ಬೆಂಗಳೂರಿನಲ್ಲಿ ಗಲ್ಲಿ ಕ್ರಿಕೆಟ್ ಆಡಿದ ಪೀಟರ್ಸನ್!

By Web Desk  |  First Published Mar 28, 2019, 6:12 PM IST

ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಬೆಂಗಳೂರಿನ ಗಲ್ಲಿಯಲ್ಲಿ ಕ್ರಿಕೆಟ್ ಆಡಿದ್ದಾರೆ. ಪೀಟರ್ಸನ್ ಬೆಂಗಳೂರಿನಲ್ಲಿ ಗಲ್ಲಿ ಕ್ರಿಕೆಟ್ ಆಡಿದ್ದೇಕೆ? ಕೆಪಿ ಆಟ ಹೇಗಿತ್ತು? ಇಲ್ಲಿದೆ 


ಬೆಂಗಳೂರು(ಮಾ.28): ಐಪಿಎಲ್ ಟೂರ್ನಿಯಿಂದ ಹಲವು ಸ್ಟಾರ್ ಕ್ರಿಕೆಟಿಗರನ್ನ ಮಾತನಾಡಿಸುವ, ಆಟೋಗ್ರಾಫ್ ಪಡೆಯುವ ಅವಕಾಶ ಅಭಿಮಾನಿಗಳಿದೆ. ಇದೀಗ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್, ಬೆಂಗಳೂರಿನ ಗಲ್ಲಿಯಲ್ಲಿ ಮಕ್ಕಳ ಜೊತೆ ಕ್ರಿಕೆಟ್ ಆಡಿ ಗಮನಸೆಳೆದಿದ್ದಾರೆ.

ಇದನ್ನೂ ಓದಿ: RCB ಪಂದ್ಯ: ಯೋಧರಿಗೆ ಟಿಕೆಟ್ ಉಚಿತ

Tap to resize

Latest Videos

undefined

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೀಕ್ಷಕ ವಿವರಣೆಗಾರನಾಗಿ ಬೆಂಗಳೂರಿಗೆ ಬಂದಿರುವ ಕೆವಿನ್ ಪೀಟರ್ಸನ್, ಇದೀಗ ಬೆಂಗಳೂರಿನ ರಸ್ತೆಯಲ್ಲಿ ಕ್ರಿಕೆಟ್ ಆಡಿದ್ದಾರೆ. ಬೆಂಗಳೂರಿನ ರಸ್ತೆಯಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಿದ್ದಾರೆ. ಹುಡುಗರು ಎಸೆದ ಎಲ್ಲಾ ಎಸೆತಗಳಿಗೆ ಭರ್ಜರಿಯಾಗಿ ಬ್ಯಾಟ್ ಬೀಸಿದ್ದಾರೆ.

ಇದನ್ನೂ ಓದಿ: ಗೇಲ್ ಕೈಬಿಟ್ಟು ಕೈಸುಟ್ಟುಕೊಂಡಿತಾ RCB..?

ಗಲ್ಲಿ ಕ್ರಿಕೆಟ್ ಆಡೋ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೀಟರ್ಸನ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. RCB ಹಾಗೂ MI ನಡುವಿನ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. RCB ನಾಯಕ ವಿರಾಟ್ ಕೊಹ್ಲಿ, ಮುಂಬೈ ನಾಯಕ ರೋಹಿತ್ ಶರ್ಮಾ ನಡುವಿನ ಹೋರಾಟ ಎಂದೇ ಬಿಂಬಿತವಾಗಿದೆ.
 

click me!