ರಾಜಸ್ಥಾನ ವಿರುದ್ಧ ಟಾಸ್ ಸೋತ ಬೆನ್ನಲ್ಲೇ RCBಗೆ ಶಾಕ್!

Published : Apr 30, 2019, 08:07 PM ISTUpdated : Apr 30, 2019, 08:20 PM IST
ರಾಜಸ್ಥಾನ ವಿರುದ್ಧ ಟಾಸ್ ಸೋತ ಬೆನ್ನಲ್ಲೇ RCBಗೆ ಶಾಕ್!

ಸಾರಾಂಶ

ರಾಜಸ್ಥಾನ ರಾಯಲ್ಸ್ ವಿರುದ್ಧ ಟಾಸ್ ಸೋತ ವಿರಾಟ್ ಕೊಹ್ಲಿ ಈ ಆವೃತ್ತಿಯಲ್ಲಿ 10ನೇ ಬಾರಿಗೆ ಟಾಸ್ ಸೋತಿದ್ದಾರೆ. ಟಾಸ್ ಸೋತ RCBಗೆ ಸಂಕಷ್ಟ ಎದುರಾಗಿದೆ. 

ಬೆಂಗಳೂರು(ಏ.30): ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದಿರುವ  ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿದೆ. ಆದರೆ ಈ ಆವೃತ್ತಿಯಲ್ಲಿ 10ನೇ ಟಾಸ್ ಸೋತ ಬೆನ್ನಲ್ಲೇ RCBಗೆ ನಿರಾಸೆಯಾಗಿದೆ. ಟಾಸ್ ಮುಗಿಯುತ್ತಿದ್ದಂತೆ ತುಂತುರು ಮಳೆ ಸುರಿಯುತ್ತಿದೆ. ಹೀಗಾಗಿ ಪಂದ್ಯ ಆರಂಭ ವಿಳಂಭವಾಗಲಿದೆ. ಇಷ್ಟೇ ಅಲ್ಲ ಮೊದಲು ಬ್ಯಾಟಿಂಗ್ ಕೂಡ ಕಷ್ಟವಾಗಲಿದೆ.

 

 

ಇಂದಿನ ಪಂದ್ಯಕ್ಕಾಗಿ RCB 2 ಬದಲಾವಣೆ ಮಾಡಲಾಗಿದೆ. ವಾಶಿಂಗ್ಟನ್ ಸುಂದರ್ ಬದಲು ಪವನ್ ನೇಗಿ ಹಾಗೂ ಶಿವಂ ದುಬೆ ಬದಲು ಕುಲ್ವಂತ್ ಕೆಜ್ರೋಲಿಯ ತಂಡ ಸೇರಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 12 ಪಂದ್ಯದಲ್ಲಿ 4 ಗೆಲುವು ಸಾಧಿಸಿದೆ. ಇನ್ನುಳಿದ 8 ಪಂದ್ಯಗಳನ್ನು ಸೋತು 8ನೇ ಸ್ಥಾನದಲ್ಲಿದೆ. ಇನ್ನು ರಾಜಸ್ಥಾನ ಹೋರಾಟ ಇದಕ್ಕಿಂತ ಭಿನ್ನವಾಗಿಲ್ಲ. ಆಡಿದ 12ರಲ್ಲಿ 5 ಗೆಲುವು ಸಾಧಿಸೋ ಮೂಲಕ 7ನೇ ಸ್ಥಾನದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಚಿನ್ ತೆಂಡೂಲ್ಕರ್ ಮತ್ತೊಂದು ದಾಖಲೆ ನುಚ್ಚುನೂರು; ಕೇವಲ 521 ಇನ್ನಿಂಗ್ಸ್‌ನಲ್ಲೇ ಹೊಸ ದಾಖಲೆ ಬರೆದ ಜೋ ರೂಟ್..! ಆದ್ರೂ ಕೊಹ್ಲಿ ರೆಕಾರ್ಡ್ ಸೇಫ್
BCCI Chief Selector: ಅಜಿತ್ ಅಗರ್ಕರ್ ರಾಜೀನಾಮೆ ಖಚಿತ..! ಹೊಸ ಅಪ್‌ಡೇಟ್ ಕೊಟ್ಟ ಬಿಸಿಸಿಐ, ಯಾರಾಗ್ತಾರೆ ಮುಂದಿನ ಚೀಫ್ ಸೆಲೆಕ್ಟರ್?