IPL 2019: ಭರವಸೆ ಮೂಡಿಸಿರುವ RCB ಡೆತ್ ಬೌಲರ್ಸ್!

Published : Mar 20, 2019, 12:02 PM ISTUpdated : Mar 20, 2019, 02:33 PM IST
IPL 2019: ಭರವಸೆ ಮೂಡಿಸಿರುವ RCB ಡೆತ್ ಬೌಲರ್ಸ್!

ಸಾರಾಂಶ

ಐಪಿಎಲ್ ಕಣದಲ್ಲಿರುವ 8 ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಅತ್ಯುತ್ತಮ ಡೆತ್ ಬೌಲಿಂಗ್ ಲೈನ್ ಹೊಂದಿದೆ. ಹಾಗಂತೆ ಈ ಬಾರಿಯ  RCB ಕೂಡ ಬಲಿಷ್ಠವಾಗಿದೆ.  RCB ತಂಡದ ಡೆತ್ ಬೌಲಿಂಗ್ ಮಾಡೋ ಸಾಮರ್ಥ್ಯ ಯಾರಿಗಿದೆ. ಯಾರು ಅತ್ಯುತ್ತಮ ಎಕಾನಮಿಲ್ಲಿ ಅಂತಿಮ ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಇಲ್ಲಿದೆ ವಿವರ.

ಬೆಂಗಳೂರು(ಮಾ.20): 12ನೇ ಆವೃತ್ತಿಯಲ್ಲಿಐಪಿಎಲ್ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಸಜ್ಜಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿರುವ RCB ತಂಡದ ಆಯ್ಕೆಗೆ ಅಂತಿಮ ಕಸರತ್ತು ನಡೆಸುತ್ತಿದೆ. ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿರುವ RCB ತಂಡಕ್ಕೆ ಡೆತ್ ಬೌಲಿಂಗ್ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ ಈ ಆವೃತ್ತಿಯಲ್ಲಿ ಇದಕ್ಕೆ ಉತ್ತರ ಸಿಗೋ ಸಾಧ್ಯತೆಗಳಿವೆ.

ಇದನ್ನೂ ಓದಿ: ಕೊಹ್ಲಿ, ABD ಹೊರತು ಪಡಿಸಿದ್ರೆ RCBಯಲ್ಲಿದ್ದಾರೆ ಮೂವರು ಗೇಮ್ ಚೇಂಜರ್ಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ 6 ವೇಗಿಗಳಿದ್ದಾರೆ. ಇಬ್ಬರು ಪ್ರಮುಖ ವಿದೇಶಿ ವೇಗಿಗಳು RCB ತಂಡದ ಬಲ ಹೆಚ್ಚಿಸಿದೆ.   ನೌಥನ್ ಕೌಲ್ಟರ್ ನೈಲ್, ಟಿಮ್ ಸೌಥಿ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಕುಲ್ವಂತ್ ಕೆಜ್ರೋಲಿಯಾ ಒಟ್ಟು 6 ವೇಗಿಗಳು RCB ಬೌಲಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇದರಲ್ಲಿ ಒರ್ವ ವಿದೇಶಿ ಹಾಗೂ ಇನ್ನಿಬ್ಬರು ಭಾರತೀಯ ವೇಗಿಗಳು ಆಡೋ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ 6 ವೇಗಿಗಳ ಪೈಕಿ ಮೂವರು ವೇಗಿಗಳು ಟಿ20 ಎಕಾನಮಿ ರೇಟಿಂಗ್ ಕೊಂಚ ಸಮಾಧಾನ ತರುವಂತಿದೆ.

ಇದನ್ನೂ ಓದಿ: IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!

RCB ಡೆತ್ ಬೌಲರ್ಸ್:

ಬೌಲರ್ಸ್ಎಕಾನಮಿ
ನಥನ್ ಕೌಲ್ಟರ್ ನೈಲ್7.79
ಉಮೇಶ್ ಯಾದವ್8.20
ಟಿಮ್ ಸೌಥಿ8.29

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇವಲ ₹10 ಲಕ್ಷ ಕೊಡಿ, ಮೆಸ್ಸಿ ಜತೆಗೆ ಒಂದು ಫೋಟೋ ತೆಗೆಸಿಕೊಳ್ಳಿ! ಕೇವಲ 100 ಮಂದಿಗಷ್ಟೇ ಈ ಚಾನ್ಸ್!
ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಸ್ವಾಗತಕ್ಕೆ ಕೋಲ್ಕತಾ ಸಜ್ಜು! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್