ಮಂಕಾಯ್ತು ಸಾಮ್ಸನ್ ಶತಕ - ರೋಚಕ ಪಂದ್ಯದಲ್ಲಿ SRHಗೆ ಗೆಲುವು!

By Web DeskFirst Published Mar 29, 2019, 11:46 PM IST
Highlights

ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಐಪಿಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗೆಲುವಿನ ನಗೆ ಬೀರಿದೆ. ಈ ಮೂಲಕ ಮೊದಲ ಪಂದ್ಯದ ಸೋಲಿನಿಂದ ಹೊರಬಂದಿದೆ. ಸಂಜು ಸಾಮ್ಸನ್ ಶತಕದ ನಡುವೆಯೂ ರಾಜಸ್ಥಾನ ಸೋಲಿಗೆ ಗುರಿಯಾಗಿದ್ದು ಹೇಗೆ? ಇಲ್ಲಿದೆ ಪಂದ್ಯದ ಹೈಲೈಟ್ಸ್
 

ಹೈದರಾಬಾದ್(ಮಾ.29): ತವರಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಬಲಿಷ್ಠ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ರಾಜಸ್ಥಾನ ರಾಯಲ್ಸ್ ವಿರುದ್ದ ನಡೆದ ಐಪಿಎಲ್ ಲೀಗ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ 5 ವಿಕೆಟ್ ಗೆಲುವು ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ರಾಜಸ್ಥಾನ ಬಗ್ಗು ಬಡಿಯುವಲ್ಲಿ SRH ಯಶಸ್ವಿಯಾಗಿದೆ. 

"

ಇದನ್ನೂ ಓದಿ: IPL 2019: ಕ್ರಿಸ್ ಗೇಲ್ ಅದ್ಭುತ ಡ್ಯಾನ್ಸ್- ನಾಚಿ ನೀರಾದ ಕೊರಿಯೋಗ್ರಾಫರ್!

ಗೆಲುವಿಗೆ 199 ರನ್ ಟಾರ್ಗೆಟ್ ಪಡೆದ ಸನ್ ರೈಸರ್ಸ್ ಹೈದರಾಬಾದ‌ಗೆ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರಿಸ್ಟೋ ಸ್ಫೋಟಕ ಆರಂಭ ನೀಡಿದರು. ವಾರ್ನರ್ ಅಬ್ಬರಕ್ಕೆ ರಾಜಸ್ಥಾನ ರಾಯಲ್ಸ್ ಬೆಚ್ಚಿ ಬಿದ್ದಿತು. ಕೇವಲ 37 ಎಸೆತದಲ್ಲಿ ವಾರ್ನರ್ 9 ಬೌಂಡರಿ, 2 ಸಿಕ್ಸರ್ ನೆರವಿನಿಂದ 69 ರನ್ ಸಿಡಿಸಿ ಔಟಾದರು.

ಜಾನಿ ಬೈರಿಸ್ಟೋ 28 ಎಸೆತದಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 45 ರನ್ ಸಿಡಿಸಿ ಔಟಾದರು. ಆದರೆ ವಿಜಯ್ ಶಂಕರ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ SRHಗೆ ಆಸರೆಯಾದರು. ಆದರೆ ವಿಲಿಯಮ್ಸನ್ 14 ರನ್ ಸಿಡಿಸಿ ಔಟಾದರು. ಆದರೆ ವಿಜಯ್ ಶಂಕರ್ ಅಬ್ಬರ ಆರಂಭಗೊಂಡಿತು. ಅಷ್ಟರಲ್ಲಿ SRH ಗೆಲುವಿನ ಹಾದಿ ತುಳಿಯಿತು.

ಇದನ್ನೂ ಓದಿ: ಮುಂಬೈ ವಿರುದ್ಧ RCB ಸೋಲು- ನೋ ಬಾಲ್ ಕುರಿತು ಕೊಹ್ಲಿ ಹೇಳಿದ್ದಿಷ್ಟು!

15 ಎಸೆತದಲ್ಲಿ 35 ರನ್ ಸಿಡಿಸಿದ ಶಂಕರ್ ಔಟಾಗುತ್ತಿದ್ದಂತೆ ರಾಜಸ್ಥಾನ ರಾಯಲ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು.  ನಂತರ ಬಂದ ಮನೀಶ್ ಪಾಂಡೆ ಆಸರೆಯಾಗಲಿಲ್ಲ. ಆದರೆ ಯುಸೂಫ್ ಪಠಾಣ್ ಸಿಕ್ಸರ್ ಸಿಡಿಸೋ ಮೂಲಕ SRH ಗೆಲುವಿನ ಆಸೆ ಮತ್ತೆ ಚಿಗುರಿಸಿದರು. SRHಗೆ ಅಂತಿಮ 12 ಎಸೆತದಲ್ಲಿ 12 ರನ್ ಅವಶ್ಯಕತೆ ಇತ್ತು. 

ರಶೀದ್ ಖಾನ್ ಬೌಂಡರಿ ಸಿಡಿಸಿ ಹಾಗೂ ಸಿಕ್ಸರ್ ಸಿಡಿಸೋ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 5 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು. ಯುಸೂಫ್ ಅಜೇಯ 15 ರನ್ ಸಿಡಿಸಿದರೆ, ರಶೀದ್ ಅಜೇಯ 15 ರನ್ ಕಾಣಿಕೆ ನೀಡಿದರು. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ ಮೈದಾನದಲ್ಲಿ ಗೆಲುವಿನ ಸಂಭ್ರಮ ಆಚರಿಸಿತು. ಆದರೆ ಸಂಜು ಸಾಮ್ಸನ್ ಶತಕ ಹಾಗೂ ರಹಾನೆ ಅರ್ಧಶತಕ ವ್ಯರ್ಥವಾಯ್ತು.

ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ ರಾಯಲ್ಸ್ 2 ವಿಕೆಟ್ ನಷ್ಟಕ್ಕೆ 198 ರನ್ ಸಿಡಿಸಿತ್ತು. ಸಂಜು ಸಾಮ್ಸನ್ ಅಜೇಯ 102 ರನ್ ಸಿಡಿಸಿರೆ, ಅಜಿಂಕ್ಯ ರಹಾನೆ 70 ರನ್ ಬಾರಿಸಿದರು. ಈ ಮೂಲಕ SRHಗೆ ಬೃಹತ್ ಟಾರ್ಗೆಟ್ ನೀಡಿತ್ತು. 
 

click me!