ಮಳೆಗೆ ರದ್ದಾಯ್ತು RCB Vs RR ಮ್ಯಾಚ್- ಟೂರ್ನಿಯಿಂದ ಹೊರಬಿದ್ದ ಕೊಹ್ಲಿ ಬಾಯ್ಸ್!

Published : May 01, 2019, 12:35 AM ISTUpdated : May 01, 2019, 12:37 AM IST
ಮಳೆಗೆ ರದ್ದಾಯ್ತು RCB Vs RR ಮ್ಯಾಚ್- ಟೂರ್ನಿಯಿಂದ ಹೊರಬಿದ್ದ ಕೊಹ್ಲಿ ಬಾಯ್ಸ್!

ಸಾರಾಂಶ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ 5 ಓವರ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಗೆಲುವಿಗೆ 63 ರನ್ ಟಾರ್ಗೆಟ್ ಪಡೆದ ರಾಜಸ್ಥಾನಕ್ಕೆ ಮಳೆ ಅಡ್ಡಪಡಿಸಿತು. ಹೀಗಾಗಿ ಪಂದ್ಯ ರದ್ದುಗೊಂಡಿತು. 

ಬೆಂಗಳೂರು(ಏ.30):ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ 12ನೇ ಆವೃತ್ತಿ ಐಪಿಎಲ್ ಟೂರ್ನಿಯ ರೋಚಕ ಪಂದ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  ಮಳೆಯಿಂದಾಗಿ 5 ಓವರ್‌ಗೆ ಸೀಮಿತವಾಗಿದ್ದ ಪಂದ್ಯ ಮತ್ತೆ ಮಳೆ ಕಾಟಕ್ಕೆ ತುತ್ತಾಯಿತು. ಹೀಗಾಗಿ ಪಂದ್ಯ ರದ್ದುಗೊಂಡಿದೆ. ಈ ಮೂಲಕ ಉಭಯ ತಂಡಗಳು ತಲಾ 1 ಅಂಕ ಸಂಪಾದಿಸಿತು. ಇಷ್ಟೇ ಅಲ್ಲ ಈ ಮೂಲಕ RCB 12ನೇ ಆವೃತ್ತಿ ಐಪಿಎಲ್ ಟೂರ್ನಿಯಿಂದ ಹೊರಬಿತ್ತು.

ಗೆಲುವಿಗೆ 63 ರನ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್, ಮೊದಲ ಎಸೆವನ್ನೇ ಸಿಕ್ಸರ್ ಗಟ್ಟಿತು. 2ನೇ ಎಸೆತದಲ್ಲಿ ಸಂಜು ಸಾಮ್ಸನ್ ಬೌಂಡರಿ ಬಾರಿಸಿ ಅಬ್ಬರಿಸಿದರು. ಸಾಮ್ಸನ್‌ಗೆ ಲಿಯಾಮ್ ಲಿವಿಂಗ್‌ಸ್ಟೋನ್ ಉತ್ತಮ ಸಾಥ್ ನೀಡಿದರು.  ರಾಜಸ್ಥಾನ ಗೆಲುವಿಗೆ ಅಂತಿಮ 12 ಎಸೆತದಲ್ಲಿ 23 ರನ್ ಬೇಕಿತ್ತು.

ಸಂಜು ಸಾಮ್ಸನ್ 28 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಮತ್ತೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಪಂದ್ಯವನ್ನು ರದ್ದುಪಡಿಸಲಾಯಿತು. ಹೀಗಾಗಿ 2 ಅಂಕ ಹಂಚಿಕೊಂಡರು. ಇದೀಗ RCB ಟೂರ್ನಿಯಿಂದ ಹೊರಬಿದ್ದಿದೆ. ಉಳಿದಿರುವ ಇನ್ನೊಂದು ಪಂದ್ಯದಲ್ಲಿ ಗೆಲುವು ಸಾಧಿಸಿ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳುವುದೊಂದೇ ಆರ್‌ಸಿಬಿ ಮುಂದಿರುವ ದಾರಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!