ಮತ್ತೆ ಬ್ಯಾಟ್ ಹಿಡಿದು ಘರ್ಜಿಸಿದ ಸೌರವ್ ಗಂಗೂಲಿ!

By Web Desk  |  First Published Mar 28, 2019, 8:35 PM IST

ಮಾಜಿ ನಾಯಕ ಸೌರವ್ ಗಂಗೂಲಿ ಮತ್ತೆ ಬ್ಯಾಟ್ ಹಿಡಿದಿದ್ದಾರೆ. ಸುದೀರ್ಘ ವರ್ಷಗಳ ಬಳಿಕ ಗಂಗೂಲಿ ಅಭಿಮಾನಿಗಳ ಕಣ್ಣಿಗೆ ಹಬ್ಬ ನೀಡಿದ್ದಾರೆ. ಗಂಗೂಲಿ ಬ್ಯಾಟಿಂಗ್ ಹೇಗಿತ್ತು? ಇಲ್ಲಿದೆ  ನೋಡಿ.
 


ದೆಹಲಿ(ಮಾ.28): ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತೆ ಬ್ಯಾಟ್ ಹಿಡಿದು ಘರ್ಜಿಸಿದ್ದಾರೆ. ಕ್ರಿಕೆಟ್ ನಿವತ್ತಿ ಹೇಳಿದ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪುಣೆ ವಾರಿಯರ್ಸ್ ಐಪಿಎಲ್ ತಂಡದಲ್ಲಿ ಕಾಣಿಸಿಕೊಂಡಿದ್ದ ಗಂಗೂಲಿ ಬಳಿಕ ಕ್ರಿಕೆಟ್ ಆಡಳಿತದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಸುದೀರ್ಘ ವರ್ಷಗಳ ಬಳಿಕ ಗಂಗೂಲಿ ಮತ್ತೆ ಬ್ಯಾಟ್ ಹಿಡಿದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಲ್ಲಿ ಕ್ರಿಕೆಟ್ ಆಡಿದ ಪೀಟರ್ಸನ್!

Tap to resize

Latest Videos

undefined

12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರನಾಗಿರುವ ಗಂಗೂಲಿ ಇದೀಗ ಆಟಗಾರರಿಗೆ ಫೀಲ್ಡಿಂಗ್ ಪ್ರಾಕ್ಟೀಸ್ ಮಾಡಿಸಿದ್ದಾರೆ. ಈ ವೇಳೆ ಥ್ರೋಡೌನ್ ಎಸೆತಗಳಿಗೆ ಗಂಗೂಲಿ ಬ್ಯಾಟ್ ಮೂಲಕ ಆಫ್ ಸೈಡ್ ಬ್ಯಾಟಿಂಗ್ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಜಸ್ಪ್ರೀತ್ ಬುಮ್ರಾ - ಅದೇ ಸ್ಟೈಲ್, ಅದೇ ಸ್ವೀಡ್!

ಆಫ್ ಸೈಡ್ ಬ್ಯಾಟಿಂಗ್‌ನಲ್ಲಿ ಗಂಗೂಲಿಯನ್ನು ಮೀರಿಸುವ ಬ್ಯಾಟ್ಸ್‌ಮನ್ ಯಾರು ಇಲ್ಲ. ಇದೀಗ ಇದೇ ರೀತಿ ಶಾಟ್‌ಗಳನ್ನೂ ನೆಟ್ ಪ್ರಾಕ್ಟೀಸ್‌ನಲ್ಲಿ ಗಂಗೂಲಿ ಹೊಡೆದಿದ್ದಾರೆ. ಈ ಮೂಲಕ ಡೆಲ್ಲಿ ತಂಡದ ಆಟಗಾರಿಗೆ ಫೀಲ್ಡಿಂಗ್ ಪ್ರಾಕ್ಟೀಸ್ ಮಾಡಿಸಿದ್ದಾರೆ. 

 

So... decided to turn back the ⏰

RT if the 90s kid in you still cherishes those drives and cuts. pic.twitter.com/dfOq6hOytD

— Delhi Capitals (@DelhiCapitals)

 

click me!