
ಮುಂಬೈ(ಏ.10): ಗೆಲುವಿನ ಲಯದಲ್ಲಿರುವ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗುತ್ತಿದೆ. ಸಮಬಲರ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಇದನ್ನೂ ಓದಿ: ಅಶ್ವಿನ್ ಮಂಕಡಿಂಗ್ ಟ್ರಿಕ್: ಕ್ರೀಸ್ ತೊರೆಯದ ವಾರ್ನರ್
ಮುಂಬೈ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಇಂಜುರಿಯಿಂದ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಕೀರನ್ ಪೊಲಾರ್ಡ್ ನಾಯಕತ್ವ ವಹಿಸಿದ್ದಾರೆ. ರೋಹಿತ್ ಬದಲು ಸಿದ್ದೇಶ್ ಲಾಡ್ ತಂಡ ಸೇರಿಕೊಂಡಿದ್ದಾರೆ . ಇನ್ನು ಪಂಜಾಬ್ ತಂಡದಲ್ಲಿ ಕನ್ನಡಿ ಮಯಾಂಕ್ ಅಗರ್ವಾಲ್ ಬದಲು ಮತ್ತೊರ್ವ ಕನ್ನಡಿಗ ಕರುಣ್ ನಾಯರ್ ತಂಡ ಸೇರಿಕೊಂಡಿದ್ದಾರೆ. ಮಜೀಬ್ ಯುಆರ್ ರಹಮಾನ್ ಬದಲು ಹಾರ್ಡಸ್ ಕಮ್‌ಬ್ಯಾಕ್ ಮಾಡಿದ್ದಾರ.
ಮುಂಬೈ ಇಂಡಿಯನ್ಸ್ ಆಡಿದ 5 ಪಂದ್ಯದಲ್ಲಿ 3 ರಲ್ಲಿ ಗೆಲುವು 2 ರಲ್ಲಿ ಸೋಲು ಕಂಡಿದೆ. ಈ ಮೂಲಕ 6 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇಂದು ಪಂಜಾಬ್ ತಂಡವನ್ನು ಮಣಿಸೋ ವಿಶ್ವಾಸದಲ್ಲಿದೆ. ಇತ್ತ ಪಂಜಾಬ್ 6 ರಲ್ಲಿ 4 ಪಂದ್ಯ ಗೆದ್ದು 2 ರಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.