಾಯಗೊಳ್ಳಬೇಕಿದೆ. ಮಾ.23ಕ್ಕೇ ಐಪಿಎಲ್‌ ಆರಂಭಿಸಲು ನಿರ್ಧರಿಸಿರುವ ಬಿಸಿಸಿಐ, ಮೇ 2ನೇ ವಾರದಲ್ಲಿ ಫೈನಲ್‌ ನಿಗದಿಪಡಿಸುವ ಸಾಧ್ಯತೆ ಇದೆ. ಐಪಿಎಲ್‌ ಬಳಿಕ ಭಾರತೀಯ ಆಟಗಾರರಿಗೆ ಕನಿಷ್ಠ 20 ದಿನಗಳ ವಿಶ್ರಾಂತಿ ನೀಡಬೇಕು ಎನ್ನುವುದು ಕ್ರಿಕೆಟ್‌ ಮಂಡಳಿಯ ಉದ್ದೇಶವಾಗಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೇಳಾಪಟ್ಟಿ ಪ್ರಕಟಕ್ಕೂ ಮುನ್ನ ಸರ್ಕಾರದೊಂದಿಗೆ ಚರ್ಚೆ:

12ನೇ ಆವೃತ್ತಿಯ ಐಪಿಎಲ್‌ ವೇಳಾಪಟ್ಟಿಯನ್ನು ಸಿದ್ಧಪಡಿಸುವ ಮೊದಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಲಾಗುವುದು ಎಂದು ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ಹೇಳಿದ್ದಾರೆ. ‘ಯಾವ ನಗರದಲ್ಲಿ ಯಾವ ದಿನದಂದು ಪಂದ್ಯ ನಡೆಯಲಿದೆ ಎನ್ನುವ ವಿವರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೀಡಲಿದ್ದೇವೆ. ಅವರಿಂದ ಅನುಮತಿ ಪಡೆದ ಬಳಿಕ ಫ್ರಾಂಚೈಸಿಗಳ ಗಮನಕ್ಕೆ ತಂದು ವೇಳಾಪಟ್ಟಿ ಪ್ರಕಟ ಮಾಡಲಾಗುತ್ತದೆ’ ಎಂದು ರಾಯ್‌ ತಿಳಿಸಿದ್ದಾರೆ.

ಐಪಿಎಲ್ 2019: ಪ್ರಶಸ್ತಿ ರೇಸ್‌ನಲ್ಲಿರುವ 3 ತಂಡಗಳು ಯಾವುದು?

ಲೋಕಸಭಾ ಚುನಾವಣೆ ಹಲವು ಹಂತಗಳಲ್ಲಿ ನಡೆಯಲಿರುವ ಕಾರಣ, ಹೆಚ್ಚೇನೂ ಸಮಸ್ಯೆ ಎದುರಾಗುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲೇ ಟೂರ್ನಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. 2009 ಹಾಗೂ 2014ರಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಐಪಿಎಲ್‌ ಪಂದ್ಯಾವಳಿಯನ್ನು ಭಾರತದಿಂದಾಚೆ ನಡೆಸಲಾಗಿತ್ತು. 2009ರಲ್ಲಿ ಟೂರ್ನಿ ದಕ್ಷಿಣ ಆಫ್ರಿಕಾದಲ್ಲಿ ನಡೆದರೆ, 2014ರಲ್ಲಿ ಮೊದಲ 20 ಪಂದ್ಯಗಳು ಯುಎಇನಲ್ಲಿ ನಡೆದಿದ್ದವು. ಆದರೆ ಈ ಬಾರಿ ಪಂದ್ಯಾವಳಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಫ್ರಾಂಚೈಸಿಗಳು, ಪ್ರಾಯೋಜಕರು ಹಾಗೂ ಪ್ರಸಾರ ಹಕ್ಕು ಹೊಂದಿರುವ ವಾಹಿನಿಯಿಂದ ವಿರೋಧ ವ್ಯಕ್ತವಾಗಿತ್ತು. ಭಾರತದಿಂದ ಸ್ಥಳಾಂತರ ಮಾಡಿದರೆ ಕೋಟ್ಯಂತರ ರುಪಾಯಿ ನಷ್ಟವಾಗಲಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು, ಚುನಾವಣೆ ಹೊರತಾಗಿಯೂ ಭಾರತದಲ್ಲೇ ಐಪಿಎಲ್‌ ನಡೆಸುವ ಸಾಹಸಕ್ಕೆ ಬಿಸಿಸಿಐ ಕೈಹಾಕುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?