
ದುಬೈ(ಮಾ.20): ಟಿ10 (10 ಓವರ್) ಕ್ರಿಕೆಟ್ ಟೂರ್ನಿಗೆ ಮುಂದಿನ 5 ವರ್ಷಗಳ ಕಾಲ ಅಬುಧಾಬಿಯ ಝಾಯೆದ್ ಕ್ರೀಡಾಂಗಣದಲ್ಲಿ ತವರಾಗಲಿದೆ. ಅಬುಧಾಬಿ ಕ್ರಿಕೆಟ್ (ಎಡಿಸಿ), ಅಬುಧಾಬಿ ಕ್ರೀಡಾ ಸಮಿತಿ ಹಾಗೂ ಪ್ರವಾಸೋದ್ಯಮ ಹಾಗೂ ಸಾಂಸ್ಕೃತಿಕ ಇಲಾಖೆಯ ಸಹಯೋಗದೊಂದಿಗೆ ಟಿ10 ಟೂರ್ನಿಯ ಆಯೋಜಕರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಇದನ್ನೂ ಓದಿ: ಟೀಕಾಕಾರರ ಕಾಲೆಳೆದ ಗೌತಮ್ ಗಂಭೀರ್
ಕಿರು ಮಾದರಿಯ ಕ್ರಿಕೆಟ್ ಟೂರ್ನಿ ಕೇವಲ ಝಾಯೆದ್ ಕ್ರೀಡಾಂಗಣದಲ್ಲಿ ಮಾತ್ರ ನಡೆಯಲಿದೆ. 2019ರಿಂದ ಒಪ್ಪಂದ ಅವಧಿ ಆರಂಭಗೊಳ್ಳಲಿದೆ. 2017ರಲ್ಲಿ ಮೊದಲ ಆವೃತ್ತಿ ನಡೆದಿತ್ತು. ಆದರೆ ಶಾರ್ಜಾದಲ್ಲಿ ಆಯೋಜನೆಯಾಗಿದ್ದ ಈ ಟೂರ್ನಿ ಕ್ರೀಡಾಂಗಣ ಸಮಸ್ಯೆ, ಆಟಗಾರರ ಒಪ್ಪಂದ ಸೇರಿದಂತೆ ಹಲವು ಸಮಸ್ಯೆ ಎದುರಿಸಿತ್ತು. ಹೀಗಾಗಿ 2018ರಲ್ಲಿ ಟೂರ್ನಿ ಆಯೋಜನೆಗೆ ಸಂಕಷ್ಟ ಎದುರಾಗಿತ್ತು.
ಇದನ್ನೂ ಓದಿ: ಅಜಿಂಕ್ಯ ರಹಾನೆ - ವಿರಾಟ್ ಕೊಹ್ಲಿ ಹೇಳಿಕೆಯಲ್ಲಿ ಗೊಂದಲ!
ನೂತನ ಒಪ್ಪಂದ ಪ್ರಕರಾ ಟಿ20 ಕ್ರಿಕೆಟ್ ಆಯೋಜಕರು 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಸಮಸ್ಯೆ ಪರಿಹರಿಸಿದ್ದಾರೆ. ಹೀಗಾಗಿ ಈ ವರ್ಷದಿಂದ ಸರಾಗವಾಗಿ ಟಿ20 ಕ್ರಿಕೆಟ್ ಟೂರ್ನಿ ಆಯೋಜನೆಯಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.