ಮುಂಬೈಗೆ ಮಣ್ಣು ಮುಕ್ಕಿಸಿದ ರಾಜಸ್ಥಾನ

By Web DeskFirst Published Apr 20, 2019, 7:47 PM IST
Highlights

ಟೂರ್ನಿಯಲ್ಲಿ ರಾಜಸ್ಥಾನ 3ನೇ ಗೆಲುವು ದಾಖಲಿಸುವ ಮೂಲಕ ಪ್ಲೇ ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಜೈಪುರ[ಏ.20]: ನಾಯಕ ಸ್ಟೀವ್ ಸ್ಮಿತ್ ಹಾಗೂ ಯುವ ಕ್ರಿಕೆಟಿಗ ರಿಯಾನ್ ಪರಾಗ್ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡವು 5 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ರಾಜಸ್ಥಾನ 3ನೇ ಗೆಲುವು ದಾಖಲಿಸುವ ಮೂಲಕ ಪ್ಲೇ ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಮೊದಲಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಕೇವಲ 161 ರನ್’ಗಳಿಗೆ ನಿಯಂತ್ರಿಸಿದ್ದ ರಾಜಸ್ಥಾನ ತಂಡ ಉತ್ತಮ ಆರಂಭವನ್ನೇ ಪಡೆಯಿತು. ರಹಾನೆ-ಸ್ಯಾಮ್ಸನ್ ಜೋಡಿ ಮೊದಲ ವಿಕೆಟ್’ಗೆ 3.4 ಓವರ್’ಗಳಲ್ಲಿ 39 ರನ್ ಕಲೆಹಾಕಿತು. ರಹಾನೆ 12 ಎಸೆತಗಳಲ್ಲಿ 2 ಬೌಂಡರಿ ಸಹಿತ 12 ರನ್ ಬಾರಿಸಿ ರಾಹುಲ್ ಚಾಹರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆ ಬಳಿಕ ನಾಯಕ ಸ್ಮಿತ್ ಜತೆಗೆ ಬ್ಯಾಟಿಂಗ್ ಮುಂದುವರೆಸಿದ ಸಂಜು ಸ್ಯಾಮ್ಸನ್ ತಂಡದ ರನ್ ಗಳಿಕೆಗೆ ಒತ್ತು ನೀಡಿದರು. ಸಂಜು 19 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 35 ರನ್ ಬಾರಿಸಿ ರಾಹುಲ್’ಗೆ ಎರಡನೇ ಬಲಿಯಾದರು. ಇದರ ಬೆನ್ನಲ್ಲೇ ಬೆನ್ ಸ್ಟೋಕ್ಸ್ ಶೂನ್ಯ ಸುತ್ತಿ ಬಂದ ದಾರಿಯಲ್ಲೇ ಪೆವಿಲಿಯನ್ ಸೇರಿದರು. ಆ ಬಳಿಕ ನಾಯಕ ಸ್ಮಿತ್ ಕೂಡಿಕೊಂಡ ಯುವ ಕ್ರಿಕೆಟಿಗ ರಿಯಾನ್ ಪರಾಗ್ ಆಕರ್ಷಕ ಜತೆಯಾಟದ ಮೂಲಕ ತಂಡವನ್ನು ಗೆಲುವಿನ ಸಮೀಪ ಕೊಂಡ್ಯೊಯ್ದರು.

ರಾಜಸ್ಥಾನಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದ ಮುಂಬೈ

4ನೇ ವಿಕೆಟ್’ಗೆ ಈ ಜೋಡಿ 70 ರನ್’ಗಳ ಜತೆಯಾಟವಾಡಿದರು. ರಿಯಾನ್ ಪರಾಗ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 43 ರನ್ ಬಾರಿಸಿ ರನೌಟ್ ಆದರು. ಆದರೆ ಕೊನೆವರೆಗೂ ಬ್ಯಾಟಿಂಗ್ ನಡೆಸಿದ ನಾಯಕ ಸ್ಮಿತ್ 48 ಎಸೆತಗಳಲ್ಲಿ 59 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
 

click me!