5 ಓವರ್ ಪಂದ್ಯ: ರಾಜಸ್ಥಾನಕ್ಕೆ 63 ರನ್ ಟಾರ್ಗೆಟ್ ನೀಡಿದ RCB!

Published : Apr 30, 2019, 11:58 PM IST
5 ಓವರ್ ಪಂದ್ಯ: ರಾಜಸ್ಥಾನಕ್ಕೆ 63 ರನ್ ಟಾರ್ಗೆಟ್  ನೀಡಿದ RCB!

ಸಾರಾಂಶ

ಮಳೆಯಿಂದಾಗಿ 5 ಓವರ್ ಸೀಮಿತಗೊಳಿಸಲಾಗಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 62 ರನ್ ಸಿಡಿಸಿದೆ. ಈ ಮೂಲಕ ರಾಜಸ್ಥಾನಕ್ಕೆ 63 ರನ್ ಟಾರ್ಗೆಟ್ ನೀಡಿದೆ.

ಬೆಂಗಳೂರು(ಏ.30): ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ ಐಪಿಎಲ್ ಟೂರ್ನಿಯ ಮಹತ್ವದ ಪಂದ್ಯಕ್ಕೂ ಅಡ್ಡಿಯಾಯಿತು. ರಾಜಸ್ಥಾನ ರಾಯಲ್ಸ್ ವಿರುದ್ಧದ 5 ಓವರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್ ನಷ್ಟಕ್ಕೆ 62 ರನ್ ಸಿಡಿಸಿದೆ. 

ಮಳೆಗೂ ಮೊದಲೇ ನಡೆದ ಟಾಸ್‌ ಪ್ರಕ್ರಿಯೆ ನಡೆದಿತ್ತು. ಟಾಸ್ ಸೋತು ಬ್ಯಾಟಿಂಗ್ ಇಳಿದ RCB, ಈ ಆವೃತ್ತಿಯಲ್ಲಿ ಕಾಣದಂತ ಆರಂಭ ಪಡೆಯಿತು. ಆದರೆ ಅಷ್ಟೇ ವೇಗದಲ್ಲಿ ಕುಸಿತ ಕಂಡಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೊದಲ ಎಸೆತದಿಂದಲೇ ಸಿಕ್ಸರ್ ಅಬ್ಬರ ಆರಂಭಿಸಿದರು. ಕೊಹ್ಲಿ 7 ಎಸೆತದಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 25 ರನ್ ಸಿಡಿಸಿ ಔಟಾದರು.

ಕೊಹ್ಲಿ ಔಟಾದ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ 10 ರನ್ ಸಿಡಿಸಿ ನಿರ್ಗಮಿಸಿದರು. ಮರು ಎಸೆತದಲ್ಲೇ ಮಾರ್ಕಸ್ ಸ್ಟೊಯ್ನಿಸ್ ವಿಕೆಟ್ ಕಬಳಿಸೋ ಮೂಲಕ ಕನ್ನಡಿಗ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಈ ಮೂಲಕ 12ನೇ ಆವೃತ್ತಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

ಗುರಕೀರತ್ ಸಿಂಗ್ ಮಾನ್ 6 ರನ್ ಸಿಡಿಸಿ ಔಟಾದರು. ಪಾರ್ಥೀವ್ ಪಟೇಲ್ 8 ರನ್ ಸಿಡಿಸಿ ನಿರ್ಗಮಿಸಿದರು. ಪವನ್ ನೇಗಿ 4 ರನ್ ಸಿಡಿಸಿ ಔಟಾದರು. ಈ  ಮೂಲಕ ನಿಗಧಿತ 5 ಓವರ್‌ಗಳಲ್ಲಿ  RCB  7 ವಿಕೆಟ್ ನಷ್ಟಕ್ಕೆ 62 ರನ್ ಸಿಡಿಸಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ; ಈ ದಾಖಲೆ ಮುರಿಯಲು ಕೊಹ್ಲಿ, ಬಟ್ಲರ್‌ಗೂ ಸಾಧ್ಯವಿಲ್ಲ!
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್; ಸಂಗಕ್ಕಾರ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ!